Janardhan Kodavoor/ Team KaravaliXpress
26 C
Udupi
Thursday, April 22, 2021

​ಬಂಟಕಲ್ಲು – “ಎವಾ ಅಮಿ ಕ್ಹೆಲಯಾ” ಕೂಡ್‌ಕಟ್ ಕ್ರೀಡೋತ್ಸವ ಸಮಾರೋಪ

ಶಿರ್ವ:- ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದದ ನೇತೃತ್ವದಲ್ಲಿ ಕೂಡ್‌ಕಟ್ ಪರಿಕಲ್ಪನೆಯಡಿ ಸಮಾಜ ಸಂಘಟನೆ, ಸಾಮೂಹಿಕ ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ ಹೇರೂರಿನಲ್ಲಿರುವ ಬಂಟಕಲ್ಲು ಶಾಲಾ ಮೈದಾನದಲ್ಲಿ ರವಿವಾರ ಜರುಗಿದ ದ್ವಿತೀಯ ವರ್ಷದ “ಎವಾ ಅಮಿ ಕ್ಹೆಲಯಾ” ಕೂಡ್‌ಕಟ್ ಕ್ರೀಡೋತ್ಸವ ಸಂಜೆ ಸಮಾಪನಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವೃಂದದ ಅಧ್ಯಕ್ಷ ವಿಶ್ವನಾಥ್ ಬಾಂದೇಲ್ಕರ್ ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಭಾರತೀಯ ಸೇನಾದಳದ ರಾಜೇಂದ್ರ ಪಾಟ್ಕರ್,  ಸುಕುಮಾರ್ ಪ್ರಭು ಮುಂಬಯಿ,  ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಭಾಗವಹಿಸಿ ವಿಜೇತರಿಗೆ ಟ್ರೋಫಿ ಹಾಗೂ ಬಹುಮಾನ ವಿತರಿಸಿ ಅಭಿನಂದಿಸಿದರು.
​​
ಯುವವೃಂದದ   ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಡೋತ್ಸ ವದ ಆಶಯ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತ ಬೆಳ್ಳೆ ಗ್ರಾ.ಪಂ.ಮಾಜಿ ಅಧ್ಯಕ್ಷ ಶಶಿಧರ ವಾಗ್ಲೆ, ಉಡುಪಿ ಜಿಲ್ಲೆಯಲ್ಲಿಯೇ ಅತ್ಯಧಿಕ ವೈಯುಕ್ತಿಕ ಮತಗಳಿಸಿ ಶಿರ್ವ ಗ್ರಾಮ ಪಂಚಾಯತ್‌ಗೆ 5ನೇ ಬಾರಿಗೆ ಆಯ್ಕೆಗೊಂಡ ಕೆ.ರಾಮರಾಯ ಪಾಟ್ಕರ್‌ರವರನ್ನು ಸನ್ಮಾನಿಸಲಾಯಿತು. ಕ್ರೀಡಾ ಕಾರ್ಯದರ್ಶಿ ಪ್ರೀತಮ್ ವಿಜೇತರ ಪಟ್ಟಿ ವಾಚಿಸಿದರು. ಮುದರಂಗಡಿ ದೇವದಾಸ್ ಪಾಟ್ಕರ್ ನಿರೂಪಿಸಿದರು. ಶ್ರಾವ್ಯಾ ಪ್ರಾರ್ಥಿಸಿದರು.  

 
ಯುವವೃಂದದ ಕಾರ್ಯದರ್ಶಿ ಆಶೀಷ್ ಪಾಟ್ಕರ್ ಧನ್ಯವಾದವಿತ್ತರು. ವೇದಿಕೆಯಲ್ಲಿ ಕೂಡುಕಟ್‌ಗಳ ಗುರ್ಗಾರ್‌ಗಳಾದ ಸೂಡ ಜಯರಾಮ ಪ್ರಭು, ಕೃಷ್ಣಮೂರ್ತಿ ಪಾಟ್ಕರ್ ಪೊದಮಲೆ, ಕೇಶವ ಪಾಟ್ಕರ್ ಸಡಂಬೈಲು,  ಸಂತೋಷ್ ನಾಯಕ್ ಪಳ್ಳಿ, ರಾಜೇಂದ್ರ ಪಾಟ್ಕರ್ ಮಾಣಿಪಾಡಿ ಉಪಸ್ಥಿತರಿದ್ದರು.

​​ಪಂದ್ಯಾಟಗಳ ವಿಜೇತರು:– ಪುರುಷರ ವಿಭಾಗ- ಕ್ರಿಕೆಟ್-ವಿನ್ನರ್: ಸಡಂಬೈಲು ಕೂಡುಕಟ್, ರನ್ನರ್-ಹೇರೂರು ಬಂಟಕಲ್ಲು ಕೂಡುಕಟ್, ಹಗ್ಗ ಜಗ್ಗಾಟ:- ವಿನ್ನರ್-ಸೂಡ ಕೂಡುಕಟ್, ರನ್ನರ್-ಪೊದಮಲೆ ಕೂಡುಕಟ್, ಮಹಿಳಾ ವಿಭಾಗ:- ತ್ರೋಬಾಲ್ -ವಿನ್ನರ್ -ಸೂಡ ಕೂಡುಕಟ್, ರನ್ನರ್ -ಸಡಂಬೈಲು ಕೂಡುಕಟ್, ಹಗ್ಗ ಜಗ್ಗಾಟ:- ವಿನ್ನರ್-ಸೂಡ ಕೂಡುಕಟ್, ರನ್ನರ್–ಪೊದಮಲೆ ಕೂಡುಕಟ್,

