ಕಂದಮ್ಮನನ್ನು ನೋಡಲು ಬರಬೇಕಿದ್ದ ಮಂಗಳೂರಿನ ಸೈನಿಕ ಶವವಾಗಿ ಬಂದ


ಮಂಗಳೂರು: 
ಆರು ತಿಂಗಳ ಹಿಂದೆ ಜನಿಸಿದ್ದ ತನ್ನ ಪುಟ್ಟ ಕಂದಮ್ಮನನ್ನು ಮೊದಲ ಬಾರಿಗೆ ನೋಡಬೇಕೆಂದ ಕನಸು ಈ ಯೋಧನ ಕಣ್ಣಲ್ಲಿ ತುಂಬಿ ತುಳುಕುತ್ತಿತ್ತು,.ಅದರ ಜೊತೆಯಲ್ಲಿ ತಾಯಿಯ ವಾರ್ಷಿಕ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿಯೂ ಭಾಗಿಯಾಗುವವರಿದ್ದರು. ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಶಸ್ತ್ರ ಸೀಮಾ ಬಲ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಮುರುಳೀಧರ್​​ ನಾಳೆ ಊರಿಗೆ ಬರಬೇಕು ಎಂಬ ಮಹದಾಸೆಯೊಂದಿಗೆ ಮುರುಳೀದರ್​​​ ರಾತ್ರಿ ಮಲಗಿದ್ದವರು ಬೆಳಗ್ಗೆ ಏಳಲೇ ಇಲ್ಲ.

 

ಜನವರಿ 22ರ ರಾತ್ರಿ ಪುತ್ರಿ ಹಾಗೂ ಪತ್ನಿ ಉಷಾರೊಂದಿಗೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ್ದ 37 ವರ್ಷದ ಹವಾಲ್ದಾರ್​​ ಬಳಿಕ ಮಲಗಿದ್ದರು. ಆದರೆ ಜನವರಿ 23ರ ಬೆಳಗ್ಗೆ ಅವರು ಎದ್ದಿರಲಿಲ್ಲ. ಮಧ್ಯ ಪ್ರದೇಶದ ಭೂಪಾಲ್​ನಲ್ಲಿ ಹೆಚ್​​ಸಿ/ಜಿಡಿ ರ್ಯಾಂಕ್​​ ಹೊಂದ ಬಳಿಕ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ಮುರಳೀಧರ್ ರನ್ನು​ ಕೂಡಲೇ ವೈದ್ಯರು ತಪಾಸಣೆ ನಡೆಸಿ ನೋಡಿದಾಗ ಮುರುಳೀಧರ್​ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

 

ಇಂದು ಮೃತ ಮುರುಳೀಧರ್​ ಪಾರ್ಥೀವ ಶರೀರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್​ ಎಂ.ಆರ್​​​ ಹಾಗೂ ಜಿಲ್ಲಾ ಪಂಚಾಯತ್​ ಸಿಇಓ ಕುಮಾರ್​, ಸಹಾಯಕ ಆಯುಕ್ತ ಮದನ್​ ಮೋಹನ್​, ಪ್ರಭಾರಿ ಮುಖ್ಯ ವಿಮಾನ ನಿಲ್ದಾಣ ಭದ್ರತಾ ಅಧಿಕಾರಿ ಕಿಶೋರ್​ ಕುಮಾರ್​ ಎವಿ ಮುರುಳೀಧರ್​​ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ನಾಳೆ ಶಕ್ತಿ ನಗರದಲ್ಲಿರುವ ಸೈನಿಕ ಭವನದಲ್ಲಿ ಹುತಾತ್ಮ ಯೋಧ ಮುರುಳೀಧರ್​ ಅಂತಿಮ ಕ್ರಿಯೆ ನೆರವೇರಲಿದೆ.

 
 
 
 
 
 
 
 
 
 
 

Leave a Reply