ಮಾಸ್ಟರ್ ಡ್ರಾಮಾ ಆರ್ಟ್ಸ್ (ರಿ.) ಬನ್ನಂಜೆ, ಉಡುಪಿ ದಶಮಾನೋತ್ಸವ ಸಂಭ್ರಮ ೨೦೨೨

ಮಾಸ್ಟರ್ ಡ್ರಾಮಾ ಆರ್ಟ್ಸ್ (ರಿ.) ಬನ್ನಂಜೆ, ಉಡುಪಿ ಸಂಸ್ಥೆಯ ದಶಮಾನೋತ್ಸವದ ಸವಿ ನೆನಪಿನಲ್ಲಿ ಆಯೋಜಿಸಿದ್ದ ’ಕಲಾತರಂಗ ನೃತ್ಯ ವೈಭವ” ಕಾರ್ಯಕ್ರಮ ಮೇ 15 2022 ರಂದು, ಶ್ರೀ ವಿದ್ಯಾಸಮುದ್ರ ಪ್ರೌಢಶಾಲೆ ಕಿದಿಯೂರು ಸಭಾಂಗಣದಲ್ಲಿ ಯಶಸ್ವಿಯಾಗಿ ಮೂಡಿ ಬಂದಿತು. ಪುಟ್ಟ ಪ್ರತಿಭೆಗಳ ಜೊತೆಗೆ ಅನೇಕ ಕಲಾವಿದರು ಭಾಗವಹಿಸಿ ಭರತನಾಟ್ಯ, ಜಾನಪದ, ಯಕ್ಷಗಾನ ಶೈಲಿ, ಸಿನಿಮಾ ನೃತ್ಯ, ಸಂಗೀತ, ನಾಟಕ ಸೇರಿದಂತೆ ವಿವಿಧ ಕಲಾ ಪ್ರದರ್ಶನವನ್ನು ನೀಡಿದ್ದರು.

ಮಾಸ್ಟರ್ ಡ್ರಾಮಾ ಆರ್ಟ್ಸ್ ನ ಸಂಸ್ಥಾಪಕರಾದ ಲೋಕೇಶ್ ಮಾಸ್ಟರ್ ಕಿದಿಯೂರು ಮತ್ತು ಶ್ರೀಮತಿ ಲತಾ ಜನಾರ್ಧನ ಆಚಾರ್ಯ ಏಳಿಂಜೆ (ಟ್ರಸ್ಟಿ ಭುವನ ಜ್ಯೋತಿ ರೆಸಿಡೆನ್ಷಿಯಲ್ ಸ್ಕೂಲ್, ಶಿರ್ತಾಡಿ) ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರಳಿದರ ಕಡೆಕಾರ್ ಕಾರ್ಯದರ್ಶಿಗಳು, ಯಕ್ಷಗಾನ ಕಲಾರಂಗ ಉಡುಪಿ ವಹಿಸಿದ್ದರು.

ಶಶಿಧರ್ ಕಿದಿಯೂರು ಗ್ರಾಮ ಪಂಚಾಯತ್ ಸದಸ್ಯ ಅಂಬಲಪಾಡಿ, ಶಂಕರ್ ಬಾಳೆಕುದ್ರು ಖ್ಯಾತ ಯಕ್ಷಗಾನ ಭಾಗವತರು ಮತ್ತು ಡಾ| ಜಗನ್ಮೋಹನ ಕೆ. ಎಂ. ಸಿ ಮಣಿಪಾಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ಆದಿತ್ಯ ಭಟ್ ಅಂಬಲಪಾಡಿ ನಿರೂಪಿಸಿದರು.

ದಶಮಾನೋತ್ಸವದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಮತ್ತು ಸಂಸ್ಥೆಯನ್ನು ಕಟ್ಟಲು ಸಹಕರಿಸಿದ ಪ್ರಮುಖ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲಾಯಿತು. ವಿಧವಿಧವಾದ ವೇಷ ಭೂಷಣಗಳ ಜೊತೆಗೆ, ಸುಮಧುರ ಸಂಗೀತ ಮತ್ತು ಸ್ಪಷ್ಟ ಬೆಳಕು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತು. ಪೋಷಕರು ಸಹ ತುಂಬಾ ಉತ್ಸಾಹದಿಂದ ಭಾಗಿಯಾಗಿದ್ದರು. ಯೋಗದಲ್ಲಿ ಗಿನ್ನೆಸ್ ರೆಕಾರ್ಡ್ ನ ಸಾಧನೆ ಮಾಡಿದ ಕುಮಾರಿ ತನುಶ್ರೀ ಪಿತ್ರೋಡಿ ಯವರು ಯೋಗ ಪ್ರದರ್ಶನ ಮಾಡಿದ್ದರು.

ಈ ಸಂಸ್ಥೆಯು ನಡೆಸಿದ ಬೇಸಿಗೆ ಶಿಬಿರದ ಮುಕ್ತಾಯದ ಅಂಗವಾಗಿ ’ಕತ್ತಲೆ ನಗರ ತಲೆ ಕೆಟ್ ರಾಜ’ ನಾಟಕವನ್ನು, ಭುವನ್ ಮಣಿಪಾಲ ಅವರ ನೇತೃತ್ವದಲ್ಲಿ, ಅತ್ಯಂತ ಕಡಿಮೆ ಅವಧಿಯಲ್ಲಿ ಮಕ್ಕಳು ಕಲಿತು ಯಶಸ್ವಿಯಾಗಿ ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಶೋಕ್ ಹೆಬ್ಬಾರ್ ಅವರು ನಿರೂಪಿಸಿದರು.

ವಿದುಷಿ ಶ್ರೀಕಲ್ಯಾಣಿ ಪೂಜಾರಿ, ವಿದುಷಿ ಧನ್ಯ ಪ್ರಭು, ಪೂಜಾ, ಲೋಕೇಶ್ ಮಾಸ್ಟರ್ ರವರು ವಿವಿಧ ಪ್ರಕಾರಗಳ ನೃತ್ಯ, ಸಂಗೀತಗಳನ್ನು ಸಂಯೋಜಿಸಿದ್ದರು. ಸುದರ್ಶನ್ ಆಚಾರ್ಯ,ಪ್ರವೀಣ್ ಆಚಾರ್ಯ,ಲತೇಶ್ ಆಚಾರ್ಯ ರವರು ಕಲಾವಿದರ ವೇಷ ಭೂಷಣದ ಜವಬ್ದಾರಿಯನ್ನು ವಹಿಸಿ ಕೊಂಡಿದ್ದರು.

ಹೊಸ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುವುದರ ಜೊತೆಗೆ, ನಮ್ಮ ಸಂಸ್ಕೃತಿಯ, ಕಲೆಗಳನ್ನು ಉಳಿಸಿ ಬೆಳೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಮುಂದಿನ ದಿನಗಳಲ್ಲಿ ಪಾರಂಪರಿಕ ಕಲೆಗಳ ಜೊತೆಗೆ, ಹೊಸತನವನ್ನು ಸಾರುವ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಪ್ರೇಕ್ಷಕರು ಈ ಸಂಸ್ಥೆಯಿಂದ ನಿರೀಕ್ಷಿಸಬಹುದು.  ~ಅನುಪಮಾ ಕೋಟ

 
 
 
 
 
 
 
 
 
 
 

Leave a Reply