ಬೇಳೂರು ಗ್ರಾಮ ಪಂಚಾಯಿತಿಯ 2021-22 ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ

ಬೇಳೂರು : ಬೇಳೂರು ಗ್ರಾಮ ಪಂಚಾಯಿತಿಯ 2021-22 ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ವಠಾರದಲ್ಲಿ ಜರಗಿತು. ಶಾಲಾ ಮಕ್ಕಳಿಗೆ ಅಕ್ಷರ ದಾಸೋಹದ ಸಲುವಾಗಿ ನೇರವಾಗಿ ಮಕ್ಕಳ ನೆಗೆ ಆಹಾರ ಪಾದರ್ಥವನ್ನು ನೀಡಿರುವುದಾಗಿ ಶಿಕ್ಷಣ ಅಧಿಕಾರಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಯಾದ ಡಾ. ಅರ್ಪಿತಾ ಬಿ.ಕೆ ಕೋರೋನ ಮೂರನೇ ಅಲೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಗ್ರಾಮದ ಪ್ರತಿಯೋಬ್ಬರಿಗೂ ಲಸಿಕೆ ನೀಡುವುದಾಗಿ ತಿಳಿಸಿದರು.

ಅಗಸ್ಟ್ ತಿಂಗಳಲ್ಲಿ ಬೇಳೂರು ಗ್ರಾಮದಲ್ಲಿ ಯಾವುದೇ ಕೋರೋನ ಪ್ರಕರಣ ವರದಿ ಆಗಿಲ್ಲ ಹಾಗೂ ಇನ್ನು ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿಯವರ ಸೂಚನೆಯಂತೆ ಪಾಸಿಟಿವ್ ಪ್ರಕರಣ ವರದಿಯಾದಲ್ಲಿ ಮನೆಯಲ್ಲಿ ಐಸೋಲೇಷನ್ ಇಲ್ಲವೇ ಹತ್ತಿರದ ಕೋವಿಡ್ ಸೆಂಟರ್ ಅಲ್ಲಿ ಐಸೋಲೆಟ್ ಮಾಡವುದಾಗಿ ಜನರಿಗೆ ತಿಳಿಸಿದರು.

ಸಾರ್ವಜನಿಕರಿಂದ ಮರಳು ಸಮಸ್ಯೆ, ಬೀದಿ ದೀಪ, ರಸ್ತೆಯ ಹಾಗೂ ಹಲವಾರು ಸಮಸ್ಯೆಗಳು ಕೇಳಿಬಂದವು.

ಕುಂದಾಪುರದ ಸಾಮಾಜಿಕ ಅರಣ್ಯ ಅಧಿಕಾರಿ ತುಳಸಿ ಬಾಯಿ ,ಗ್ರಾಮ ಕರಣೀಕ ಪ್ರಕಾಶ್ ಸುವರ್ಣ, ಬೇಳೂರು ಗ್ರಾಮ ಪಂಚಾಯತ್ ಪಿಡಿಓ ಜಯಂತ್ ,ಸಭಾಧ್ಯಕ್ಷೆ ದೇವಕಿ ವಿ ಶೆಟ್ಟಿ, ಉಪಾಧ್ಯಕ್ಷೆ ಜಯಶೀಲ ಶೆಟ್ಟಿ, ಸದಸ್ಯ ಕರುಣಾಕರ ಶೆಟ್ಟಿ, ರಾಘವೇಂದ್ರ ಮೋಗವೀರ, ಕರುಣಾಕರ ಶೆಟ್ಟಿ ಸೀತಾನದಿ, ಉಷಾ, ರಾಣಿ ಆರ್ ಶೆಟ್ಟಿ, ಮುಕ್ತಾ, ನಿರ್ಮಲ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply