ಸಕ್ಕರೆ ಕಾರ್ಖಾನೆ : ಸಾಧ್ಯತೆ ಸಾಮರ್ಥ್ಯ ಅಧ್ಯಯನಕ್ಕೆ ತಜ್ಞರ ತಂಡ

:ಬ್ರಹ್ಮಾವರ : ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ( ನಿ) ಬ್ರಹ್ಮಾವರ ಇದರ ಪುನರ್ ನಿರ್ಮಾಣ ಯೋಜನೆಗೆ ಪೂರಕವಾಗಿ ಪ್ರಸಕ್ತ ಕಾರ್ಖಾನೆಯ ಸಾಧ್ಯತಾ ಸಾಮರ್ಥ್ಯದ ಪರಿಸ್ಥಿತಿಯನ್ನು ಅರಿಯಲು ನಿಟ್ಟೆ ಎಂಜಿನಿಯರಿಂಗ್ ಮಹಾ ವಿದ್ಯಾಲಯದ ಮೆಕಾನಿಕಲ್ ವಿಭಾಗದ ತಾಂತ್ರಿಕ ತಜ್ಞರ ತಂಡ ಕಾರ್ಖಾನೆಗೆ ಭೇಟಿ ನೀಡಿ ಅಧ್ಯಯನ ನಡೆಸಿದರು.

ಸಕ್ಕರೆ ಕಾರ್ಖಾನೆಯ ಪುನರ್ ನಿರ್ಮಾಣದ ಮುಂದಿನ ಯೋಜನೆಗೆ ಸಂಬಂಧಪಟ್ಟು ಈಗಿರುವ ಕಾರ್ಖಾನೆಯ ಸಾಮರ್ಥ್ಯದ ಬಗ್ಗೆ ಹಾಗೂ ಯಂತ್ರೋಪಕರಣಗಳ ಸಾಧ್ಯತೆ ಶಕ್ತಿಯ ಬಗ್ಗೆ ತಜ್ಞರ ತಂಡ ಅಧ್ಯಯನ ನಡೆಸಿತು.

ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವ ಜೊತೆಗೆ ಆಧುನಿಕ ಮಾರುಕಟ್ಟೆಯ ಬೇಡಿಕೆಗೆ ಪೂರಕವಾದ ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸುವ ವಿವಿಧ ಘಟಕಗಳನ್ನು ಪ್ರಾರಂಭಿಸುವ ಬಗ್ಗೆ ಆಡಳಿತ ಮಂಡಳಿ ಹಾಗೂ ತಜ್ಞರ ತಂಡ ಸಮಾಲೋಚನೆ ನಡೆಸಿತು .ಸಮಗ್ರವಾಗಿ ಸಕ್ಕರೆ ಕಾರ್ಖಾನೆಯನ್ನು ,ಇತರ ಕೈಗಾರಿಕೆಗಳನ್ನು ಪ್ರಾರಂಭಿಸುವುದರ ಜತೆಗೆ ಯೋಜನೆಯ ಯಶಸ್ಸಿಗೆ ಪೂರಕವಾಗಿ ಜನಾಭಿಪ್ರಾಯಗಳನ್ನು ಸಂಗ್ರಹಿಸುವ ಸಮೀಕ್ಷೆಯನ್ನು ತಜ್ಞರ ತಂಡ ಮಾಡಲಿದೆ ಎಂದು ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದರು.

ಕಾರ್ಖಾನೆಗೆ ಭೇಟಿ ನೀಡಿದ ತಜ್ಞರ ತಂಡದಲ್ಲಿ ನಿಟ್ಟೆ ಎಂಜಿನಿಯರಿಂಗ್ ಮಹಾವಿದ್ಯಾಲಯದ ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ .ಶಶಿಕಾಂತ್ ಕಾರಿoಕ. ಡಾ.ರವೀಂದ್ರ .ಡಾ. ಮುರುಳಿಧರ್ . ಡಾ. ಗ್ರೇನಿಯಲ ಡಿಮೆಲ್ಲೋ ಇದ್ಧರು. ಕಾರ್ಖಾನೆಯ ಉಪಾಧ್ಯಕ್ಷರಾದ ಉಮಾನಾಥ ಶೆಟ್ಟಿ ,ನಿರ್ದೇಶಕರಾದ ಸಂತೋಷ್ ಕುಮಾರ್ ಶೆಟ್ಟಿ, ಸನ್ಮತ್ ಕುಮಾರ್ ಹೆಗ್ಡೆ ,ಆಸ್ತೀಕ ಶಾಸ್ತ್ರಿ .ರತ್ನಾಕರ ಗಾಣಿಗ, ಶ್ರೀಮತಿ ಗೀತಾ ಶಂಭು ಪೂಜಾರಿ ,ಶ್ರೀಮತಿ ಹೇಮಲತಾ ಶೆಟ್ಟಿ .ಡಿ ಸಿ ಸಿ ಬ್ಯಾಂಕ್ ನ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ ,ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್ ಬಿ ನಾಯಕ್ ಉಪಸ್ಥಿತರಿದ್ದರು .

 
 
 
 
 
 
 
 
 
 
 

Leave a Reply