ಪೂರ್ವಾಹ್ನ  ಕ್ರೀಡೋತ್ಸವವನ್ನು ಉದ್ಯಮಿ ದತ್ತಾತ್ರೇಯ ಆರ್ ಪಾಟ್ಕರ್ ಹೇರೂರು ಉದ್ಘಾಟಿಸಿ ಶುಭ ಹಾರೈಸಿದರು. ಬಂಟಕಲ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ರಾಜೇಂದ್ರ ಪಾಟ್ಕರ್ ಕೋಡುಗುಡ್ಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

​ ​ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ನೆಡೆಸಿ, ಸೋಂಕಿತರಿಗೆ ಕೂಡಲೇ ಚಿಕಿತ್ಸೆ ನೀಡಿ :​ ಉಸ್ತುವಾರಿ ಸಚಿವ ಬೊಮ್ಮಾಯಿ

ಉಡುಪಿ​: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ​ಪರೀಕ್ಷೆಗಳನ್ನು ನೆಡೆಸಿ, ತ್ವರಿತವಾಗಿ​ ಸೋಂಕಿತರನ್ನು ಪತ್ತೆ ಹಚ್ಚಿ, ಕೂಡಲೇ ಅವರಿಗೆ ಚಿಕಿತ್ಸೆ ಆರಂಬಿಸುವುದರ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ​ ಹರಡುವುದನ್ನು ನಿಯಂತ್ರಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು , ನಿಲರ್ಕ್ಷಿಸದರೆ...

ಉಡುಪಿ: ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕ ವಿಚಾರ: ಶ್ರೀ ಲಕ್ಷ್ಮಿವರ ತೀರ್ಥರ ಪೂರ್ವಾಶ್ರಮ ಸಹೋದರರಿಂದಲೇ ಆಕ್ಷೇಪ!

ಉಡುಪಿ: ಉಡುಪಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕಕ್ಕೆ ಸಹೋದರನಿಂದಲೇ ಆಕ್ಷೇಪ ವ್ಯಕ್ತವಾಗಿದೆ. ರಾಮನವಮಿಯಂದು ನೂತನ ಪೀಠಾಧಿಪತಿ ನೇಮಕ ದ್ವಂದ್ವ ಮಠವಾದ ಸೋದೆ ಮಠಾಧೀಶ ರಿಂದ ಘೋಷಣೆಯಾಗಿದ್ದು ಇದಕ್ಕೆ ಶ್ರೀ ಲಕ್ಷ್ಮಿವರ ತೀರ್ಥರ...

ವಾರಾಂತ್ಯದಲ್ಲಿ ಈಗಾಗಲೇ ನಿಗದಿಪಡಿಸಿದ್ದ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು – ರಘುಪತಿ ಭಟ್ ಆಗ್ರಹ

ಉಡುಪಿ: ರಾಜ್ಯದಲ್ಲಿ ವಾರಾಂತ್ಯ ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಿದ ದಿನ ಈಗಾಗಲೇ ನಿಗದಿಪಡಿಸಿದ್ದ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಜನ ನಿಗದಿಪಡಿಸಿದ ದಿನದಂದೆ ಅವಕಾಶ ಕಲ್ಪಿಸುವಂತೆ ಶಾಸಕ ರಘುಪತಿ ಭಟ್ ಆಗ್ರಹ ವ್ಯಕ್ತಪಡಿಸಿದ್ದಾರೆ. ಕೋವಿಡ್ - 19...

ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ​ಯಾಗಿ ​ಅನಿರುದ್ದ ಸರಳತ್ತಾಯ​ ​ಆಯ್ಕೆ

ಉಡುಪಿ: 16ವರ್ಷ ವಯಸ್ಸಿನ ಅನಿರುದ್ದ ​​​​ಸರಳತ್ತಾಯ​ ​ಎಂಬವರನ್ನು ಉಡುಪಿ ಅಷ್ಠ ಮಠಗಳಲ್ಲೊಂದಾದ ಶಿರೂರು ಮಠದ 31 ನೇಯ ಪೀಠಾಧಿಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸೋದೆ ಮಠದ ​ಶ್ರೀಶ್ರೀ  ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.ಅವರು ಮಂಗಳವಾರ ಹಿರಿಯಡ್ಕ ಬಳಿಯ...

ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ​ಯಾಗಿ ​ ಅನಿರುದ್ದ ಸರಳಾತ್ತಾಯ​ ​ ​ಆಯ್ಕೆ

ಉಡುಪಿ: 16ವರ್ಷ ವಯಸ್ಸಿನ ಅನಿರುದ್ದ ​​​​ಸರಳಾತ್ತಾಯ​ ​ಎಂಬವರನ್ನು ಉಡುಪಿ ಅಷ್ಠ ಮಠಗಳಲ್ಲೊಂದಾದ ಶಿರೂರು ಮಠದ 31 ನೇಯ ಪೀಠಾಧಿಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸೋದೆ ಮಠದ ​ಶ್ರೀಶ್ರೀ  ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.​​ಅವರು ಮಂಗಳವಾರ ಹಿರಿಯಡ್ಕ ಬಳಿಯ ಶಿರೂರು...
error: Content is protected !!