Janardhan Kodavoor/ Team KaravaliXpress
25.6 C
Udupi
Sunday, July 3, 2022
Sathyanatha Stores Brahmavara

ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ,ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಆಶ್ರಯದಲ್ಲಿ

ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ- 2022

ಡಾ| ಎನ್. ಭಾಸ್ಕರ ಆಚಾರ್ಯ
ಡಾ| ಸಬಿತಾ ಆಚಾರ್ಯ

ಪ್ರತಿಭಾ ಸಂಪನ್ನ ವೈದ್ಯರಾಗಿರುವ ಕುಂದಾಪುರದ ಪ್ರಸಿದ್ದ ಡಾ|| ಎನ್.ಆರ್ ಆಚಾಯ೯ ಸ್ಮಾರಕ ಆಸ್ಪತ್ರೆಯ ಮುಖ್ಯಸ್ತರಾದ
ಡಾII ಎನ್. ಭಾಸ್ಕರ ಆಚಾಯ೯ ರವರು ಪಿ.ಯು.ಸಿ ಯಲ್ಲಿ ಮೈಸೂರು ವಿ.ವಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಉತ್ತೀಣ೯ರಾಗಿದ್ದು, ಹೆಮ್ಮೆಯ ವಿಷಯ.
1979 ರಿಂದ ನಿರಂತರವಾಗಿ ವೈದ್ಯಕೀಯ ಸೇವೆಯಲ್ಲಿ ನಿರತರಾಗಿದ್ದಾರೆ.
ಸಮಾಜ ಸೇವೆ ಸಾಹಿತ್ಯ ಕ್ಷೇತ್ರದಲ್ಲಿ ಇವರ ಕೊಡುಗೆ ಅನನ್ಯ.
ಕೋಟೇಶ್ವರ ರೋಟರಿಯ ಅದ್ಯಕ್ಷರಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದವರು ಇವರು. ಪಲಿಮಾರು ಮಠದ ವಿಶ್ವ ಸಂಜೀವಿನಿ ಟ್ರಸ್ಟ್ ಮೂಲಕ ಗ್ರಾಮೀಣ ಭಾಗದ ಬಡ ಜನರಿಗೆ ಆರೋಗ್ಯದ ಸೇವೆ ನೀಡಿದ ಮಹಾನುಭಾವರು.
ಆಚಿ೯ ಎಂಬ ಕಾವ್ಯನಾಮದಲ್ಲಿ 4 ಕಾದಂಬರಿಗಳು, ದ್ವಿಭಾಷೆಯಲ್ಲಿ ರಚಿಸಿದ ಆರೋಗ್ಯ ಮತ್ತು ವಿವಿಧ ವಿಚಾರಗಳ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದಾರೆ.
1980 ರಲ್ಲಿ ಎನ್.ಆರ್.ಎ.ಎಮ್.ಎಚ್ ಪ್ರಕಾಶನ ಸಂಸ್ಥೆ ಸ್ಥಾಪಿಸಿ ಅದರ ಮೂಲಕ 150 ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅಪ೯ಣಿ ಮಾಡಿದ ಸಾಹಿತ್ಯ ಆರಾಧಕರಾಗಿದ್ದಾರೆ.
2011 ರಿಂದ ನಿರಂತರವಾಗಿ ದ್ವಿಭಾಷೆಯಲ್ಲಿ “ಸ್ಥಿತಿಗತಿ ”ತ್ರೈಮಾಸಿಕ ಪತ್ರಿಕೆ ಹೊರತರುತ್ತಿರುವುದು ಅಭಿನಂದನೀಯ. ಸಾಹಿತಿ ಪಾಂಡೇಶ್ವರ ಸೂಯ೯ನಾರಾಯಣ ಚಡಗ ರ ವರ ಹೆಸರಿನಲ್ಲಿ ಚಡಗ ಸಾಹಿತ್ಯ ಪ್ರಶಸ್ತಿ ಸ್ಥಾಪಿಸಿ, ಕಳೆದ 7 ವಷ೯ಗಳಿಂದ ವಷ೯ದ ಉತ್ತಮ ಕಾದಂಬರಿಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸುತ್ಯಾಹ೯.

ಇವರ ಸಾಹಿತ್ಯ ಸೇವೆಗಾಗಿ ಗೊರೂರು ಪ್ರತಿಷ್ಟಾನದ
” ಗೊರೂರು ಪ್ರಶಸ್ತಿ ,ಅದೇ ರೀತಿ ದಕ್ಷಿಣ ಕನ್ನಡಿಗರ ಸಂಘದವರು ಕೊಡ ಮಾಡಿದ ಪರಶುರಾಮ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.
ಹೀಗೆ ಸಾಹಿತ್ಯ’ ಸಮಾಜ ಸೇವೆ ಹಾಗೂ ವೈದ್ಯಕೀಯ ಸೇವೆ ಅಮೂಲ್ಯವಾದದ್ದು, ಇವರ ಪತ್ನಿ ಡಾ| ಸಬಿತಾ ಆಚಾಯ೯ ರವರು ಕೂಡ ಪತಿಯ ಸಾಧನೆಗೆ ತಮ್ಮ ಸಾಥ್ ನೀಡುತ್ತಿದ್ದಾರೆ. ಈ ಅಪರೂಪ ವ್ಯಕ್ತಿತ್ವದ ವೈದ್ಯ ದಂಪತಿಗಳಾದ ಡಾ| ಎನ್ ಭಾಸ್ಕರ ಆಚಾಯ೯ ಮತ್ತು ಡಾ| ಸಬಿತಾ ಆಚಾರ್ಯ ಇವರಿಗೆ ಇದೇ ಬರುವ ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ 2:30ಕ್ಕೆ ನಡೆಯುವ ಸಮಾರಂಭದಲ್ಲಿ
ಗೌರವ ಪುರಸ್ಕಾರ 2022 ನ್ನು ನೀಡಿ ಗೌರವಿಸುತ್ತಿದ್ದೇವೆ.

✒️ ರಾಘವೇಂದ್ರ ಪ್ರಭು ಕರ್ವಾಲು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!