Janardhan Kodavoor/ Team KaravaliXpress
26 C
Udupi
Monday, May 17, 2021

ಜಗತ್ತಿನ ಶ್ರೀಮಂತ ಬಿಲ್ ಗೇಟ್ಸ್ ದಂಪತಿಗಳು ತಮ್ಮ ದಾಂಪತ್ಯಕ್ಕೆ ಜೀವನಕ್ಕೆ ಅಂತ್ಯ ಹಾಡಿದ್ದಾರೆ

ವಾಷಿಂಗ್ಟನ್: ಜಗತ್ತಿನ ಶ್ರೀಮಂತ ದಂಪತಿ ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ ಗೇಟ್ಸ್ (67)​ ಮತ್ತು ಮಿಲಿಂದಾ ಗೇಟ್ಸ್​ (56) ವಿಚ್ಛೇದನ ಪಡೆದುಕೊಂಡಿದ್ದಾರೆ.‌ಈ ಮೂಲಕ​ 27 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.​ ಸ್ವತಃ ಬಿಲ್​ ಗೇಟ್ಸ್ ತಮ್ಮ ಟ್ವಿಟ್ಟರ್​ ಖಾತೆ ಮೂಲಕ ಘೋಷಿಸಿದ್ದು,​ ಇಂದು ಜಗತ್ತಿಗೆ ಅತ್ಯಗತ್ಯವಾಗಿ ಬೇಕಾಗಿರುವ ಆರೋಗ್ಯ ಕ್ಷೇತ್ರದಲ್ಲಿ Bill and milinda foundation ಮೂಲಕ ನಮ್ಮನ್ನು ಅರ್ಪಿಸಿ ಕೊಂಡಿದ್ದೇವೆ. 

ಆದರೆ ನಾವು ನಮ್ಮ ಜೀವನದ ಮುಂದಿನ ಘಟ್ಟದಲ್ಲಿ ದಂಪತಿಯಾಗಿ ಒಟ್ಟಿಗೇ ಮುಂದುವರಿಯುವುದು ಸಾಧ್ಯ ವಾಗದು ಎಂದು ಮನಗಂಡು ಈ ತೀರ್ಮಾನಕ್ಕೆ ಬಂದಿದ್ದೇವೆೆಎಂದು  ಟ್ವೀಟ್ ಮಾಡಿದ್ದಾರೆ.​ 1994 ರಲ್ಲಿ ಗೇಟ್ಸ್ ದಂಪತಿ ಹವಾಯಿಯಲ್ಲಿ ವಿವಾಹವಾಗಿದ್ದರು.

2000 ರಲ್ಲಿ ದಂಪತಿಗಳು Bill and milinda gates ಫೌಂಡೇಶನ್ ಅನ್ನು ಸ್ಥಾಪಿಸಿದ್ದು ಇದರ ಮೂಲಕ ವಿಶ್ವದಾದ್ಯಂತ ಜಾಗತಿಕ ಆರೋಗ್ಯ, ಅಭಿವೃದ್ಧಿ ಮತ್ತು ಶಿಕ್ಷಣ, ಹವಾಮಾನ ಬದಲಾವಣೆ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಧನ ಸಹಾಯ ಮಾಡಿದ್ದಾರೆ.
ವಿಚ್ಛೇದನ ಪಡೆದರೂ ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಷನ್​ನಲ್ಲಿ ನಾವು ಒಟ್ಟಿಗೆ ನಮ್ಮ ಸೇವೆ ಮುಂದುವರಿಸುತ್ತೇವೆ ಎಂದು ಗೇಟ್ಸ್ ಹೇಳಿದ್ದಾರೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ತೌಕ್ತೆ ಚಂಡಮಾರುತದ ಪರಿಣಾಮ ಕಾಪು  ಪರಿಸರದಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಭೇಟಿ 

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಶನಿವಾರದಂದು ತೌಕ್ತೆ ಚಂಡಮಾರುತದ ಪರಿಣಾಮ ಕಾಪು  ಪರಿಸರದಲ್ಲಿ ಹಾನಿಗೊಳಗಾದ ಪರಿಸರಕ್ಕೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.  ಹಾನಿಗೊಳಗಾದ ಪ್ರದೇಶದ ಕುರಿತು...

ಸೋದೆ, ಶಿರೂರು ಉಭಯ ಶ್ರೀಗಳಿಂದ ಪಲಿಮಾರು ಮೂಲ ಮಠಕ್ಕೆ ಭೇಟಿ 

ಶೀರೂರು ಮಠಕ್ಕೆ ಪಟ್ಟಾಭಿಷಿಕ್ತರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸೋದೆ ಶ್ರೀವಿಶ್ವ ವಲ್ಲಭ ತೀರ್ಥರ ಜೊತೆಯಾಗಿ ಪಲಿಮಾರು ಮೂಲಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ...

ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿದೆ ಪ್ರಗತಿಕಾರ್ಯ

ಉಡುಪಿ: ಜಿಲ್ಲೆಯ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಮೊದಲ ಹಂತದಲ್ಲಿ ಶ್ರೀ ಮಹಾಗಣಪತಿಯ ಗುಡಿ ತೀರ್ಥಮಂಟಪಗಳನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ .‌ ಸೀಮಿತ ಅವಧಿಯೊಳಗೆ ಕಾರ್ಯಗಳನ್ನು...

​ಕಾಪು ಸಮುದ್ರ ಮಧ್ಯೆ ಸಿಲುಕಿಕೊಂಡಿರುವ 9 ಕಾರ್ಮಿಕರ ರಕ್ಷಣೆಗೆ ಪ್ರಧಾನಿ, ರಕ್ಷಣಾ ಸಚಿವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮನವಿ

ಭಾರತ ಸರಕಾರದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರೇ, ಉಡುಪಿ ಜಿಲ್ಲೆಯ ಕಾಪು ಸಮುದ್ರ ತೀರದಿಂದ ಸಮುದ್ರದ ಮಧ್ಯದಲ್ಲಿ ಈ ಬಡಪಾಯಿ ಕಾರ್ಮಿಕರು ಸಿಕ್ಕಿಬಿದ್ದಿರುತ್ತಾರೆ, ಸಮುದ್ರ...
error: Content is protected !!