Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಬ್ರಹ್ಮಾವರ ಸಕ್ಕರೆ ಕಾರ್ಖಾನೆ: ಸಮಗ್ರ ಅಭಿವೃದ್ಧಿಗೆ ಯೋಜನೆ, ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ತಜ್ಞರ ತಂಡದಿಂದ ಅಧ್ಯಯನ

ಬ್ರಹ್ಮಾವರ :ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಬ್ರಹ್ಮಾವರ ಇದರ ಪುನರ್ ನಿರ್ಮಾಣದ ಜತೆಗೆ ಕೃಷಿ ಆಧಾರಿತ ಕೈಗಾರಿಕೆಗೆ ಒತ್ತುಕೊಟ್ಟು ಆಧುನಿಕ ತಂತ್ರಜ್ಞಾನ ಅಳವಡಿಸಿ ಲಾಭದಾಯಕ ಉತ್ಪನ್ನಗಳ ತಯಾರಿಕೆ ಹಾಗೂ ರೈತರ ಬೆಳೆಗಳನ್ನು ಪ್ರೋತ್ಸಾಹಿಸುವ ಯೋಚನೆಯೊಂದಿಗೆ ಸಂಸ್ಥೆಯನ್ನು ಲಾಭದಾಯಕ ಗೊಳಿಸ ಸಮಗ್ರ ಅಭಿವೃದ್ದಿಯ ಯೋಜನೆಗೆ ಅಧ್ಯಯನ ಮಾಡಲಾಗುವುದೆಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದರು.

ಡಿಸೆಂಬರ್ ಹನ್ನೊಂದ ರಂದು ಸಕ್ಕರೆ ಕಾರ್ಖಾನೆಯ ಕಾರ್ಯಾಲಯದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ತಜ್ಞರೊಂದಿಗೆ ಸಮಾಲೋಚನೆ ನಡೆಯಿತು . ಸಕ್ಕರೆ ಕಾರ್ಖಾನೆಗೆ ಆವಶ್ಯವಿರುವ ಕಬ್ಬು ಬೆಳೆಯನ್ನು ಅಭಿವೃದ್ಧಿ ಗೊಳಿಸುವುದು ಸಕ್ಕರೆ ಉತ್ಪಾದನೆಯ ಜೊತೆಗೆ ಇಥೆನಾಲ್ ,ಕೋಜನರೇಶನ್, ಡಿಸ್ಟಿಲರಿ, ಹಾಗೂ ಪ್ರಸಕ್ತ ಮಾರುಕಟ್ಟೆ ಯಲ್ಲಿ ಬೇಡಿಕೆಯಿರುವ ಕೃಷಿ ಆಧಾರಿತ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಸಂಸ್ಥೆ ಯನ್ನು ಲಾಭದಾಯಕ ಗೊಳಿಸಲು ಕ್ರಮ ಕೈಗೊಳ್ಳುವುದು ಉತ್ತಮ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿತು.

ಈ ಕಾರ್ಖಾನೆಯ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕೋಲ್ಡ್ ಸ್ಟೋರೇಜ್. ವೇರ್‌ಹ್ ಸ್ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಿ ರೈತರ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಪ್ರೋತ್ಸಾಹಿಸುವುದರ ಬಗ್ಗೆ ಚಿಂತನೆ ನಡೆಸಲಾಯಿತು.

ತಜ್ಞರ ನಿಯೋಗದಲ್ಲಿ ನಿಟ್ಟೆ ಇಂಜಿನಿಯರಿಂಗ್ ಮಹಾವಿದ್ಯಾಲಯದ ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ .ಶಶಿಕಾಂತ್ ಕಾರಿ೦ಕ .ಡಾ .ರವೀಂದ್ರ ಡಾ. ಮುರಳೀಧರ್ .ಡಾ. ಗ್ರೇನಿಯಲ್ ಡಿಮೆಲ್ಲೊ .ಡಾ. ಎಸ್ ಎ ಗೋಪಾಲ್ . ಡಾ. ಅನಂತಕೃಷ್ಣ ಸೋಮಯಾಜಿ ಡಾ. ವಿಜೇಶ.ಡಾ. ನಿತಿನ್ ಶೆಟ್ಟಿ ಹಾಗೂ ಕಾರ್ಖಾನೆಯ ವ್ಯವಸ್ಥಾಪಕ ಗೋಪಾಲಕೃಷ್ಣ ಉಪಸ್ಥಿತರಿದ್ದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!