Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಅಂಬಲಪಾಡಿಯ ಯುವಕನ ಚಿಕಿತ್ಸೆಗೆ ತುರ್ತು 80 ಸಾವಿರ ರೂಪಾಯಿ ನೆರವು.. ಸಹಾಯಕ್ಕೆ ಮನವಿ..

ಉಡುಪಿ ಜು.15;- ಅಂಬಲಪಾಡಿಯ ಗೌತಮ್ ಎನ್ನುವ ಯುವಕ ಇಲಿ ಜ್ವರದಲ್ಲಿ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸಾ ನೆರವಿಗಾಗಿ ರೂ.80,000/- ವಿಶು ಶೆಟ್ಟಿ ಮುಖಾಂತರ ಹಸ್ತಾಂತರಿಸಲಾಗಿದೆ.

ಯುವಕನು ಸ್ಥಳೀಯವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕನಾಗಿ ಕೆಲಸ ಮಾಡಿಕೊಂಡಿದ್ದು ಸ್ಥಳೀಯರ ಮೆಚ್ಚುಗೆಗೆ ಪಾತ್ರನಾಗಿದ್ದು, ಮೂರು ದಿನಗಳ ಹಿಂದೆ ಹಠಾತ್ತಾಗಿ ಅಸ್ವಸ್ಥ ಗೊಂಡ ಯುವಕನನ್ನು ಪರೀಕ್ಷಿಸಿದ ಸ್ಥಳೀಯ ವೈದ್ಯರು ಕೆಎಂಸಿಗೆ ಹೋಗುವಂತೆ ಸೂಚಿಸಿದರು. ಪರೀಕ್ಷಿಸಿದ ವೈದ್ಯರು ಇಲಿಜ್ವರ ಎಂಬುದಾಗಿ ತಿಳಿಸಿದ್ದಾರೆ. ಮೂತ್ರಪಿಂಡಗಳಿಗೂ ತೊಂದರೆಯಾಗಿದ್ದು ಚಿಕಿತ್ಸೆ ಪ್ರಾರಂಭವಾಗಿದೆ. ರೋಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚಿಕಿತ್ಸಾ ವೆಚ್ಚ ರೂ. 3.50 ಲಕ್ಷ ಅಂದಾಜಿಸಲಾಗಿದೆ. ಮನೆಯವರಿಗೆ ಚಿಕಿತ್ಸಾ ವೆಚ್ಚ ಭರಿಸಲು ಅಸಾಧ್ಯವಾಗಿದ್ದು ಸಹೃದಯ ದಾನಿಗಳ ನೆರವು ಕೋರಲಾಗಿದೆ. ಸಹಕರಿಸುವವರು ರೋಗಿಯ ಸಹೋದರ ಹರ್ಷೇಂದ್ರ ಅವರ ಗೂಗಲ್ ಪೇ ನಂಬರ್ 9686289195ಹಾಗೂ ಯೂನಿಯನ್ ಬ್ಯಾಂಕಿನ ಖಾತೆ ಸಂಖ್ಯೆ 520101000067292 IFSC UBIN0900010 ನೀಡಬಹುದು.

ವಿಶು ಶೆಟ್ಟಿ ಅಂಬಲಪಾಡಿ ರೂ.20,000/- ನೀಡಿ,ದ್ದು, ಅವರ ಮನವಿಗೆ ಸ್ಪಂದಿಸಿ ಶ್ರೀ ಕೃಷ್ಣ ಯೋಗ ಕೇಂದ್ರ ಉಡುಪಿ ರೂ.20,000/-, ಅಂಬಲಪಾಡಿ ದೇವಸ್ಥಾನದ ನೌಕರರು ರೂ.15,000/-, ಕೆಮ್ಮುತ್ತೂರು ಕೃಷ್ಣ ಮೂರ್ತಿ ಭಟ್ ರೂ. 10,000/-, ಶ್ರೀ ಕೃಷ್ಣ ಉಡುಪ ಅಂಬಾಗಿಲು 10,000/-, ಕರುಣಾಕರ ಕೋಟ ರೂ. 5,000/- ಒಟ್ಟು ರೂ.80,000/- ದಾನಿಗಳು ನೀಡಿ ಸಹಕರಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!