ರಘುಪತಿ ಭಟ್ ಮಂಜೂರುಗೊಳಿಸಿದ ರೂ.74.97 ಕೋಟಿ ಕಾಮಗಾರಿ

ನೀಲಾವರ ಭಾಗಕ್ಕೆ ಶಾಸಕ ರಘುಪತಿ ಭಟ್ ಮಂಜೂರುಗೊಳಿಸಿದ ರೂ.74.97 ಕೋಟಿ ಕಾಮಗಾರಿಗಳ ಉದ್ಘಾಟನೆ, ಗುದ್ದಲಿ ಪೂಜೆ, ಪರಿಶೀಲನೆ – ಅಹವಾಲು ಸ್ವೀಕಾರ

ಉಡುಪಿ ವಿಧಾನಸಭಾ ಕ್ಷೇತ್ರದ ನೀಲಾವರ ಗ್ರಾಮ ಪಂಚಾಯತ್ ಗೆ ಇಂದು ದಿನಾಂಕ 21-11-2022 ರಂದು ಭೇಟಿ ನೀಡಿದ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಈ ಭಾಗದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ವಿವಿಧ ಕಾಮಗಾರಿಗಳಿಗೆ ಮಂಜೂರುಗೊಳಿಸಿದ ರೂ.74.97 ಕೋಟಿ ಮೊತ್ತದಲ್ಲಿ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ, ಹೊಸ ಕಾಮಗಾರಿ ಗಳಿಗೆ ಗುದ್ದಲಿ ಪೂಜೆ, ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಮಹಿಷಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಮಧ್ಯಸ್ಥರಬೆಟ್ಟು ಶಾರದ ಸಭಾಭವನದ ಹತ್ತಿರ, ಮಧ್ಯಸ್ಥರ ಬೆಟ್ಟು ಗಣಪತಿ ನಾಯ್ಕರ ಮನೆ ಹತ್ತಿರ, ಮಧ್ಯಸ್ಥರಬೆಟ್ಟು ಮಹೇಶ್ ಪೂಜಾರಿ ಮನೆ ಹತ್ತಿರ, ನೀಲಾವರ ಕೋಡಿ ವಿಠಲ್ ದೇವಾಡಿಗರ ಮನೆಯ ಹತ್ತಿರ ಗುದ್ದಲಿ ಪೂಜೆ ನೆರವೇರಿಸಿದರು.

ನೀಲಾವರ ಗುಡ್ಡೆ ಮಂಜುನಾಥ ನಾಯ್ಕರ ಅಂಗಡಿ ಹತ್ತಿರ ರಸ್ತೆ ಉದ್ಘಾಟನೆ. ಬಾವಲಿ ಕುದ್ರು ರಸ್ತೆ ವೀಕ್ಷಣೆ. ಯಲ್ಲಂಪಳ್ಳಿ ವಿಷ್ಣುಮೂರ್ತಿ ದೇವಸ್ಥಾನ ರಸ್ತೆ ವೀಕ್ಷಣೆ ಬಳಿಕ ನೀಲಾವರ ದೇವಸ್ಥಾನದ ರಥಬೀದಿ ಯಾತ್ರಿ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.

ನೀಲಾವರ ಭಾಗದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಕಳೆದ 2018 ರಿಂದ ಈವರೆಗೆ ವಿವಿಧ ಇಲಾಖೆಗಳಿಂದ ಮಂಜೂರುಗೊಳಿಸಿದ ರೂ. 74.97 ಕೋಟಿ ಮೊತ್ತದ ಅನುದಾನದಲ್ಲಿ ಈಗಾಗಲೇ ರೂ. 23.00 ಕೋಟಿ ಮೊತ್ತದ ಕಾಮಗಾರಿಗಳು ಪೂರ್ಣಗೊಂಡು ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದೆ.

