Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಭಾರತ ಸೇವಾದಳ ರಾಜ್ಯ ಕಾರ್ಯಕಾರಿಣಿಗೆ ಆರೂರು ತಿಮ್ಮಪ್ಪ ಶೆಟ್ಟಿ

ಉಡುಪಿ:-ಕರ್ನಾಟಕ ಸರಕಾರದ ಅಂಗಸ೦ಸ್ಥೆಯಾದ  ಭಾರತ ಸೇವಾದಳ ಸಂಸ್ಥೆಯ ರಾಜ್ಯ ಕಾರ್ಯಕಾರಿಣಿಗೆ ಉಡುಪಿ ಜಿಲ್ಲಾ ಭಾರತ ಸೇವಾದಳದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿರವರನ್ನು ಆಯ್ಕೆ ಮಾಡಿದ್ದಾರೆ.
 
ಇವರು ಭಾರತ ಸೇವಾದಳ ಸಂಸ್ಥೆಯಲ್ಲಿ ಶಾಖಾ ನಾಯಕರಾಗಿ,ತಾಲೂಕು ಅಧಿನಾಯಕರಾಗಿ, 12 ವರ್ಷ ಉಡುಪಿ ಜಿಲ್ಲಾ ಭಾರತ ಸೇವಾದಳದ ಜಿಲ್ಲಾ ಸಂಘಟಕರಾಗಿ ಜಿಲ್ಲಾದ್ಯಂತ ಸಂಚರಿಸಿ  ಸೇವಾದಳದ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ  ಭಾವೈಕ್ಯತಾ ಮೇಳಗಳನ್ನು ಸಂಘಟಿಸಿದ್ದಾರೆ.
ಶಿಕ್ಷಣ ಇಲಾಖೆಯ ಶಾಲಾ ಮುಖ್ಯೋಪಾಧ್ಯಾರಾಗಿ, ಕ್ಷೇತ್ರ ಸಂಪನ್ಮೂಲವ್ಯಕ್ತಿಯಾಗಿ  ಜೊತೆಗೆ ಸೇವಾದಳ ವಿವಿಧದ ಶಿಬಿರಾಧಿಪತಿಯಾಗಿ, ಹಲವು ಶಿಕ್ಷಕರ ತರಬೇತಿ, ನಾಯಕತ್ವ ತರಬೇತಿ, ಪುನಶ್ಚೇತನ ಶಿಬಿರಗಳನ್ನು ಸಂಘಟಿಸಿದ್ದಾರೆ. ರಾಷ್ಟ್ರಧ್ವಜ ಸಂಹಿತೆ, ಧ್ವಜಾರೋಹಣ ಪ್ರಾತಿಕ್ಷಿಕೆ ಮತ್ತು ತರಬೇತಿ ಶಿಬಿರಗಳನ್ನು ಜಿಲ್ಲೆ ಯಾದ್ಯಂತ  ನಡೆಸಿಕೊಟ್ಟಿದ್ದಾರೆ.
 ರೋಟರಿ ಸಹಿತ ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, 14 ವರ್ಷಗಳಕಾಲ ಉಡುಪಿ ಟೀರ‍್ಸ್ ಕೋ ಅಪರೇಟಿವ್ ಬ್ಯಾಂಕ್‌ನ ನಿರ್ದೇಶರಾಗಿ, ಅಧ್ಯಕ್ಷರಾಗಿ ಸೇವೆ ನೀಡಿದ್ದಾರೆ. ಇದೀಗ ಭಾರತ ಸೇವಾದಳದ ಕೇಂದ್ರ ಸಮಿತಿಯ ಕಾರ್ಯಕಾರಿಣಿ ಸದಸ್ಯರಾಗಿ  ರಾಜ್ಯ ಚುನಾವಣಾಧಿಕಾರಿ  ಹಾಗೂ ರಾಜ್ಯ ದಳಪತಿ ಹೆಚ್.ಎಸ್.ಚಂದ್ರಶೇಖರ್ ಅವರು 2022-2027ರ ಸಾಲಿಗೆ  ರಾಜ್ಯ ಸದಸ್ಯತ್ವದ ಪ್ರಮಾಣಪತ್ರವನ್ನು ನೀಡಿ ಅಭಿನಂದಿಸಿದ್ದಾರೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!