Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ರಾಜ್ಯ ಮಟ್ಟದ ಭಜನಾ ಕಮ್ಮಟ – ಗುರುವಂದನೆ

ಪರ್ಯಾಯ ಶ್ರೀ ಕ್ರಷ್ಣಾಪುರ ಮಠ ಉಡುಪಿ, ಇದರ ಆಶ್ರಯದಲ್ಲಿ, ಶ್ರೀಮತಿ ಮೋಹಿನಿ ಭಟ್ ಮಂಜೇಶ್ವರ ಮತ್ತು ಶ್ರೀಮತಿ ಮಾಯಾ ಕಾಮತ್ ಈಶ್ವರ ನಗರ ಮಣಿಪಾಲ. ಶ್ರೀ ಮಹಾಮಾಯಾ ಭಜನಾ ಮಂಡಳಿ ಈಶ್ವರನಗರ ಮಣಿಪಾಲ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕರ್ವಾಲು, ಅಲೆವೂರು ಪರಿವರ್ತನಾ ಫೌಂಡೇಶನ್ ರಿ. ಮಣಿಪಾಲ ಇದರ ಸಹಯೋಗದಲ್ಲಿ ಇಂದು ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ ರಾಜ್ಯ ಮಟ್ಟದ ಭಜನಾ ಕಮ್ಮಟ ವನ್ನು ದಿವಾನರಾದ ವರದರಾಜ್ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು.

ವೇದಿಕೆಯಲ್ಲಿ ಶ್ರೀಮತಿ ಮಾಯಾ ಕಾಮತ್ , , ಮೋಹನ್ ಭಟ್ , ಸುರೇಶ ಶೆಟ್ಟಿ ಗುರ್ಮೆ , ಐರೋಡಿ ಸಹನಾ ಶೀಲಾ ಪೈ , ವೀಣಾ ಶೆಟ್ಟಿ , ಯಶಪಾಲ್ ಸುವರ್ಣ , ಸವಿತಾ ಹರೀಶ್ ರಾಮ್ , ಲೀಲಾಧರ್ ಶೆಟ್ಟಿ ಕಾಪು , ವೇದಿಕೆಯಲ್ಲಿ ಉಪಸ್ಥರಿದ್ದರು
ಎಮ್ ಎಸ್ ಗಿರಿಧರ್ ಬೆಂಗಳೂರು ಭಜನಾ ಕಮ್ಮಟ ನೆಡೆಸಿಕೊಟ್ಟರು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ ಹರಿಸಿದರು , ದಾಸಸಿಂಚನದ ಮೂಲಕ ಸಾವಿರಕ್ಕೂ ಅಧಿಕ ಮನೆ ಮನೆ ಭೇಟಿ ಮಾಡಿ ಭಜನಾ ಕಾರ್ಯಕ್ರಮ ನಡೆಸಿದ್ದು ಸಾವಿರದ ಮೈಲಿಗಲ್ಲು ದಾಟಿದ ಸುಸಂದರ್ಭದಲ್ಲಿ ಎಮ್ ಎಸ್ ಗಿರಿಧರ್ ಬೆಂಗಳೂರು ಶ್ರೀಮತಿ ವಸುಧಾ ಗಿರಿಧರ್ ಅವರಿಗೆ ಗುರುವಂದನಾ ಕಾರ್ಯಕ್ರಮ ನೆಡೆಯಿತು.

ವಿಶೇಷ ಸಾಧನೆ ಗೈದ ಸಾಧಕರನ್ನು ಗೌರವಿಸಲಾಯಿತು. ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗು ಕುಣಿತಾ ಭಜನೆ ನೆಡೆಯಿತು ಶ್ರೀಕಾಂತ್ ನಾಯಕ ಸ್ವಾಗತಿಸಿದರು ಸವಿತಾ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಗೈದರು , ಶೋಭಾ ಶೆಟ್ಟಿ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!