ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು – ಶ್ರೀ ನಾಗರಾಜ ಮೂರ್ತಿ

ದಿನಾಂಕ 04.08.2022 ರಂದು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಇದರ ವತಿಯಿಂದ ಆಯೋಜಿಸಿದ 2021-22ನೇ ಸಾಲಿನ ರಕ್ಷಕ-ಶಿಕ್ಷಕ ಸಮಾವೇಶವು ಪುರಭವನ, ಉಡುಪಿ ಇಲ್ಲಿ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಶ್ರೀಯುತ ನಾಗರಾಜ ಮೂರ್ತಿ ಕ್ಲಿನಿಕಲ್ ಸೈಕಾಲಾಜಿಸ್ಟ್ ಆಪ್ತ ಸಲಹಗಾರರು ಡಾ. ಎ.ವಿ ಬಾಳಿಗ ಆಸ್ಪತ್ರೆ, ದೊಡ್ಡಣಗುಡ್ಡೆ ಉಡುಪಿ, ಇವರು ಪೋಷಕರು ತಮ್ಮ ಬಿಡುವಿನ ಸಮಯವನ್ನು ಮಕ್ಕಳ ಜೊತೆ ಕಾಲೇಜಿನ ಆಗುಹೋಗುಗಳ ಬಗ್ಗೆ ವಿಚಾರಿಸುತ್ತ, ಅವರನ್ನು ಸೇಹಿತರಾಗಿ ಕಂಡು ಮಕ್ಕಳ ಮೇಲೆ ವಿಶೇಷ ಗಮನವನ್ನು ಕೊಟ್ಟು, ಅವರ ಶೈಕ್ಷಣಿಕ ಜೀವನದ ಅಭಿವೃದ್ಧಿಯಲ್ಲಿ ಸಹಕರಿಯಾಗಬೇಕು ಎಂದು ತಿಳಿಸಿದರು. ಈ ಸಮಾವೇಶದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ 200 ಕ್ಕೂ ಮಿಕ್ಕಿದ ಪೋಷಕರು ಉಪಯುಕ್ತ ಮಾಹಿತಿಯನ್ನು ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಭಾಸ್ಕರ ಶೆಟ್ಟಿ ಎಸ್ ರವರು ಕಾಲೇಜಿನ ಸಮಗ್ರ ಚಿತ್ರಣವನ್ನು ನೀಡುವುದರ ಜೊತೆಗೆ ಸಂಸ್ಥೆಯ ಮುಂದಿನ ಕಾರ್ಯ ಯೋಜನೆಗಳನ್ನು ಪೋಷಕರ ಮುಂದಿಟ್ಟರು. ಈ ಸಂದರ್ಭದಲ್ಲಿ ಕಳೆದ ಸಾಲಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಕೆ. ರಾಜೇಶ್ ಮತ್ತು ಕಾರ್ಯದರ್ಶಿಯಾಗಿದ್ದ. ಶ್ರೀಮತಿ ಲತಾ ರಾವ್ ರವರನ್ನು ಸನ್ಮಾನಿಸಲಾಯಿತು. ನಂತರ ಕನ್ನಡ ವಿಭಾಗದ ಡಾ. ರವಿರಾಜ ಶೆಟ್ಟಿ ಹಾಗೂ ರಾಜ್ಯಶಾಸ್ತç ವಿಭಾಗದ ಶ್ರೀ. ಮಂಜುನಾಥ ರವರು ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ನಿಕಾಯದ ಡೀನ್ ಶ್ರೀಮತಿ ಗೌರಿ ಎಸ್ ಭಟ್, ವಿಜ್ಞಾನ ನಿಕಾಯದ ಡೀನ್ ಶ್ರೀ. ರಾಮಚಂದ್ರ ಅಡಿಗ ಜಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ. ವಾಣಿ ಆರ್ ಬಲ್ಲಾಳ್ ರವರು ಉಪಸ್ಥಿತರಿದ್ದರು. ರಕ್ಷಕ ಶಿಕ್ಷಕ ಸಂಘದ ಸಂಚಾಲಕರಾದ ಡಾ. ದಿವ್ಯ ಎಂ.ಎಸ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಕೃಷ್ಣ ಭಟ್ ರವರು ಎಲ್ಲರನ್ನು ವಂದಿಸಿದರು ಹಾಗೂ ಶ್ರೀಮತಿ ಶೋಭಾ ಆರ್ ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 

Leave a Reply