Janardhan Kodavoor/ Team KaravaliXpress
28 C
Udupi
Tuesday, January 19, 2021

ಬ್ರಹ್ಮಾವರ ಸಕ್ಕರೆ ಕಾರ್ಖಾನೆ: ಬೆಲ್ಲದ ಆಲೆ ಮನೆ ಶೀಘ್ರದಲ್ಲೇ ಪ್ರಾರಂಭ~ ಬೈಕಾಡಿ ಸುಪ್ರಸಾದ್ ಶೆಟ್ಟಿ 

ಬ್ರಹ್ಮಾವರ :ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇದರ ಪುನರ್ ನಿರ್ಮಾಣ ಈ ಕಾರ್ಯಕ್ಕೆ ಪೂರಕವಾಗಿ ಕಬ್ಬನ್ನು ಅರೆಯುವ ಮಹತ್ವಾಕಾಂಕ್ಷೆಯೊಂದಿಗೆ ಶೀಘ್ರದಲ್ಲಿ ಬೆಲ್ಲದ ಆಲೆ ಮನೆ ಪ್ರಾರಂಭಿಸ ಲಾಗುವುದು ಎಂದು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ರೈತರು ಬೆಳೆದಿರುವ ಕಬ್ಬಿಗೆ ಸೂಕ್ತವಾದ ಬೆಲೆಯನ್ನು ನೀಡಿ ಬೆಲ್ಲದ ಆಲೆ ಮನೆಯ ಮೂಲಕ ಈ ಕಬ್ಬನ್ನು ಅರೆದು ಶುದ್ಧ ಬೆಲ್ಲವನ್ನು ತಯಾರಿಸಿ ಮುಕ್ತ ಮಾರುಕಟ್ಟೆಗೆ ನೀಡಲಾಗುವುದು ಎಂದು ತಿಳಿಸಿದರು. ಈ ಆಲೆಮನೆ  ದಿನಕ್ಕೆ ಹದಿನೈದು ಟನ್ ಕಬ್ಬನ್ನು ಅರೆಯುವ ಸಾಮರ್ಥ್ಯ ಹೊಂದಿದ್ದು ಮುಂದಿನ ಸಾಲಿನಲ್ಲಿ ಉಡುಪಿ ಜಿಲ್ಲೆಯ ರೈತರು ಬೆಳೆಯುವ ಕಬ್ಬಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಖಾನೆಯ ಆವರಣದಲ್ಲಿ ಈ ರೀತಿಯ ಹತ್ತು ಆಲೆಮನೆಗಳನ್ನು ನಿರ್ಮಾಣ ಮಾಡುವ ಬಗ್ಗೆ ಆಡಳಿತ ಮಂಡಳಿ ಚಿಂತನೆ ನಡೆಸಿದ್ದು ಕಬ್ಬು ಬೆಳೆಯುವ ರೈತರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ನಾವು ಮಾಡಲಿದ್ದೇವೆ. 
ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯಾದ್ಯಂತ ನೂರು ಗ್ರಾಮಗಳನ್ನು ಗುರುತಿಸಿದ್ದು ಒಂದು ಸಾವಿರ ಎಕರೆ ಕಬ್ಬು ಬೆಳೆಯುವ ಗುರಿಯನ್ನು ಹೊಂದಿದ್ದೇವೆ ಕಬ್ಬು ರ ವಿಸ್ತರಣೆಗಾಗಿ ರೈತರನ್ನ ಸಂಪರ್ಕಿಸಲು ನೂರು ಜನ ಯುವಕ ರನ್ನು ಈಗಾಗಲೇ ಗುರುತಿಸಿದ್ದು ಒಬ್ಬೊಬ್ಬರಿಗೆ ಒಂದು  ಗ್ರಾಮದ ಜವಾಬ್ದಾರಿಯನ್ನು ನೀಡಿ ರೈತರಲ್ಲಿ ಉತ್ತೇಜನ ನೀಡುವ ಯೋಜನೆ ಕಾರ್ಖಾನೆಗೆ ಇದೆ ಎಂದು ತಿಳಿಸಿದರು .
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ತಮ್ಮ ಧಾರ್ಮಿಕ ಕಾರ್ಯಕ್ರಮದಲ್ಲಿ ಗಿಡಗಳನ್ನು ವಿತರಿಸಿ ಮಾದರಿಯಾದ ದಂಪತಿಗಳು

