ಆಟೋ ಚಾಲಕರಿಗೆ ದುಡಿಯಲು ಬದಲಿ ಆಟೋ ಸ್ಟ್ಯಾಂಡನ್ನು ಮಾಡಿದ ಅಧಿಕಾರಿ ವರ್ಗ

ಇತ್ತೀಚೆಗೆ ಸುಮಾರು ಐದು ವರ್ಷಗಳಿಂದ ಉಡುಪಿಯ ಜಾಮಿಯಾ ಮಸೀದಿ ಬಳಿ ಆಟೋ ಸ್ಟ್ಯಾಂಡ್ ಮಾಡಿ ಸಾರ್ವಜನಿಕ ಸೇವೆಯನ್ನು ಮಾಡುತ್ತಾ ಬಂದಿರುವ ಆಟೋ ಸ್ಟ್ಯಾಂಡನ್ನು ಚಾಲಕರ ಹಳೆ ದ್ವೇಷದಿಂದ ನಗರ ಸಭೆಗೆ ಸಾರ್ವಜನಿಕರ ಹೆಸರಿನಲ್ಲಿ ಒಂದು ಯೂನಿಯನ್ ಸುಳ್ಳು ಅರ್ಜಿಯನ್ನು ಹಾಕಿರುವುದರಿಂದ ಆ ಸ್ಟ್ಯಾಂಡನ್ನು ನಗರಸಭೆ ತೆರವು ಮಾಡಿ ಅಲ್ಲಿ ದುಡಿಯುತ್ತಿರುವ ಸುಮಾರು 10 ಆಟೋ ಚಾಲಕರಿಗೆ ಸುಮಾರು 3 ತಿಂಗಳಿಗೆ ದುಡಿಮೆ ಇಲ್ಲದೆ ಚಾಲಕರ ಕುಟುಂಬವು ಬೀದಿಗೆ ಬೀಳುವ ಸ್ಥಿತಿ ಬಂದಿದೆ.
ಇದನ್ನು ಮನಗೊಂಡ ಆಶ್ರಯದಾತ ಆಟೋ ಯೂನಿಯನ್, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (CITU) ಉಡುಪಿ, ಹಾಗೂ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ಉಡುಪಿ ಜಿಲ್ಲೆ. ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಸಂಬಂಧಪಟ್ಟ ನಗರ ಸಭೆಯ ಅಧ್ಯಕ್ಷರು, ಪೌರಾಯುಕ್ತರು, ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಮಾನ್ಯ ಶಾಸಕರಾದ ಕೆ ರಘುಪತಿ ಭಟ್, ಬಿಜೆಪಿಯ ನಗರ ಅಧ್ಯಕ್ಷರಾದ ಮಹೇಶ್ ಠಾಕೂರ್, ಸಂಚಾರ ಠಾಣಾದಿಕಾರಿ ಇವರನ್ನೆಲ್ಲ ಭೇಟಿಮಾಡಿ ಅಮಾಯಕ ರಿಕ್ಷಾ ಚಾಲಕರ ಸಮಸ್ಯೆಯನ್ನು ತಿಳಿಸಿದಾಗ , ಕೂಡಲೇ ಅವರಿಗೆ ದುಡಿಯಲು ಬದಲಿ ಆಟೋ ಸ್ಟ್ಯಾಂಡನ್ನು ಮಾಡಲು ಅವಕಾಶವನ್ನು ಮಾಡಿರುತ್ತಾರೆ.
ರಿಕ್ಷಾ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸಿರುವ ಎಲ್ಲಾ ಅಧಿಕಾರಿ ವರ್ಗದವರಿಗೆ, ಶಾಸಕರಿಗೆ, ಸ್ಥಾಯಿ ಸಮಿತಿಯ ಅಧ್ಯಕ್ಷರಿಗೆ ಎಲ್ಲಾ ಸಂಘಟನೆ ಪರವಾಗಿ ಅನಂತಾನಂತ ಧನ್ಯವಾದಗಳು.

 
 
 
 
 
 
 
 
 
 
 

Leave a Reply