ಈ ಭಾಗದ ಪ್ರಮುಖ ಕಾಮಗಾರಿಗಳು 1. ನೀಲಾವರ ಪಂಚಾಯತ್ ಕಛೇರಿ ಬದಿಯಿಂದ ನೀಲಾವರ ಮಾರ್ಕೊಡಿ ಮೂಲಕ ಎಲ್ಲಂಪಳ್ಳಿ ದೀಪನಗುಡ್ಡೆ ಸಂಪರ್ಕ ರಸ್ತೆ ಅಭಿವೃದ್ಧಿ ರೂ. 2.00 ಕೋಟಿ 2. ಕುಂಜಾಲು – ನೀಲಾವರ ಗುಡ್ಡೆ ಸಂಪರ್ಕ ರಸ್ತೆ ಅಭಿವೃದ್ಧಿ ರೂ. 2.00 ಕೋಟಿ 3. ಕುಂಜಾಲು – ಜಾರ್ ಜಡ್ಡು ಮಾರ್ಗವಾಗಿ ದೇವಸ್ಥಾನಬೆಟ್ಟು ನೀಲಾವರ ದೇವಸ್ಥಾನ ಸಂಪರ್ಕ ರಸ್ತೆ ಅಭಿವೃದ್ಧಿ ರೂ. 8.55 ಕೋಟಿ 4. ನೀಲಾವರ ಬೆನಗಲ್ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿ ರೂ. 4.31 ಕೋಟಿ 5. ಮಧ್ಯಸ್ಥರ ಬೆಟ್ಟು ರಸ್ತೆ ಅಭಿವೃದ್ಧಿ ರೂ. 50.00 ಲಕ್ಷ, 6. ನೀಲಾವರ ಎಲ್ಲಂಪಲ್ಲಿ ಪುತ್ರಾಯರ ರಸ್ತೆ ಅಭಿವೃದ್ಧಿ ರೂ. 25.00 ಲಕ್ಷ, 7. ನೀಲಾವರ ಎಲ್ಲಂಪಲ್ಲಿ ವಿಷ್ಣುಮೂರ್ತಿ ದೇವಸ್ಥಾನ ರಸ್ತೆ ಅಭಿವೃದ್ಧಿ ರೂ. 40.00 ಲಕ್ಷ, 8. ನೀಲಾವರ ದೇವಾಡಿಗರಬೆಟ್ಟು ರಸ್ತೆ ಅಭಿವೃದ್ಧಿ ರೂ. 50.00 ಲಕ್ಷ, 9. ನೀಲಾವರ ಪುತ್ರಾಯರ ಮನೆ ರಸ್ತೆ ಅಭಿವೃದ್ಧಿ ರೂ. 25.00 ಲಕ್ಷ,

10. ನೀಲಾವರ ಬಾವಲಿ ಕುದ್ರು ರಸ್ತೆ ಅಭಿವೃದ್ಧಿ ರೂ. 50.00 ಲಕ್ಷ, 11. ನೀಲಾವರ ಕೆಳಕುಂಜಾಲು ಹೇಮಾ ಬಾಸ್ರಿ ಇವರ ಮನೆಯಿಂದ ಭುಜಂಗ ಶೆಟ್ಟಿ ಮನೆವರೆಗೆ ರಸ್ತೆ ಅಭಿವೃದ್ಧಿ ರೂ. 50.00 ಲಕ್ಷ, 12. ನೀಲಾವರ ಎಲ್ಲಂಪಳ್ಳಿ ಪುತ್ರಾಯರ ಮನೆಯಿಂದ ಸೀತಾನದಿಗೆ ಹೋಗುವ ರಸ್ತೆ ಅಭಿವೃದ್ಧಿ ರೂ. 30.00 ಲಕ್ಷ, 13. ನೀಲಾವರ ದೇವಾಡಿಗರ ಬೆಟ್ಟು ಕೋಡಿ ರಸ್ತೆ ಅಭಿವೃದ್ಧಿ ರೂ. 50.00 ಲಕ್ಷ, 14. ನೀಲಾವರ ಕಳುವಿನಬೆಟ್ಟು ಹೆನ್ರಿ ಡಿ ಸೋಜ ಅವರ ಮನೆಯಿಂದ ಫೆಲಿಕ್ಸ್ ಡಿ ಸೋಜಾ ಅವರ ಮನೆವರೆಗೆ ರಸ್ತೆ ಅಭಿವೃದ್ಧಿ ರೂ. 40.00 ಲಕ್ಷ, 15.ನೀಲಾವರ ಸಾಯಬ್ರ ಕುದ್ರುವಿನಿಂದ ರಾಮಣ್ಣ ಕುದ್ರುವರೆಗೆ ರಸ್ತೆ ಅಭಿವೃದ್ಧಿ ರೂ. 20.00 ಲಕ್ಷ,

