ಮಣಿಪಾಲ-ಪೆರಂಪಳ್ಳಿ-ಅಂಬಾಗಿಲು ರಸ್ತೆ ಅಗಲೀಕರಣ – ಭೂ ಮಾಲಕರೊಂದಿಗೆ ಶಾಸಕ ರಘುಪತಿ ಭಟ್ ಸಭೆ

ಮಣಿಪಾಲ – ಪೆರಂಪಳ್ಳಿ – ಅಂಬಾಗಿಲು ರಸ್ತೆ ಅಗಲೀಕರಣ ಸಂಬಂಧ ಭೂಸ್ವಾಧೀನ ಪಡಿಸಲು ಟಿ.ಡಿ.ಆರ್. ಪ್ರಕ್ರಿಯೆಗೆ ನೋಟಿಫಿಕೇಶನ್ ಆಗಿರುವಂತೆ ಭೂಸ್ವಾಧೀನದ ಬಗ್ಗೆ ಭೂಮಾಲಕರೊಂದಿಗೆ ಶಾಸಕ ಕೆ. ರಘುಪತಿ ಭಟ್ ಅವರು  ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಿದರು.​ ದಿನವಿಡೀ ನಡೆದ ಸಭೆಯಲ್ಲಿ 32 ಭೂ ಮಾಲೀಕರೊಂದಿಗೆ ಚರ್ಚಿಸಿದ್ದು, 27 ಮಂದಿ ಒಪ್ಪಿಗೆ ಸೂಚಿಸಿ ದರು. 5 ಮಂದಿ ಮುಂದಿನ ದಿನಗಳಲ್ಲಿ ಅಭಿಪ್ರಾಯ ತಿಳಿಸುವುದಾಗಿ ಹೇಳಿರುತ್ತಾರೆ.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಉಡುಪಿ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್, ಲೋಕೋ ಪಯೋಗಿ ಇಲಾಖೆ  ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಭಟ್, ಕಿರಿಯ ಅಭಿಯಂತರರಾದ ಸೋಮ ನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಜಿತೇಶ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಕಿಶೋರ್ ಕುಮಾರ್, ದಿನಕರ್ ಪೂಜಾರಿ, ಸುಮಾ ನಾಯ್ಕ್, ಉಪಸ್ಥಿತರಿದ್ದರು.

Leave a Reply