ಹೊಸಾಳ :ಸಾರ್ವಜನಿಕ ಹಿಂದೂ ರುದ್ರ ಭೂಮಿ ಶಿಲಾನ್ಯಾಸ.

ಬಾರ್ಕೂರು :ಹೊಸಾಳ ಗ್ರಾಮಸ್ಥರ ಬಹು ನಿರೀಕ್ಷಿತ ಹಿಂದೂ ರುದ್ರ ಭೂಮಿ ನಿರ್ಮಾಣಕ್ಕೆ ಶಿಲಾನ್ಯಾಸ ದಿನಾಂಕ 18-5-2022 ರಂದು ಬುಧವಾರ ಪೂರ್ವಹ್ನ 9.00ಗಂಟೆಗೆ ನೆರವೇರಿತು ಶಿಲಾನ್ಯಾಸವನ್ನು ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಬಿ. ಶಾಂತಾರಾಮ ಶೆಟ್ಟಿ. ಬಾರಕೂರು ನೆರವೇರಿಸಿದರು.ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕೂಸ ಕುಂದರ್, ಶ್ರೀ ಶರಣು ಪೂಜಾರಿ, ಶ್ರೀಮತಿ ವಸಂತಿ, ಶ್ರೀ ಪ್ರವೀಣ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವಂದನಾ , ಗುತ್ತಿಗೆದಾರರಾದ ಶ್ರೀ ವಿನಯ್ ನಾಯ್ಕ , ಸಾರ್ವಜನಿಕ ಹಿಂದೂ ರುದ್ರ ಭೂಮಿ ಅಭಿವೃದ್ಧಿ ಸಮಿತಿ ಸದಸ್ಯರು , ಶ್ರೀ ಬಟ್ಟೆವಿನಾಯಕ ಯಕ್ಷಗಾನ ಸೇವಾ ಬಯಲಾಟ ಸಮಿತಿ ಸದಸ್ಯರು , ಊರಿನ ಗಣ್ಯರು, ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವೇ |ಶ್ರೀ ವೆಂಕಟರಾಮಣ ಭಟ್ ರವರ ಪೌರೋಹಿತ್ಯದಲ್ಲಿ ಶಿಲಾನ್ಯಾಸ ನೆರವೇರಿತು.

ಅಭಿವೃದ್ಧಿ ಸಮಿತಿಯು ರುದ್ರ ಭೂಮಿ ನಿರ್ಮಾಣಕ್ಕೆ ಹಾಕಿಕೊಂಡಿರುವ ಯೋಜನೆಗಳನ್ನು ಸರ್ಕಾರದ ಸಂಬಂಧಪಟ್ಟ ಇಲಾಖೆಗಳಿಂದ ಅನುದಾನ ಹಾಗೂ ದಾನಿಗಳಿಂದ ಧನ ಸಹಾಯ ಪಡೆದು ಆದಷ್ಟು ಬೇಗ ಎಲ್ಲಾ ಕಾಮಗಾರಿಗಳನ್ನು ಮುಗಿಸುವ ಸಂಕಲ್ಪ ಮಾಡಲಾಯಿತು.

 
 
 
 
 
 
 
 
 

Leave a Reply