16. ನೀಲಾವರ ಕೆಳಕುಂಜಾಲು ಭುಜಂಗ ಶೆಟ್ಟಿ ಮನೆಯಿಂದ ಕುಂಜಾಲು ಮಟಪಾಡಿ ರಸ್ತೆಗೆ ಸಂಪರ್ಕದ ರಸ್ತೆ ಕಾಂಕ್ರೀಟಿಕರಣ ರೂ. 60.00 ಲಕ್ಷ 17. ಎಲ್ಲಂಪಲ್ಲಿ ದೀಪನ ಗುಡ್ಡೆ ಬಸ್ಸು ನಿಲ್ದಾಣದಿಂದ ಸೀತಾನದಿಗೆ ಹೋಗುವ ರಸ್ತೆ ಅಭಿವೃದ್ಧಿ ರೂ. 50.00 ಲಕ್ಷ, 18. ನೀಲಾವರ ತಡೆಕಲ್ಲು ಸಂತೋಷ ಶೆಟ್ಟಿ ಮನೆ ರಸ್ತೆ ಅಭಿವೃದ್ಧಿ ರೂ. 20.00 ಲಕ್ಷ, ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಳು 1. ನೀಲಾವರ ಭಾಗದಲ್ಲಿ ಉಪ್ಪು ನೀರು ತಡೆ ಅಣೆಕಟ್ಟಿಗೆ ಮರದ ಹಲಗೆ ಬದಲಿಗೆ ಎಫ್. ಆರ್. ಪಿ. ಅಳವಡಿಕೆ ಕಾಮಗಾರಿ ರೂ. 1.50 ಕೋಟಿ, 2. ನೀಲಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನದಿ ದಂಡೆ ಸಂರಕ್ಷಣಾ ಕಾಮಗಾರಿ ರೂ. 5.00 ಕೋಟಿ, 3. ನೀಲಾವರ ಮಧ್ಯಸ್ಥರಬೆಟ್ಟು ಪಾದೆಕಟ್ಟು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ರೂ. 90.00 ಲಕ್ಷ,

4. ರಘುರಾಮ ಮಧ್ಯಸ್ಥರ ಮನೆ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣ ರೂ. 90.00 ಲಕ್ಷ, 5. ನೀಲಾವರದ ಎಳ್ಳಂಪಳ್ಳಿ – ನಡೂರು ಅಡ್ಡಲಾಗಿ ಸೀತಾನದಿಗೆ ಸಂಪರ್ಕ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ರೂ. 35.00 ಕೋಟಿ ಹಾಗೂ ಸಮರ್ಪಕ ಕುಡಿಯುವ ನೀರಿನ ಸರಬರಾಜು ಸಂಬಂಧ ಜಲಜೀವನ್ ಮೆಶೀನ್ ಯೋಜನೆಯಡಿ ರೂ. 5.61 ಕೋಟಿ ಮಂಜೂರಾಗಿದೆ. ಹಾಗೂ ನೀಲಾವರ ಎಳ್ಳಂಪಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಅಭಿವೃದ್ಧಿ ರೂ. 15.00 ಲಕ್ಷ ಮಂಜೂರಾಗಿದೆ.

ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಕುಮಾರ್, ರಾಜ್ಯ ಎಸ್.ಟಿ ಮೋರ್ಚಾದ ಕಾರ್ಯದರ್ಶಿಗಳಾದ ಉಮೇಶ್ ನಾಯ್ಕ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪ್ರತಾಪ್ ಹೆಗ್ಡೆ ಮಾರಾಳಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಕುಲಾಲ್, ಸಚಿನ್ ಪೂಜಾರಿ ಹಾಗೂ ನೀಲಾವರ ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಪಕ್ಷದ ಹಿರಿಯರು, ಪ್ರಮುಖರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply