ಧರ್ಮಗಳ ಹೆಸರಲ್ಲಿರುವ ಅಡ್ಡಗೋಡೆಯನ್ನು ಕೆಡವಿ ಸಹಭಾಳ್ವೆಯನ್ನು ನಿರ್ಮಿಸಿ- ಝೈನಿ ಕಮಿಲ್

ಉಡುಪಿ; 19 ಜು: ಒಂದು ದೇಶ ಸಾಮಾಜಿಕ, ಧಾರ್ಮಿಕವಾಗಿ ವೈವಿಧ್ಯತೆಯನ್ನು ಹೊಂದಿರುವುದು ಸಹಜ. ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗದವರುಧರ್ಮಕ್ಕೆ ಮಸಿ ಬೆರೆಯುತ್ತಾರೆ, ಇಂದು ಧರ್ಮದ ಹೆಸರಲ್ಲಿ ಜನರನ್ನು ವಿಭಜನೆ ಮಾಡುತ್ತಿದ್ದಾರೆ. ಏನಿದ್ದರೂ ಪರಸ್ಪರ ಮಾತುಕತೆಯಿಂದ ಈ ಅಡ್ಡಗೋಡೆಯನ್ನು ಕೆಡವಿ ಸಹಬಾಳ್ವೆ ಸಮಾನತೆಯ ಮೂಲಕ ಭಾರತ ವಿಶ್ವಗುರುವಾಗಬೇಕು ಎಂದು ಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷ ಡಾ ಅಬ್ದುಲ್ ರಶೀ ದ್ ಝೈನಿ ಕಾಮಿಲ್ ಹೇಳಿದರು.
ಅವರು ಸೋಮವಾರ ಉದ್ಯಾವರ ಬಲಾಯಿಪಾದೆಯ ನಿತ್ಯಾನಂದ ಆರ್ಕೆಡ್‌ನಲ್ಲಿ ಸುನ್ನಿ ಯುವಜನ ಸಂಘ ಎಸ್ ವೈ ಎಸ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಕ್ರೀದ್ ಹಬ್ಬದ ಪ್ರಯಕ್ತ ಹಮ್ಮಿಕೊಂಡ ಈದ್ ಸ್ನೇಹಕೂಟದಲ್ಲಿ ಮಾತನಾಡಿದರು.

ಉದ್ಯಮಿ ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಮಸೀದಿ ಮಂದಿರ ಒಡೆದರೆ ಮತ್ತೆ ಕಟ್ಟಬಹುದು. ಮನಸ್ಸು ಒಡೆದರೆ ಕಟ್ಟುವುದು ಕಷ್ಟ. ಜಾತಿ-ಮತ-ಪಂಥವನ್ನು ಮೀರಿದರೆ ಮಾತ್ರಾ ದೇಶ ಕಟ್ಟಬಹುದು ಎಂಬ ಸತ್ಯವನ್ನು ಎಲ್ಲರೂ ಆತ್ಮವಂಚನೆಯಿಲ್ಲದೆ ಒಪ್ಪಿಕೊಳ್ಳಬೇಕು. ಮನಸ್ಸನ್ನು ಬೆಸೆಯುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದರು.
ಸುನ್ನಿ ಯುವಜನ ಸಂಘದ ರಾಜ್ಯ ಉಪಾಧ್ಯಕ್ಷ ಆಸಯ್ಯಿದ್ ಜಾಪರ್ ಅಸ್ಸಖಾಫ್ ತಂಘಲ್ ಕೋಟೇಶ್ವರ, ಬಡಗುಬೆಟ್ಟು ಕೋ.ಆ.ಬ್ಯಾಂಕಿನ ಜಯಕರ ಶೆಟ್ಟಿ ಇಂದ್ರಾಳಿ, ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ವಿ ಜಿ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ವಕೀಲರ ಸಂಘದ ಜಲ್ಲಾಧ್ಯಕ್ಷ ಬಿ ನಾಗರಾಜ್, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಕೊರಂಗ್ರಪಾಡಿ, ಲಯನ್ಸ್ ಉಪಗವರ್ನರ್‌ಗಳಾದ ನೇರಿ ಕರ್ನೀಲಿಯೂ, ಮೊಹಮ್ಮದ್ ಹನೀಫ್, ಲಯನ್ ಮಾಜಿ ಗವರ್ನರ್ ವಿಶ್ವನಾಥ ಶೆಟ್ಟಿ, ಸಮಾಜ ಸೇವಕರಾದ ಶೇಖರ ಹಾವಂಜೆ, ಸತೀಶ್ ಶೆಟ್ಟಿ ಅಂಬಲಪಾಡಿ, ಹರೀಶ್ ಕಿಣಿ ಅಳೆಯೂರು, ವಕೀಲರಾದ ಉದಯಕುಮಾರ್, ವಿಜಯಕುಮಾರ್ ಶೆಟ್ಟಿ, ಯತೀಶ್ ಕರ್ಕೇರ, ಗಣೇಶ್ ನೆರ್ಗಿ, ಈಶ್ವರ್ ಶೆಟ್ಟಿ ಚಿಟ್ಪಾಡಿ, ಮುಸ್ಲಿಂ ಜಮಾಅತ್ ನಾಯಕರಾದ ಶೇಕ್ ಮೊಹಮ್ಮದ್ ನಯೀಮ್ ಕಟ್ಪಾಡಿ, ಸಯ್ಯದ್ ಫರೀದ್ ಉಡುಪಿ, ಸುಭಾನ್ ಅಹ್ಮದ್ ಹೊನ್ನಾಲ, ಸುನ್ನಿ ಯುವಜನ ಸಂಘದ ನಾಯಕರಾದ ಹಾಜಿ ಮೊಯಿದಿನ್ ಗುಡ್ವಿಲ್ ಸಹಬಾನ್ ಹಾಜಿ, ಅಬ್ದುಲ್ಲ ಸೂಪರ್ ಸ್ಟಾರ್ ಕಾಪು, ಕಾಸಿಂ ಬಾರ್ಕೂರು, ಎಂ.ಎ. ಬಾವು ಹಾಜಿ ಮೂಳೂರು ಉಪಸ್ಥಿತರಿದ್ದರು.
ಎಸ್ ವೈ ಎಸ್ ಜಿಲ್ಲಾಧ್ಕ್ಷರಾದ ಅಡ್ವೇಕೀಟ್ ಹoಝತ್ ಹೆಜಮಾಡಿ ಸ್ವಾಗತಿಸಿದರು ಅಬ್ದುಲ್ ಲತೀಫ್ ಫಾಲಿಳಿ ನಾವುಂದ ಖುರಆನ್ ಪಠಿಸಿದರು ಪ್ರದಾನ ಕಾರ್ಯದರ್ಶಿ ಕೆ ಎ ಅಬ್ದುಲ್ ರಹಿಮಾನ್ ಕಲ್ಕಕಟ್ಟ ಸ್ವಾಗತಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply