ಉಡುಪಿ ಜಿಲ್ಲೆಯ ಎಲ್ಲಾ ಭಾಗಗಳ ಬಿಲ್ಲವರು ಜೊತೆ ಸೇರಿ ಜಿಲ್ಲಾಧಿಕಾರಿಯವರಿಗೆ ಮನವಿ

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ರಾಜ್ಯ ಸರಕಾರ ಮತ್ತೆ ಮುಗ್ಗರಿಸಿದ್ದು, ಪರಿಷ್ಕರಣೆಯ ವೇಳೆಯಲ್ಲಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕೈ ಬಿಟ್ಟು, ಕನ್ನಡ ಪಠ್ಯದೊಳಗೆ‌ ಸೇರ್ಪಡೆಗೊಳಿಸಿದ್ದು ಇದು ಸಮಾಜ ಭಾಂದವರಿಗೆ‌ ಅತೀವ ನೋವನ್ನುಂಟು ಮಾಡಿದೆ.

ಈ ವಿಚಾರದ ಬಗ್ಗೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಸಮಾಜದ ಸಂಘ ಸಂಸ್ಥೆಗಳು ಮತ್ತು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ನಡೆಸಿದ ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು.

ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ ಬಿಲ್ಲವರು ಸಭೆಯಲ್ಲಿ ಸರಕಾರದ ನಿಲುವನ್ನು ವಿರೋಧಿಸಲಾಯಿತು.

ಈ ಕುರಿತಾಗಿ ದಿನಾಂಕ 08.07.2022 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ಕಾಯಿನ್ ( coin ) ಸರ್ಕಲ್ ನಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಭಾಗಗಳ ಬಿಲ್ಲವರು ಜೊತೆ ಸೇರಿ, ಅಲ್ಲಿಂದ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಪಠ್ಯ ಪರಿಷ್ಕರಣೆಯಲ್ಲಾದ ಬದಲಾವಣೆಯನ್ನು ಸರಿಪಡಿಸಿ, ಹಿಂದಿನಂತೆ ಸಮಾಜ ವಿಜ್ಞಾನ ಪಠ್ಯ ಕ್ರಮದಲ್ಲೇ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾಠವನ್ನು ಸೇರ್ಪಡೆಗೊಳಿಸುವಂತೆ ಮನವಿ ಮಾಡಲಾಗುವುದು.

 
 
 
 
 
 
 
 
 

Leave a Reply