ಮುಂಬಯಿ ವಾಪಸಿಗರ ಸಮ್ಮಿಲನ

 ಉಡುಪಿ/ಮುಂಬಯಿ: ಮುಂಬಯಿಯಲ್ಲಿರುವ ಕನ್ನಡಿಗ, ತುಳುವರಿಗೆ ಊರೆಂದರೆ ವಿಶೇಷ ಅಭಿಮಾನ, ಹೆಮ್ಮೆ. ಎಂದು ಶ್ರೀ ಅಂಬಲಪಾಡಿ ದೇವಾಲಯದ ಆಡಳಿತ ಮೊಕ್ತೇಸರ ಡಾ. ನಿ.ಬೀ.ವಿಜಯ ಬಲ್ಲಾಳ್ ಹೇಳಿದರು. ಅವರು ಬಲಿಯೇಂದ್ರ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಂಬಯಿಯಲ್ಲಿ ಅಲ್ಲಿಯವರೊಂದಿಗೆ ಉತ್ತಮ ಬದುಕು ಕಟ್ಟಿಕೊಂಡ ನಮ್ಮವರು ವಾಪಸಿಗರಾದ ಮೇಲೂ ಊರಿನಲ್ಲಿ ಸಾಮರಸ್ಯದ ಸಾಧನಾ ಪೂರ್ಣ ಬದುಕು ಕಟ್ಟಿ ಕೊಳ್ಳಿ ಎಂದು ಅವರು ಹಾರೈಸಿದರು. ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಕನ್ನಡ ಸೇವಾ ಸಂಘ ಮುಂಬಯಿ ಮತ್ತು ಉಡುಪಿ ಜಿಲ್ಲೆಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಮುಂಬಯಿ ವಾಪಸಿಗರ ಸಮ್ಮಿಲನವನ್ನು ಅಂಬಲಪಾಡಿ ದೇವಾಲಯದ ಭವಾನಿ ಮಂಟಪದಲ್ಲಿ ಆಯೋಜಿಸಿತ್ತು. ಬದುಕಿನ ಯಶಸ್ಸಿಗೆ,ಪ್ರೇರಣೆಗಳಿಗೆ ವಿಶಿಷ್ಟ ಕಲ್ಪನೆಯನ್ನು ಮುಂಬಯಿ ಕೊಟ್ಟಿದೆ. ನನ್ನ ಸಾಧನೆ ಮತ್ತು ಯಶಸ್ಸುಗಳ ಹಿಂದೆ ಮುಂಬಯಿಯ ಪಾಲಿದೆ. ಬಾಳ ಸಂಗಾತಿ ಡಾ.ಸರಸ್ವತಿಯನ್ನು ಕೂಡಾ ಕರುಣಿಸಿದ್ದೆ ಮುಂಬಯಿ ಎಂದು ಸಮ್ಮೇಳನಾಧ್ಯಕ್ಷ ಕನ್ನಡ ವಿಶ್ವ ವಿದ್ಯಾಲಯ ಹಂಪಿಯ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ಹೇಳಿದರು. ಮುಂಬಯಿಯಲ್ಲಿ ಗೆದ್ದವರ ಜೊತೆವರೂ ಇದ್ದಾರೆ,ಗೆದ್ದವರೂ ಇದ್ದಾರೆ.ಎಲ್ಲರೂ ಯಶಸ್ಸಾಗಿದ್ದಾರಂತಲ್ಲ,ಆದರೆ ಬದುಕಿನ ಹಾದಿಯನ್ನು ಕಂಡು ಕೊಳ್ಳಲು ಸಹಾಯಕವಾಗಿ ನಿಂತು ಕೊಂಡಿದೆ ಎಂದ ಅವರು ಮುಂಬಯಿಯಲ್ಲಿ ತಮ್ಮ ಬೆಳವಣಿಗೆಯಲಚಲಕ ಸಹಾಯ ಹಸ್ತ ನೀಡಿದೆ ಎಂದರು. ತಾನೊಬ್ಬ ಕಲಾವಿದನಾಗಿ ಸಾಧನೆ ಮಾಡಲು ಮುಂಬಯಿಯ ನೆಲ ಕಲಿಸಿದ ಪಾಠವೇ ಮುಖ್ಯಕಾರಣ . ಮುಂಬಯಿಯ ನೆನಪುಗಳ ಬುತ್ತಿ ಅಗಾಧವಾಗಿದೆ ಎಂದು ಮುಖ್ಯ ಭಾಷಣಕಾರರಾಗಿದ್ದ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಹೇಳಿದರು. ಡಾ.ಶ್ರೀನಾಥ ಅವರು ಮಾತನಾಡಿ ಡಾ.ಶೇಖರ ಅಜೆಕಾರು ಅವರ ಮತ್ತೊಂದು ಹೊಸ ಕಲ್ಪನೆ ಎಂದು ಪ್ರಶಂಸಿದರು. ಡಾ.ಗಣನಾಥ ಎಕ್ಕಾರು ಮುಂಬಯಿ ಅನುಭವಗಳ ಮುನ್ನುಡಿಗಳನ್ನಾಡಿದರು. ಪತ್ರಕರ್ತ ಡಾ.ಎಸ್.ಎಸ್ ಪಾಟೀಲ್. ಮಲ್ಪೆ ಲಯನ್ಸ್ ಕ್ಲಬ್ ಅಧ್ಯಕ್ಷ ಕರುಣಾಕರ ಬಂಗೇರ,ಕನ್ನಡ ಸೇವಾ ಸಂಘದ ಅಧ್ಯಕ್ಷ ಆರ್.ಜಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಗುರುಪುರ, ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಸಂಘಟಕ ಕನ್ನಡ ಸೇವಾ ಸಂಘ ಪೊವಾಯಿ ಸ್ಥಾಪಕಾಧ್ಯಕ್ಷ ಡಾ.ಶೇಖರ ಅಜೆಕಾರು ಸ್ವಾಗತಿಸಿದರು. ಪ್ರಾಧ್ಯಾಪಕ ಮಂಜಪ್ಪ ಗೋಣಿ ಮತ್ತು ಶಿಕ್ಷಕಿ ಪ್ರೇಮಾ ಮೂಲ್ಕಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಮಕ್ಕಳ ವಿಭಾಗದ ಸಂಚಾಲಕ ಸುನಿಧಿ ಎಸ್. ಅಜೆಕಾರು ವಂದಿಸಿದರು. ವಿಶೇಷತೆಗಳು: ಮುಂಬಯಿಯಿಂದ ವಾಪಸಾದ ಕನ್ನಡಿಗ- ತುಳುವರ ಭೇಟಿಗೆ ಸಮ್ಮೇಳನ ಸಾಕ್ಷಿಯಾಯಿತು . ಮುಂಬಯಿಯ ಐವರು ಸಾಧಕರು ಸೇರಿ ಬೆಳ್ಳಿ ಹಬ್ಬದ ನೆನಪಲ್ಲಿ 25 ಮಂದಿ ಸಾಧಕರನ್ನು ತುಳುನಾಡ ರಜತ ಸಿರಿ ಪ್ರಶಸ್ತಿ ಮತ್ತು 5 ಸಂಸ್ಥೆಗಳನ್ನು ತುಳುನಾಡ ಸಂಘ ಸಿರಿ ಪ್ರಶಸ್ತಿಯನ್ನು ಚಿನ್ನದ ಪದಕದೊಂದಿಗೆ ಗೌರವಿಸಲಾಯಿತು. ಸಮ್ಮೇಳನದ ಕಾವ್ಯ ಮತ್ತು ಬರಹ ಸ್ಪರ್ಧೆಯಲ್ಲಿ ಪುರಸ್ಕೃತ ರಾದವರಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಗ್ರಾಮೀಣ ಕಲಾವಿದರಾದ ಧರ್ಮಣ್ಣ ಮಹಾಂತ್’, ಸುರೇಶ ಮಹಾಂತ್, ರವಿ ಮಹಾಂತ್ ಸಂಗಡಿಗರ ಭಜನಾ ಕಾರ್ಯಕ್ರಮ ಗಮನಸೆಳೆಯಿತು. ಪ್ರಧಾನಮಂತ್ರಿ ಬಾಲ ಪುರಸ್ಕಾರ ಪುರಸ್ಕೃತೆ ರೆಮೊನಾ ಇವೆಟ್ ಪಿರೇರಾ ಅವರ ನಾಟ್ಯ ವಿಶೇಷ ಗಮನಸೆಳೆಯಿತು. ಡಾ.ಜ್ಯೋತಿ ಚೆಳ್ಯಾರು ಅವರು ಸಮ್ಮೇಳನಾಧ್ಯಕ್ಷರೊಂದಿಗೆ ಮಹತ್ವಪೂರ್ಣ ಸಂವಾದವನ್ನು ನಡೆಸಿಕೊಟ್ಟರು. ಪ್ರೇಕ್ಷಕರಿಗೆ ಸನ್ಮಾನದಲ್ಲಿ ಅದೃಷ್ಟಶಾಲಿಯಾದ ವಿಶ್ವೇಶ ಈರಣ್ಣ ಕುರುವತ್ತಿ ಗೌಡರ್ ಅವರನ್ನು ಎಂ.ಕೆ ವಿಜಯ ಕುಮಾರ್ ಸನ್ಮಾನಿಸಿದರು. ಪ್ರಾಪ್ತಿ ಶೆಟ್ಟಿ ಮಂಗಳೂರು,ಕಾರುಣ್ಯ ಎಂ.ಶೆಟ್ಟಿ, ಪ್ರೀತಮ್ ದೇವಾಡಿಗ ಮುದ್ರಾಡಿ, ಸುನಿಜ ಅಜೆಕಾರು, ದಿಯಾ ಉದಯ್ ಮುಲ್ಕಿ, ಸಾನ್ನಿಧ್ಯ ಕವತ್ತಾರು, ಪ್ರಕೃತಿ ಆಚಾರ್ಯ ಅಜೆಕಾರು, ಸುರೇಶ ಪೈ ಉಡುಪಿ, ಸಂಧ್ಯಾ ಉಮೇಶ್ ಧರ್ಮಸ್ಥಳ, ಲಿಂಗಪ್ಪ ಶಿಬಾಜೆ, ಕರುಣಾ ಪೈ, ರಾಘವೇಂದ್ರ ಆಚಾರ್ಯ ಬಾರ್ಕೂರು ಮೊದಲಾದವರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮ್ಮಿಲನಕ್ಕೆ ಹೊಸ ಕಳೆ ತಂದರು.  ಡಾ.ಶೇಖರ ಅಜೆಕಾರು ಅವರ ಛಾಯಾಚಿತ್ರ ಪ್ರದರ್ಶನ ” ಛಾಯಾ ಸಂಭ್ರಮ” ಗಮನ ಸೆಳೆಯಿತು.  ವಿಜಯ ವರಂಗ ಅವರ ಕೊಂಬು ಸ್ವರ ಕಿವಿಗೆ ಸಮ್ಮೇಳನದ ಕಂಪು ನೀಡಿತು. ಮುಂಬಯಿಯಿಂದ ಕಾರ್ಯಕ್ರಮ ಕ್ಕಾಗಿ ಬಂದವರು,ವಾಪಸಿಗರು, ಆಸಕ್ತರ ಸಮ್ಮಿಲನ ಇದಾಗಿತ್ತು.

 
 
 
 
 
 
 
 
 

Leave a Reply