ಬಾವಿಗೆ ಬಿದ್ದ ವೃದ್ಧೆಯನ್ನು ರಕ್ಷಿಸಿದ ಪಿಎಸ್ಐ

 

ಉಡುಪಿ: ಬಾವಿಗೆ ಬಿದ್ದ ವೃದ್ಧೆಯನ್ನು ನಗರ ಠಾಣೆಯ ಎಸ್ಐ ರಕ್ಷಿಸಿದ ಘಟನೆ ಮಾರ್ಪಳ್ಳಿಯಲ್ಲಿ ನಡೆದಿದೆ.
ಕುಕ್ಕಿಕಟ್ಟೆಯ ವೃದ್ಧೆಯೋರ್ವರು ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದು, ಜೀವನ್ಮರಣ ಸ್ಥಿತಿಯಲ್ಲಿದ್ದರು. ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಗಸ್ತಿನಲ್ಲಿದ್ದ ಎಸ್ಐಗೆ ವಾಕಿ ಮೂಲಕ ಸಂದೇಶ ಸಿಕ್ಕಿದ ತಕ್ಷಣ ಉಡುಪಿ ನಗರ ಠಾಣೆಯ ಪಿಎಸ್ಐ ಸದಾಶಿವ ರಾ. ಗವ ರೋಜಿ ಕೂಡಲೇ ಸ್ಥಳಕ್ಕಾಗಮಿಸಿದರು.

ಅದಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಗಿಳಿಯಲು ಸಿದ್ಧತೆ ಮಾಡುತ್ತಿದ್ದರು. ಎಸ್ಐ ಸದಾಶಿವ, ವಿನಾಯಕ ಹಾಗೂ ಸ್ಥಳೀಯ ಆಟೋ ಚಾಲಕ ರಾಜೇಶ್ ನಾಯಕ್ ಕೂಡಲೇ ಬಾವಿಗಿಳಿದರು. ವೃದ್ಧೆಗೆ ಹಗ್ಗ ಕಟ್ಟಿ ಮೇಲೆಳೆಯಲಾಯಿತು. ವೃದ್ಧೆ ಆರೋಗ್ಯವಾಗಿದ್ದಾರೆ.

ತುರ್ತು ಜೀವರಕ್ಷಣೆ ಕಾರ್ಯಾಚರಣೆಯಲ್ಲಿ ಸಾಹಸ ಮೆರೆದಿರುವ ಜೀವರಕ್ಷಕರಿಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಶಿರೂರು ಅಭಿನಂದನೆ ಸಲ್ಲಿಸಿದ್ದಾರೆ.

 
 
 
 
 
 
 

Leave a Reply