ಆಟಿಸಂ ಜಾಗೃತಿ/ಅರಿವು – 2022

ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಕುತ್ಪಾಡಿ, ಉಡುಪಿ ಕಾಲೇಜಿನ ಬಾಲರೋಗ ವಿಭಾಗದಿಂದ ಭಾವಪ್ರಕಾಶ ಸಭಾಂಗಣದಲ್ಲಿ ದಿನಾಂಕ 18-04-2022 ರಂದು ಮಧ್ಯಾಹ್ನ3 ರಿಂದ 5 ಗಂಟೆಯವರೆಗೆ ‘ಆಟಿಸಂ ರೋಗದ ಆರಂಭಿಕ ಗುರುತಿಸುವಿಕೆ, ರೋಗ ನಿರ್ಣಯ ಮತ್ತು ನಿರ್ವಹಣೆ’ ಕುರಿತು ಅತಿಥಿ ಉಪನ್ಯಾಸವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಡಾ.ಸುಜಾ ಕೆ., ತೃತೀಯ ವರ್ಷದ ಬಾಲರೋಗ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಬಾಲರೋಗ ವಿಭಾಗದ ಮುಖ್ಯಸ್ಥರು ಡಾ. ಪ್ರಥ್ವಿರಾಜ್ ಪುರಾಣಿಕ್ ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ.ಯವರು ವಹಿಸಿದ್ದರು. ಉಡುಪಿ ದೊಡ್ಡನಗುಡ್ಡೆಯ ಡಾ. ಎ.ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ‘ಆಟಿಸಂ ರೋಗದ ಆರಂಭಿಕ ಗುರುತಿಸುವಿಕೆ, ರೋಗ ನಿರ್ಣಯ ಮತ್ತು ನಿರ್ವಹಣೆಯ ಕುರಿತು ಮಾಹಿತಿ ನೀಡಿ, ಆಟಿಸಂ ಗುಣಲಕ್ಷಣಗಳ ಬಗ್ಗೆ, ಅಂತಹ ಮಕ್ಕಳನ್ನು ಪ್ರೋತ್ಸಾಹಿಸುವ ವಿಧ, ರೋಗ ನಿರ್ಣಯದ ಮಾರ್ಗದಲ್ಲಿ ವೈದ್ಯರ ನಿಪುಣತೆಯ ಬಗ್ಗೆ ಅರಿವು ಮೂಡಿಸಿದರು. ವಿಶೇಷ ಆಹ್ವಾನಿತರಾಗಿ ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್., ಸಹಾಯಕ ವಿದ್ಯಾರ್ಥಿ ಕ್ಷೇಮಪಾಲಕರಾದ ಡಾ. ಚೈತ್ರ ಹೆಬ್ಬಾರ್ ಹಾಗೂ ಆಟಿಸಂ ಸೊಸಾÊಟಿ ಸಂಯೋಜಕರಾದ ಶ್ರೀ ಕೀರ್ತೇಶ್‌ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಶಿಕ್ಷಕ ವೃಂದ, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ವೃಂದ ಸೇರಿ ಸುಮಾರು ೪೦೦ ಮಂದಿ ಪ್ರಯೋಜನ ಪಡೆದರು.

ಕಾರ್ಯಕ್ರಮದಲ್ಲಿ ಬಾಲರೋಗ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಶರಶ್ಚಂದ್ರ ಆರ್. ಇವರು ವಂದನಾರ್ಪಣೆಯನ್ನು ಸಲ್ಲಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಚಿತ್ರಲೇಖಾ ಹಾಗೂ ಡಾ. ಕಾವ್ಯ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಬಾಲರೋಗ ವಿಭಾಗದ ತೃತೀಯ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಲಾರಾ ಡಯಾಸ್ ನೆರವೇರಿಸಿದರು.

 
 
 
 
 
 
 
 
 
 
 

Leave a Reply