ನನ್ನ ಬೀಚ್ ​~ ​ಸ್ವಚ್ಛ ಬೀಚ್ ಅಭಿಯಾನ

ಸ್ವಚ್ಛ ಭಾರತ್ ಫ್ರೆಂಡ್ಸ್, ನಿರ್ಮಲ್ ತೋನ್ಸೆ, ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ , ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಉಡುಪಿ ಬ್ರಹ್ಮಾವರ, ಹಳೆ ವಿದ್ಯಾರ್ಥಿ ಸಂಘ ಸ.ಪ.ಪೂ. ಕಾಲೇಜು ಕೆಮ್ಮಣ್ಣು, ಬ್ಲಾಕ್ ಹಾಕ್ ರೈಡರ್ಸ್ ಉಡುಪಿ, ಲಿಯೋ ಕ್ಲಬ್ ಯುವ ಶಕ್ತಿ, ಲಯನ್ಸ್ ಕ್ಲಬ್ ಕಲ್ಯಾಣಪುರ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 29 ರಂದು “ನನ್ನ ಬೀಚ್ ಸ್ವಚ್ಛ ಬೀಚ್” ಅಭಿಯಾನ ನಡೆಯಲಿದೆ.

ಕಡಲ ತೀರಗಳು ಸ್ವಚ್ಛವಾಗಿದ್ದರೆ ಪ್ರವಾಸಿ ತಾಣದ ಗುಣಮಟ್ಟ ಹೆಚ್ಚಾಗುವುದು ಮಾತ್ರವಲ್ಲದೆ ಕಡಲ ಹಕ್ಕಿಗಳ ಸಂಖ್ಯೆಯಲ್ಲಿ ಕೂಡ ವೃದ್ಧಿಯಾಗುತ್ತದೆ. ಕಡಲ ತೀರವನ್ನು ಸ್ವಚ್ಛವಾಗಿ ಇಡುವಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರು ಪ್ರಮುಖ ಪಾತ್ರ ವಹಿಸುತ್ತಾರೆ. ಕಡಲ ತೀರದಲ್ಲಿ ಪರಿಸರ ಸ್ನೇಹಿ ಅಭಿಯಾನದ ಮೂಲಕ ಕಡಲ ಕಿನಾರೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸೋಣ.

ಸ್ಥಳ: ಹೂಡೆ ಬೀಚ್, ಉಡುಪಿ ಜಿಲ್ಲೆ. ಸಮಯ: ಬೆಳಿಗ್ಗೆ 8.30 – 10.30 ವರೆಗೆ

ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ವ್ಯಕ್ತಿಗತ ಅಂತರವನ್ನು ಕಾಪಾಡಬೇಕು.

-ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ-
9535276757, 7259590806, 7760564145

#beachcleanup #HoodeBeach #mybeachcleanbeach

 
 
 
 
 
 
 
 
 
 
 

Leave a Reply