Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಎನ್‌ಎನ್‌ಓ ಟ್ರೋಫಿ’ ಬ್ಯಾಡ್ಮಿಂಟನ್ ಟೂರ್ನಮೆಂಟ್ ಉದ್ಘಾಟನೆ

ಉಡುಪಿ, ಆ.28: ಉಡುಪಿ ಜಿಲ್ಲಾ ನಮ್ಮ ನಾಡ ಒಕ್ಕೂಟದ ಆಶ್ರಯದಲ್ಲಿ ಎನ್‌ಎನ್‌ಓ ಟ್ರೋಫಿ- 2022 ಬ್ಯಾಡ್ಮಿಂಟನ್ ಟೂರ್ನಮೆಂಟ್ನ್ನು ರವಿವಾರ ಉಡುಪಿ ಅಜ್ಜರಕಾಡಿನ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಟೂರ್ನಮೆಂಟ್ನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಯುವ ಜನತೆ ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಅಳವಡಿಸಿ ಕೊಳ್ಳಬೇಕು. ಇದರಿಂದ ಯುವ ಸಮುದಾಯ ದೈಹಿಕ ಹಾಗೂ ಮಾನಸಿಕ ವಾಗಿಯೂ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟದ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಾವರ ಹಾಲಿಮಾ ಸಾಬ್ಜು ಆಡಿಟೋರಿಯಂನ ಮಾಲಕ ಅಬ್ದುಲ್ ಜಲೀಲ್ ಸಾಹೇಬ್, ತೊನ್ಸ್ ಹೆಲ್ತ್ ಸೆಂಟರ್‌ನ ಚೇಯರ್‌ಮೆನ್ ಬಿ.ಎಂ.ಜಾಫರ್, ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ವೈ.ಸುಧೀರ್ ಕುಮಾರ್, ಉಡುಪಿ ಜಾಮೀಯ ಮಸೀದಿಯ ಅಧ್ಯಕ್ಷ ಅರ್ಷದ್, ಉದ್ಯಮಿ ಆಸೀಫ್ ಕಾಪು ಮುಖ್ಯ ಅತಿಥಿಗಳಾಗಿದ್ದರು.

ಒಕ್ಕೂಟದ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೇನ್, ಖಜಾಂಚಿ ಅಬ್ದುಲ್ ಹಮೀದ್, ಜಿಲ್ಲಾ ಉಪಾಧ್ಯಕ್ಷರಾದ ಅಬು ಮೊಹಮ್ಮದ್, ಶಾಕಿರ್ ಹಾವಂಜೆ, ಕಾರ್ಕಳ ಘಟಕ ಅಧ್ಯಕ್ಷ ಶಾಕಿರ್ ಹುಸೇನ್ ಶೀಶ್, ಬ್ರಹ್ಮಾವರ ಘಟಕದ ಅಧ್ಯಕ್ಷ ಶೌಕತ್ ಅಲಿ ಬಾರಕೂರು, ಸಂಘಟಕರಾದ ನಝಿರ್ ಅಜೆಕಾರ್, ಮುಸ್ತಫಾ ಮಲ್ಪೆ, ಸಮೀರ್ ಉಡುಪಿ, ಸದಸ್ಯರಾದ ರಶೀದ್ ಕಾಪು, ಇಲ್ಯಾಸ್ ಬೈಂದೂರ್, ಅರ್ಫಾತ್ ಬೆಳ್ವೆ, ರಿಯನ್ ಬೆಳ್ವೆ, ಆಸೀಫ್ ಬೆಳ್ವೆ, ಉಡುಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಯಾನ್ ತ್ರಾಸಿ, ಝಹಿರ್ ನಾಕುದ ಉಪಸ್ಥಿತರಿದ್ದರು.

ಒಕ್ಕೂಟದ ಸೆಂಟ್ರಲ್ ಕಮಿಟಿಯ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿದರು. ಕಾಪು ಘಟಕದ ಅಧ್ಯಕ್ಷ ಅಶ್ರಫ್ ಪಡುಬಿದ್ರಿ ವಂದಿಸಿ ದರು. ಬೈಂದೂರು ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಕಾರ್ಯಕ್ರಮ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!