ಮಣಿಪಾಲ – ಪೆರಂಪಳ್ಳಿ – ಅಂಬಾಗಿಲು ರಸ್ತೆ ಅಗಲೀಕರಣ – ಭೂ ಮಾಲಕರೊಂದಿಗೆ ಶಾಸಕ ರಘುಪತಿ ಭಟ್ ಸಭೆ

ಶಾಸಕ ಕೆ. ರಘುಪತಿ ಭಟ್ ಅವರು ದಿ. 09-11-2020 ರಂದು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಿದರು.ಮಣಿಪಾಲ – ಪೆರಂಪಳ್ಳಿ – ಅಂಬಾಗಿಲು ರಸ್ತೆ ಅಗಲೀಕರಣ ಸಂಬಂಧ ಭೂಸ್ವಾಧೀನ ಪಡಿಸಲು ಟಿ.ಡಿ.ಆರ್. ಪ್ರಕ್ರಿಯೆಗೆ ನೋಟಿಫಿಕೇಶನ್ ಆಗಿರುವಂತೆ ಭೂಸ್ವಾಧೀನದ ಬಗ್ಗೆ ಭೂಮಾಲಕರೊಂದಿಗೆ ಸಭೆ ನಡೆಸಲಾಯಿತು.

ನೆನ್ನೆಯ ದಿನವಿಡೀ ನಡೆದ ಸಭೆಯಲ್ಲಿ 8 ಭೂ ಮಾಲೀಕರೊಂದಿಗೆ ಚರ್ಚಿಸಿದ್ದು, 5 ಮಂದಿ ಒಪ್ಪಿಗೆ ಸೂಚಿಸಿದರು. 3 ಮಂದಿ ಮುಂದಿನ ದಿನಗಳಲ್ಲಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ. ಅನಂತರ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಜಯ ಆಚಾರ್ಯ ಎಂಬುವವರ ಮನೆಯ ಕಂಪೌಂಡ್ ವಾಲ್ ತೆರವುಗೊಳಿಸಬೇಕಾಗಿರುವ ಹಿನ್ನೆಲೆ ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರು ಸ್ಥಳಕ್ಕೆ ಭೇಟಿ ನೀಡಿ ಜಯ ಆಚಾರ್ ಅವರೊಂದಿಗೆ ಚರ್ಚಿಸಿ ಮನವೊಲಿಸಿದರು. ಬಳಿಕ ಕಾಂಪೌಂಡ್ ವಾಲ್ ತೆರವುಗೊಳಿಸಲು ಒಪ್ಪಿಗೆ ಸೂಚಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಭಟ್, ಕಿರಿಯ ಅಭಿಯಂತರರಾದ ಸೋಮನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಸುಮಾ ನಾಯ್ಕ್ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಜಿತೇಶ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply