ಐತಿಹಾಸಿಕ ಉಳಿಕೆಗಳ ರಕ್ಷಣೆ ಇಂದಿನ ಅಗತ್ಯ: ಪುರಾತತ್ವ ಸಂಶೋಧಕ ಸುಭಾಸ್

ಅದಮಾರು,ಅ.31: ಇತಿಹಾಸ ಸಂಶೋಧನೆ ಮತ್ತು ಗುರುತಿಸುವಿಕೆಯಿಂದ ನಮ್ಮ ಸಾಂಸ್ಕೃತಿಕ ಅರಿವು ವಿಸ್ತಾರವಾಗುತ್ತದೆ.ಆದುದರಿಂದ ಐತಿಹಾಸಿಕ ಮಹತ್ವವುಳ್ಳ‌ ಪುರಾತನ ಅವಶೇಷಗಳನ್ನು ಕಾಪಿಡಬೇಕಾದುದು ಇಂದಿನ ಅಗತ್ಯ ಎಂದು ಪುರಾತತ್ವ ಸಂಶೋಧಕ ಬಂಟಕಲ್ಲಿನ‌ ಸುಭಾಸ್ ನಾಯಕ್ ಅವರು ಹೇಳಿದ್ದಾರೆ.
ಅವರು ಅದಮಾರಿನಲ್ಲಿ‌ ಆದರ್ಶ ಸಂಘಗಳ ಒಕ್ಕೂಟವು ಸ್ಥಳೀಯ ಸರ್ವೋದಯ ಸಮುದಾಯ ಭವನದಲ್ಲಿಆಯೋಜಿಸಿದ ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ‌ಯ “ಐತಿಹಾಸಿಕ ಪರಂಪರೆ ಉಳಿಸಿ ಜನಜಾಗೃತಿ ಅಭಿಯಾನ”
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.
ಪುರಾತನ ದೇವಾಲಯಗಳ ಜೀರ್ಣೋದ್ಧಾರ ಸಂದರ್ಭದಲ್ಲಿ ನಡೆಯುವ ಐತಿಹಾಸಿಕ ಮಹತ್ವದ ವಸ್ತುಗಳ ಅವಗಣನೆ, ಪರಿಸರದಲ್ಲಿರುವ ಕೋಟೆಕೊತ್ತಲಗಳ ನಾಶ,ಶಿಲಾಶಾಸನಗಳ ದಿವ್ಯನಿರ್ಲಕ್ಷ್ಯ,ನಾಣ್ಯಗಳ ದುರುಪಯೋಗ ,
ತಾಳೆಗರಿಗಳನ್ನು ರಕ್ಷಿಸದೆ ಇರುವುದು ಮುಂತಾದುದು ನಡೆಯುತ್ತಿವೆ.ಇಂತಹ ಐತಿಹಾಸಿಕ ಉಳಿಕೆಗಳನ್ನು ನಾಶಗೊಳಿಸದೆ ರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸುಭಾಸ್ ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಸುದರ್ಶನ ವೈ.ಎಸ್.ಅಧ್ಯಕ್ಷತೆ ವಹಿಸಿದ್ದರು.ಉದಯ ಕೆ.ಶೆಟ್ಟಿ ಎರ್ಮಾಳು ಅವರು ಉದ್ಘಾಟಿಸಿದರು.ನಿವೃತ್ತ ಪ್ರಾಂಶುಪಾಲ ಬಿ.ಆರ್.ನಾಗರತ್ನ , ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ ,ಕೆ.ಎಲ್.ಕುಂಡಂತಾಯ,
ಆದರ್ಶ ಯುವಕ ಸಂಘದ ಅಧ್ಯಕ್ಷ ಸಂತೋಷ ಜೆ.ಶೆಟ್ಟಿ,ಆದರ್ಶ ಮಹಿಳಾಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಲತಾ ಆರ್.ಆಚಾರ್ಯ ಅವರು ಉಪಸ್ಥಿತರಿದ್ದರು.

ಪ್ರಾಂಶುಪಾಲ ರಾಮಕೃಷ್ಣ ಪೈ
ಅವರಿಗೆ ಗೌರವಾರ್ಪಣೆ

ಅದಮಾರಿನ ಆದರ್ಶ ಸಂಘಗಳ ಒಕ್ಕೂಟವು‌ ಅದಮಾರು ಪ.ಪೂ.ಕಾಲೇಜಿನ‌ ಪ್ರಾಂಶುಪಾಲರಾಗಿದ್ದು ನಿವೃತ್ತರಾಗಲಿರುವ ರಾಮಕೃಷ್ಣ ಪೈ ಅವರನ್ನು‌ಅಭಿನಂದಿಸಿ ಗೌರವಿಸಿತು.
ಅದಮಾರಿನ ಶೈಕ್ಷಣಿಕ ಇತಿಹಾಸಕ್ಕೆ ತಮ್ಮದೇ ಆದ ಕೊಡುಗೆ ನೀಡಿದ, ಅದಮಾರಿನ ನಿವಾಸಿಯೂ ಆಗಿದ್ದು ಜನಪ್ರೀತಿ ಪಡೆದ ಸರಳ,ಸಜ್ಜನ ರಾಮಕೃಷ್ಣ ಪೈ ಅವರನ್ನು ನಿವೃತ್ತ ಪ್ರಾಂಶುಪಾಲ ಬಿ.ಆರ್.ನಾಗರತ್ನ ಅವರು ಗೌರವಿಸಿದರು.ಶ್ರೀಮತಿ‌ ಶ್ಯಾಮಲಾ ನಾಗರತ್ನ ಅವರು ಅಭಿನಂದನೆಯ ಮಾತುಗಳನ್ನಾಡಿದರು.
ಸಂತೋಷ ಜೆ.ಶೆಟ್ಟಿ ಸ್ವಾಗತಿಸಿದರು,ಲತಾ ಆರ್.
ಆಚಾರ್ಯ ವಂದಿಸಿದರು.ಗಣೇಶ ಸಾಲಿಯಾನ್ ಕಾರ್ಯಕ್ರಮನಿರ್ವಹಿಸಿದರು.

 
 
 
 
 
 
 
 
 

Leave a Reply