ಪಡುಬಿದ್ರಿ : ಗಂಗೂ ಹೊಸಮನೆಯ ಪಿ.ಎಚ್.ಪಾರ್ಥಸಾರಥಿ - ಶ್ರೀಮತಿ ಶಾಂತಾ ಪಾರ್ಥಸಾರಥಿ ಅವರು ತಮ್ಮ 'ಸಹಸ್ರ ಪೂರ್ಣ ಚಂದ್ರ ದರ್ಶನ ಹಾಗೂ ಕನಕಾಭಿಷೇಕ' ಧಾರ್ಮಿಕ ಕಾರ್ಯಕ್ರಮ ನಡೆಯಿತು. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಮುನ್ನೂರು...

ಕರಂಬಳ್ಳಿ ವೇಂಕಟರಮಣ ದೇವಳದಲ್ಲಿ ಸನ್ಮಾನ

ಉಡುಪಿ:  ಬಿ ಎಸ್ ಯಡಿಯೂರಪ್ಪನವರು ಎರಡು ದಿನಗಳ ಉಡುಪಿ ಪ್ರವಾಸ ಕೈಗೊಂಡಿದ್ದು ಕರಂಬಳ್ಳಿ ವೇಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ನಡೆದ ಧರ್ಮ ಸಭೆಯಲ್ಲಿ ಭಾಗಿಯಾಗಿದ್ದರು.  ಈ ಸಂದರ್ಭದಲ್ಲಿ ದೇವಳದ ತಂತ್ರಿಗಳಾದ ಪಾಡಿಗಾರು ವಾಸುದೇವ...

ಶ್ರೀ. ಎ.ಕೆ. ಸೋಮಯಾಜಿಯವರಿಗೆ ಪಿ.ಎಚ್.ಡಿ. ಪದವಿ ಪ್ರಧಾನ

ಉಡುಪಿ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದಲ್ಲಿ ಸಹವರ್ತಿ ಪ್ರಾಧ್ಯಾಪಕರಾಗಿರುವ ಶ್ರೀ ಅನಂತಕೃಷ್ಣ ಸೋಮಯಾಜಿಯವರಿಗೆ ಪಿ.ಎಚ್.ಡಿ. ಪದವಿ ದೊರೆತಿದೆ. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಂಡಿಸಿದ ಅಲ್ಯುಮಿನಿಯಂ ನಾರುಗಳಿಂದ ಬಲಪಡಿಸಲ್ಪಟ್ಟ...

ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ನಮ್ಮ ಕೊಡವೂರ ಕಲಾ ಪ್ರತಿಭೆ ವಿಘ್ನೇಶ್ ಗಾಣಿಗ

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಸತತ ಪರಿಶ್ರಮ, ನಿಖರ ಗುರಿ ಇದ್ದಲ್ಲಿ ಎಲ್ಲವೂ ಸಾಧ್ಯವೆಂದು ತೋರಿಸಿದ ಅಸಾಧಾರಣ ಪ್ರತಿಭೆ.. ಕಲ್ಯಾಣಪುರ ಮೌಂಟ್ ರೋಸರಿ ಪ್ರೌಢ ಶಾಲೆಯ ಹತ್ತನೆ ತರಗತಿಯಲ್ಲಿ ಓದುತ್ತಿರುವ ವಿಘ್ನೇಶ್,  ಪ್ರೌಢಶಾಲಾ ವಿಭಾಗದ ದೃಶ್ಯಕಲಾ...

ಧಾರ್ಮಿಕ ಕ್ಷೇತ್ರದೊಂದಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅದಮಾರು ಮಠ ಗಣನೀಯ ಕೊಡುಗೆ~ಬಿ. ಎಸ್. ಯಡಿಯೂರಪ್ಪ

ಶ್ರೀಕೃಷ್ಣ ಮಠ ನಡೆಸುವ ಧರ್ಮ ಸಂರಕ್ಷಣೆಯ ಕಾರ್ಯಕ್ಕೆ  ಸರಕಾರದ ಬೆಂಬಲ ಸದಾ ಇದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದರು. ಪರ್ಯಾಯ ಅದಮಾರು ಶ್ರೀಕೃಷ್ಣ ಮಠ ಆಶ್ರಯದಲ್ಲಿ  ಪರ್ಯಾಯ ಪಂಚ ಶತಮಾನೋತ್ಸವ...
error: Content is protected !!