ಎಲ್ಲದಕ್ಕೂ ಸೈ ಎನ್ನಿಸಿಕೊಂಡ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ

ಕೋಟ:ಇಲ್ಲಿನ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಇವರ ಕಾರ್ಯಭಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿ ವೈರಲ್ ಆದ ಘಟನೆ ಮಂಗಳವಾರ ನಡೆದಿದೆ.

ಸಾಮಾನ್ಯವಾಗಿ ಪಂಚಾಯತ್ ಅಧ್ಯಕ್ಷರೆಂದರೆ ಪಂಚಾಯತ್‌ಗೆ ಬಂದು ಕುಳಿತು ಅಲ್ಲಿರುವ ಛಕ್‌ಗಳಿಗೆ ,ಫೈಲ್‌ಗಳಿಗೆ ಸಹಿ ಹಾಕುವುದು ಸೇರಿದಂತೆ ಕಛೇರಿ ಒಳಗಿನಕಾರ್ಯಕ್ಕೆ ಸೀಮಿತಗೊಳ್ಳುತ್ತಾರೆ ಆದರೆ ಇಲ್ಲಿನ ಈ ಅಧ್ಯಕ್ಷರ ನಡೆ ಪಂಚಾಯತ್‌ನ ಎಲ್ಲಾ ಕೆಲಸಗಳಿಗೂ ಸೈ ಎನ್ನಿಸಿಕೊಳ್ಳುವ ಜಾಯಮಾನ ಅಜಿತ್ ದೇವಾಡಿಗರಾಗಿದ್ದಾರೆ.
ಕೋಟ ಪರಿಸರಸ ಸರಳ ವ್ಯಕ್ತಿತ್ವದ ಸ್ಥಳೀಯ ಜನಪ್ರತಿನಿಧಿ ಎಂಬ ಹೆಗ್ಗಳಿಗೆ ಈ ದೇವಾಡಿಗರಿಗೆ ಸಲ್ಲುತ್ತದೆ.ಕೋಟದ ಹಾಲಾಡಿ ಎಂದೇ ಖ್ಯಾತಿ ಪಡೆದಿರುವ ಇವರು ಮಂಗಳವಾರ ತನ್ನ ಪಂಚಾಯತ್ ಎಸ್‌ಎಲ್‌ಆರ್‌ಎಂ ಘಟಕದ ವಾಹನ ಚಾಲಕನ ರಜೆಯಿಂದ ಕಸ ಸಂಗ್ರಹಣೆ ಸಾಧ್ಯವಾಗದೆ ಘಟಕದ ಮುಖ್ಯಸ್ಥರು ತಲೆಮೇಲೆ ಕೈ ಇತ್ತು ಕೂರುವ ಸ್ಥಿತಿಯಲ್ಲಿದ್ದನ್ನು ಗಮನಿಸಿದ ಅಧ್ಯಕ್ಷ ಅಜಿತ್ ತಾನೇ ವಾಹನ ಏರಿ ಚಲಾಯಿಸಿಕೊಂಡು ಇಡೀ ದಿನ ತ್ಯಾಜ್ಯ ಸಂಗ್ರಹದ ಉಸ್ತುವಾರಿಯೊಂದಿಗೆ ಜನಸಾಮಾನ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅದಲ್ಲದೆ ಪಂಚಾಯತ್‌ನಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ತಾನೆ ಕುರ್ಚಿ ಹಾಕಿ ಜನಸಾಮಾನ್ಯರಲ್ಲಿ ಸೈ ಎನಿಸಿಕೊಂಡಿದ್ದಾರೆ.
ತಾನೊಬ್ಬ ಪಂಚಾಯತ್ ಅಧ್ಯಕ್ಷ ಎನ್ನುವ ಅಹಂ ಇಲ್ಲದೆ ಕಾರ್ಯನಿರ್ವಹಿಸುವ ಇಂಥಹ ಜನಪ್ರತಿನಿಧಿಗಳು ಇತರರಿಗೆ ಜನಪ್ರತಿನಿಧಿಗಳಿಗೆ ಮಾದರಿ ಎಂದರೆ ತಪ್ಪಾಗಲಾರದು.

Leave a Reply