ಅಂಚೆ ಉಳಿತಾಯ ದಿನಾಚರಣೆ

ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ,ಕೊಡವೂರು ಹಳೆವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ರಾಷ್ಟೀಯ ಅಂಚೆ ಸಪ್ತಾಹದ ಅಂಗವಾಗಿ, ಆಂಚೆ ಉಳಿತಾಯ ದಿನದ ಆಚರಣೆ ಅ.10 ರಂದು ಯುವಕ ಸಂಘದ ಕಾರ್ಯಾಲಯದಲ್ಲಿ ಜರಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಅಂಚೆ ವಿಭಾಗದ ಅಧೀಕ್ಷಕ ನವೀನ್ ಚಂದರ್ ರವರು ಸುಕನ್ಯಾ ಸಮ್ರದ್ದಿ ಯೋಜನೆಯ ಹೊಸ ಖಾತೆದಾರರಿಗೆ ಪಾಸ್ ಬುಕ್ ಅನ್ನು ವಿತರಿಸಿ, ‌ ನಾವು ಉಳಿತಾಯ ಪ್ರವ್ರತ್ತಿಯನ್ನು ಮೈಗೂಡಿಸಿಕೊಂಡಲ್ಲಿ,ಭವಿಷ್ಯದ ಬಗೆಗಿನ ಯೋಜನೆ, ಕನಸುಗಳನ್ನು ಸಾಕಾರಗೊಳಿಸಲು,ಹೊಸ ವಿಚಾರಗಳ ಬಗ್ಗೆ ಆತ್ಮವಿಶ್ವಾಸದಿಂದ ಮುಂದಡಿ ಇಡಲು ಸಾಧ್ಯ. ಹಾಗೆಯೇ ಅನಿರೀಕ್ಷಿತ ಸಂಕಷ್ಟಗಳಿಂದ ಪಾರಾಗಲು ಹಣದ ಉಳಿತಾಯ ಅಗತ್ಯ ಎಂದರು.ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ನಗರಸಭಾ ಸದಸ್ಯ ವಿಜಯ ಕೊಡವೂರು, ಶ್ರೀ ಶಂಕರನಾರಾಯಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಟಿ.ರಾಘವೇಂದ್ರ ರಾವ್,ಸ್ಥಳೀಯ ದೇಗುಲದ ವ್ಯವಸ್ಥಾಪನ ಸಮಿತಿಯ ಸದಸ್ಯೆ ಸುಧಾ.ಎನ್.ಶೆಟ್ಟಿ,ಉಪಸ್ಥಿತರಿದ್ದರು. ಅಂಚೆ ಇಲಾಖೆಯ ಹೆಚ್ಚಿನ ಯೋಜನೆಗಳ ಖಾತೆದಾರರಾದ ವಿಠಲ ನಕ್ಷತ್ರಿ ಹಾಗೂ ಸಣ್ಣ ಉಳಿತಾಯ ಸಂಗ್ರಹದಲ್ಲಿ ಉತ್ತಮ ಸಾಧನಗೈದ ಪದ್ಮಿನಿ ಕಿಣಿಯವರನ್ನು ಸಮ್ಮಾನಿಸಲಾಯಿತು.ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಅಟಲ್ ಪೆನ್ಶನ್ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮೆ,ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮೆಗಳನ್ನುಕ್ರೋಢಾಶ್ರಮ ಅಂಚೆ ಕ‌ಛೇರಿಯಲ್ಲಿ ಮಾಡಲಾಯಿತು.

ಆರ್ಥಿಕ ಅಶಕ್ತರಾದ ಸುಕನ್ಯಾ ಸಮ್ರದ್ದಿ ಯೋಜನೆಯ ಖಾತೆದಾರರ ಖಾತೆಗೆ ಆರಂಭಿಕ ಠೇವಣಿಯ ಹಣವನ್ನು ದೇಣಿಗೆಯಾಗಿ ನೀಡಿದ ದಾನಿಗಳನ್ನು,ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಶಿಕ್ಷಕಿ ಮಲ್ಲಿಕಾದೇವಿ,ಅಂಗನವಾಡಿ ಕಾರ್ಯಕರ್ತೆಯರಾದ ಜಯ ಸುಧಾಕರ್, ವಿನೋದ ಕಾನಂಗಿ, ಚಿತ್ರಕಲಾ ಶೆಟ್ಟಿಗಾರ್ ಗೌರವಿಸಲಾಯಿತು. ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್ ಸ್ವಾಗತಿಸಿದರು. ಉಡುಪಿ ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿದರು‌

 

 
 
 
 
 
 
 
 
 
 
 

Leave a Reply