ಕೋಟ ಶಾಲೆಯಲ್ಲಿ ನೋಟ್ ಬುಕ್,ಬ್ಯಾಗ್ ವಿತರಣೆ,

ಕೋಟ: ಕಾರಂತರು ಕಲಿತ ಶಾಲೆ ಅಭಿವೃದ್ಧಿಗೆ ಸರ್ವರ ಸಹಕಾರ ಅತ್ಯಗತ್ಯ ಎಂದು ಉದ್ಯಮಿ ಎಂ.ಸುಬ್ರಾಯ ಆಚಾರ್ಯ ಹೇಳಿದ್ದಾರೆ.
ಮಂಗಳವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿನ ವಿದ್ಯಾರ್ಥಿಗಳಿಗೆ ಕಾಮಧೇನು ವಿವಿದ್ದೋದೇಶ ಸಹಕಾರಿ ಸಂಘ ಹಂದಟ್ಟು ,ಹಳೇ ವಿದ್ಯಾರ್ಥಿಗಳ ಸಹಕಾರದೊಂದಿಗೆ ಉಚಿತ ನೋಟ್ ಬುಕ್,ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ ಇದೊಂದು ಗಮನಾರ್ಹ ಬೆಳವಣಿಗೆ ಆಗಿದೆ.ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆ ಅಧಿಕವಾಗಿದೆ.
ಈ ದಿಸೆಯಲ್ಲಿ ಶಿಸ್ತು,ಸಂಸ್ಕಾರ,ಪ್ರತಿಯೊAದು ವಿಚಾರದಲ್ಲಿ ಕನ್ನಡ ಮಾಧ್ಯವದ ವಿದ್ಯಾರ್ಥಿ ಗಳ ಪಾಲು ಗಣನೀಯ ಇದಕ್ಕೆ ಶಾಲಾ ಆಡಳಿತ ಮಂಡಳಿ,ಮುಖ್ಯ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ,ವಿವಿಧ ರೀತಿಯ ಸವಲತ್ತು ಸರಕಾರಿ ಶಾಲೆಗಳಲ್ಲಿ ಮಾತ್ರ ಸಿಗುತ್ತಿದೆ ಇದರ ಪ್ರಯೋಜನ ಪಡೆದು ಸರಕಾರಿ ಶಾಲೆಗಳತ್ತ ಚಿತ್ತ ಹರಸಿ ಎಂದು ಶಾಲಾಭಿವೃದ್ಧಿಯ ಕುರಿತು ಗುಣಗಾನಗೈದರಲ್ಲದೆ ಶಾಲೆಗೆ ತಮ್ಮ ವತುಯಿಂದ ಧ್ವನಿವರ್ಧಕ ಮತ್ತು ವಾಹನ ಸೌಲಭ್ಯದ ಧನ ಸಹಾಯ ನೀಡುವುದಾಗಿ ಫೋಷಿಸಿದರು.
ಸಭೆ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಹಾಲಕ್ಷಿ÷್ಮÃ ಸೋಮಯಾಜಿ ವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಹಳೇ ವಿದ್ಯಾರ್ಥಿ ವಕೀಲ ಮಹೇಶ್ ಹಂದಟ್ಟು ಬ್ಯಾಗ್ ವಿತರಿಸಿದರು.

ಶಾಲಾ ವಾಹನ ಸಮಿತಿ ಅಧ್ಯಕ್ಷ ಉಪೇಂದ್ರ ಸೋಮಯಾಜಿ ಪ್ರತಿವರ್ಷ ಒಂದನೆ ತರಗತಿಯಲ್ಲಿ ದಾಖಲಾಗುವ ಪ್ರತಿಯೊರ್ವ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂ ಠೇವಣಿಯನ್ನು ಹಾಗೂ ಗೌರವ ಶಿಕ್ಷಕಿಯರಿಗೆ ಒಂದು ತಿಂಗಳ ಗೌರವ ಧನವನ್ನು ಶಾಲಾಗೆ ಹಸ್ತಾಂತರಿಸಲಾಯಿತು.
ಮಳೆಬಿಲ್ಲು ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ನಾಟಕ ತರಬೇತಿ ನೀಡಿದ ರಂಗಕಲಾವಿದ ರೋಹಿತ್ ಬೈಕಾಡಿಯವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.
ಕಾಮಧೇನುಸಹಕಾರಿ ವಿವಿದ್ದೋದ್ಧೇಶ ಸಹಕಾರಿ ಸಂಘ ಹಂದಟ್ಟು ಇದರ ಸಲಹೆಗಾರ ಎಸ್ ಕೆ ಮಂಜುನಾಥ ನೋಟ ಬುಕ್ ವಿತರಿಸಿದರು.
ಶಾಲಾ ವಾಹನ ಸಮಿತಿ ಅಧ್ಯಕ್ಷ ಉಪೇಂದ್ರ ಸೋಮಯಾಜಿ ,ಕಾಮಧೇನು ಸಹಕಾರಿ ವಿವಿದ್ದೋದೇಶ ಸಂಘ ಕಾರ್ಯದರ್ಶಿ ಸತೀಶ್ ,ಸಿಬ್ಬಂದಿ ಅಶೋಕ್,ಸಿಆರ್ ಪಿ ಸವಿತಾ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಸಿಂಚನಾ ಮತ್ತು ಅನಘ ಸ್ವಾಗತಿಸಿದರು.ಶಾಲಾ ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ ಪ್ರಾಸ್ತಾವನೆ ಗೈದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ಉನ್ನತಿ ನಿರೂಪಿಸಿದರು.ಪ್ರಣಮ್ಯ ವಂದಿಸಿದರು.ಸಾAಸ್ಕöÈತಿಕ ಕಾರ್ಯಕ್ರಮದಲ್ಲಿ ರೋಹಿತ್ ಬೈಕಾಡಿ ನಿರ್ದೇಶನದ ವಿದ್ಯಾರ್ಥಿಗಳಿಂದ ಮಂಗಗಳ ಉಪವಾಸ ನಾಟಕ ಪ್ರದರ್ಶನಗೊಂಡಿತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟತಟ್ಟು ಇಲ್ಲಿನ ವಿದ್ಯಾರ್ಥಿಗಳಿಗೆ ಕಾಮಧೇನು ವಿವಿದ್ದೋದೇಶ ಸಹಕಾರಿ ಸಂಘ ಹಂದಟ್ಟು ,ಹಳೇ ವಿದ್ಯಾರ್ಥಿಗಳ ಸಹಕಾರದೊಂದಿಗೆ ಉಚಿತ ನೋಟ್ ಬುಕ್,ಶಾಲಾ ಬ್ಯಾಗ್ ವಿತರಿಸಲಾಯಿತು. ವಿವಿದ್ದೋದ್ಧೇಶ ಸಹಕಾರಿ ಸಂಘ ಹಂದಟ್ಟು ಇದರ ಸಲಹೆಗಾರ ಎಸ್ ಕೆ ಮಂಜುನಾಥ, ಶಾಲಾ ವಾಹನ ಸಮಿತಿ ಅಧ್ಯಕ್ಷ ಉಪೇಂದ್ರ ಸೋಮಯಾಜಿ ,ಕಾಮಧೇನು ಸಹಕಾರಿ ವಿವಿದ್ದೋದೇಶ ಸಂಘ ಕಾರ್ಯದರ್ಶಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply