ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಉಳಿಸಿ, ಜನಾಂದೋಲನಕ್ಕೆ ಸಜ್ಜು  : ಸುಪ್ರಸಾದ್

ಬ್ರಹ್ಮಾವರ: ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆ (ನಿ) ಬ್ರಹ್ಮಾವರ ಇದರ ಪುನರ್ ನಿರ್ಮಾಣದ ಯೋಜನೆಗೆ ಶಕ್ತಿ ತುಂಬಲು  ಕಬ್ಬು ಬೆಳೆಯನ್ನು ಬೆಳೆಸುವ ಜೊತೆಗೆ ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ರೈತರ ಸಂಪರ್ಕ ಮತ್ತು ಜನಾಂದೋಲನದ ಅಗತ್ಯವಿದ್ಧು ಈ ಬಗ್ಗೆ ಸಂಘಟನಾತ್ಮಕ ಸಭೆಯನ್ನು ಜಿಲ್ಲೆಯಾದ್ಯಂತ ಆಯೋಜಿಸಲು ಕಾರ್ಖಾನೆಯ ಆಡಳಿತ ಮಂಡಳಿ ಸಜ್ಜಾಗಿದೆ ಎಂದು ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದರು .
ಸೋಮವಾರದಂದು ಬ್ರಹ್ಮಾವರದ ಹೋಟೆಲ್ ಆಶ್ರಯದಲ್ಲಿ ನಡೆದ ಆಡಳಿತ ಮಂಡಳಿ ಹಾಗೂ ಕಾರ್ಖಾನೆಯ ಅಂದಿನ ಕಬ್ಬು ಅಭಿವೃದ್ಧಿ ಅಧಿಕಾರಿಗಳ ಹಾಗೂ ಕ್ಷೇತ್ರ ಸಹಾಯಕರ ಸಭೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕಬ್ಬು ಬೆಳೆಸುವ ಬಗ್ಗೆ ಯೋಜನೆಯನ್ನು ರೂಪಿಸಲಾಗಿದ್ದು ಉಡುಪಿ ಜಿಲ್ಲೆಯ ಪ್ರಮುಖ ಮೂವತ್ತು ಕೇಂದ್ರಗಳಾದ ಬೈಂದೂರಿ, ಕಂಬದಕೋಣೆ, ಮರವಂತೆ, ವಂಡ್ಸೆ, ಹೆಮ್ಮಾಡಿ ‘ಸಿದ್ಧಾಪುರ’ ಬಳ್ಕೂರು ,  ಹಾಲಾಡಿ   ಮಂದರ್ತಿ ‘ಸಾಯಿಬ್ರಕಟ್ಟೆ, ವಡ್ಡರ್ಸೆ , ಕೋಟಾ, ಬಾರ್ಕೂರು ಬ್ರಹ್ಮಾವರ, ಕೊಕ್ಕರ್ಣೆ, ಪೇತ್ರಿ, ಹೆಬ್ರಿ ,ಪೆರ್ಡೂರು, ಹಿರಿಯಡ್ಕ, ಅಜೆಕಾರು, ಬೈಲೂರು, ಬೆಳ್ಮಣ್,  ಶಿರ್ವ, ಕಾಪು   ,ಅಲೆವೂರು ಪರ್ಕಳ ,ಕೊಡವೂರು, ಕಲ್ಯಾಣಪುರ, ಹಾವಂಜೆ ಸಾಲಿಗ್ರಾಮ ಈ ಪ್ರದೇಶಗಳಲ್ಲಿ ಜನ ಸಂಪರ್ಕ ಸಭೆಯನ್ನು ನಡೆಸಲಾಗುವುದು ಎಂದರು.  ಸಭೆಯಲ್ಲಿ ಉಪಾಧ್ಯಕ್ಷಶಾನಾಡಿ ಉಮಾನಾಥ್ ಶೆಟ್ಟಿ ನಿರ್ದೇಶಕರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಸನ್ಮತ್ ಕುಮಾರ್ ಹೆಗ್ಡೆ ಜನ್ನಾಡಿ ,ಆಸ್ತಿಕ ಶಾಸ್ತ್ರಿ ,ಸುಬ್ಬ ಬಿಲ್ಲವ , ರತ್ನಾಕರ ಗಾಣಿಗ ಶ್ರೀಮತಿ ಗೀತಾ ಶಂಭು ಪೂಜಾರಿ, ಕಾರ್ಮಿಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ವ್ಯವಸ್ಥಾಪಕ ಗೋಪಾಲಕೃಷ್ಣ , ಅಂದಿನ ಕಬ್ಬು ಅಭಿವೃದ್ದಿ ಅಧಿಕಾರಿಗಳು ಮತ್ತು ಕ್ಷೇತ್ರ ಸಹಾಯಕರು ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply