Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಎಎಫ್ಐ ಉಡುಪಿ ಜಿಲ್ಲೆ :- ವೈದ್ಯರ ದಿನಾಚರಣೆ

 ಉಡುಪಿ : ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ವತಿಯಿಂದ ವೈದ್ಯರ ದಿನಾಚರಣೆ , ಕುಟುಂಬೋತ್ಸವ ಮತ್ತು ವೈದ್ಯ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ ಜುಲೈ : 10 ರಂದು ಮಣಿಪಾಲ್ ಇನ್ ಹೊಟೇಲ್ ಸಭಾಭವನದಲ್ಲಿ ನಡೆಯಿತು.
ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ತುಳು ರಂಗಭೂಮಿಯ ಹೆಸರಾಂತ ಕಲಾವಿದ ಅರವಿಂದ್ ಬೊಳಾರ್ ವೈದ್ಯರು ನಮ್ಮ ಕಣ್ಣಿಗೆ ಕಾಣುವ ದೇವರಿದ್ದಂತೆ ಅವರು ತನ್ನ ಕುಟುಂಬಕ್ಕೆ ಸಮಯ ನೀಡದೆ ರೋಗಿಗಳ ಆರೈಕೆಯಲ್ಲಿ ಸಮಯ ಕಳೆಯುತ್ತಾರೆ. ವೈದ್ಯರಿಗೆ ಸಿಗುವ ಈ ಅಪೂವ೯ ಅವಕಾಶ ಬೇರೆ ಯಾರಿಗೂ ಸಿಗಲು ಸಾದ್ಯವಿಲ್ಲ ಎಂದರು.
ಮುಖ್ಯ ಅತಿಥಿ ಕಾನೂನು ಸಲಹೆಗಾರ ಮತ್ತು ಹೆಸರಾಂತ ವಕೀಲರಾದ ವಿವೇಕಾನಂದ ಪಣಿಯಾಲ ಮಾತನಾಡಿ, ವೈದ್ಯರಿಗೆ ನಮ್ಮ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಬೇಕು ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ವೈದ್ಯರಿಗೆ ತೊಂದರೆ ಕೊಡಲಾಗುತ್ತಿದೆ.ಇದು ಸಲ್ಲದು ಎಂದರು.
ಎ.ಎಫ್.ಐ ರಾಜ್ಯ ಕಾಯ೯ದಶಿ೯ ಡಾII ಸೋಮ ಶೇಖರ್ ಹುದ್ದಾರ್ , ವೈದ್ಯರು ಸಮಾಜದಲ್ಲಿ ಉತ್ತಮವಾಗಿ ಕಾಯ೯ ನಿವ೯ಹಿಸಲು ಅವರ ಕುಟುಂಬದವರ ಬೆಂಬಲ ಮತ್ತು ಪ್ರೋತ್ಸಾಹ ಕಾರಣ ಹೀಗಾಗಿ ಈ ರೀತಿಯ ಕುಟುಂಬೋತ್ಸವ ಉತ್ತಮವಾದ ಕೆಲಸ ಎಂದರು.

ಗಿರಿಜಾ ಎಂಟರ್ ಪ್ರೈಸಸ್ ಮಾಲಕ ರವೀಂದ್ರ ಶೆಟ್ಟಿ ಶುಭ ಹಾರೈಸಿದರು.
ಎಸ್.ಡಿ.ಎಂ ಆಯುವೇ೯ದಿಕ್ ಕಾಲೇಜಿನ ಪ್ರಾಂಶುಪಾಲೆ ಡಾII ಮಮತಾ ಶೆಟ್ಟಿ ಶುಭ ಹಾರೈಸಿದರು. ಈ ಸಂದಭ೯ದಲ್ಲಿ ಹಿರಿಯ ವೈದ್ಯರುಗಳಾದ ಡಾ|| ಜಿ.ಎಂ ಕಂಠಿ , ಕಾಕ೯ಳ ತಾಲೂಕಿನ ಡಾII ಭರತೇಶ್ ಎ, ಕುಂದಾಪುರದ ಡಾII ಸುರೇಶ್ ಶೆಟ್ಟಿ ನಾಡಾ ರವರಿಗೆ ವೈದ್ಯ ಸಿರಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಎ.ಎಫ್.ಐ ಜಿಲ್ಲಾಧ್ಯಕ್ಷ ಡಾII ಎನ್.ಟಿ ಅಂಚನ್ ವಹಿಸಿದ್ದರು. ವೇದಿಕೆಯಲ್ಲಿ ಕುಂದಾಪುರ ತಾಲೂಕು ಅಧ್ಯಕ್ಷ ಡಾII ರವೀಂದ್ರ, ಕಾಕ೯ಳ ತಾಲೂಕು ಅಧ್ಯಕ್ಷ ಡಾII ಸುದಶ೯ನ್ ಹೆಬ್ಬಾರ್, ಉಡುಪಿ ತಾಲೂಕು ಅಧ್ಯಕ್ಷ ಡಾII ಮನೋಜ್ ಕುಮಾರ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಡಾII ರವಿ ಪ್ರಸಾದ್ ಹೆಗ್ಡೆ ನಿರೂಪಿಸಿದರು. ಡಾII ಸತೀಶ್ ರಾವ್ ವಂದಿಸಿದರು.
ಈ ಸಂದಭ೯ದಲ್ಲಿ ವೈದ್ಯರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ವಿವಿಧ ಸ್ಪಧ೯, ಸಾಂಸ್ಕೃತಿಕ ಕಾಯ೯ಕ್ರಮ ನಡೆಯಿತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!