ಗುರಿ ನಿರ್ಧರಿಸಿದ ಆದರ್ಶ ಚಿಂತಕ ಶ್ರೀ ಶ್ರೀ ವಿಬುಧೇಶ ತೀರ್ಥರು -ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ

ಅಧ್ಯಯನ ಶೀಲರಿಗೆ ಗುರಿ ಇದ್ದಾಗ ಮುಂದಿನ ಮಾರ್ಗ ಸ್ಪಷ್ಟವಾಗುತ್ತದೆ. ಅಂತಹ ಗುರಿಯನ್ನು ನಿರೂಪಿಸಲು ಆದರ್ಶ ಚಿಂತಕರ ಅಗತ್ಯವಿದೆ. ಅದಮಾರುಮಠ ಶಿಕ್ಷಣ ಮಂಡಳಿಯ ಮೂಲಕ ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಶ್ರೀ ವಿಬುಧೇಶ ತೀರ್ಥ ಶ್ರೀಪಾದರು ಅಂತಹ ಗುರಿಗಳನ್ನು ತೋರಿಸಿದ ಗುರುವಾಗಿದ್ದರು ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ (ರಿ) ಬೆಂಗಳೂರು-ಉಡುಪಿ ಇದರ ಅಧ್ಯಕ್ಷರಾಗಿರುವ ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ. ಉಡುಪಿ ಪೂರ್ಣಪ್ರಜ್ಞ ಅಡಿಟೋರಿಯಂನಲ್ಲಿ ನಡೆದ ‘ಸಂಸ್ಥಾಪಕರ ದಿನ’ದ ಶುಭಾವಸರದಲ್ಲಿ ಶ್ರೀಗಳು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಶ್ರೀ ವಿಬುಧೇಶ ತೀರ್ಥರು ತರ್ಕ, ವೇದಾಂತ, ಮೀಮಾಂಸೆಯ ಅಧ್ಯಾತ್ಮಿಕ ಪ್ರಪಂಚದ ವಿಜ್ಞಾನಿ ಮಾತ್ರವಲ್ಲ ಭೌತ ಪ್ರಪಂಚದ ವೈಜ್ಞಾನಿಕ ಬೆಳವಣಿಗೆಯಲ್ಲಿ ಸದಾ ಆಸಕ್ತರು, ವಿಜ್ಞಾನಿಗಳ-ಚಿಂತಕರ ಜೊತೆ ಅವರ ಶೈಕ್ಷಣಿಕ ಸಂಬAಧ ಶಾಶ್ವತವಾಗಿ ಇರುವಂಥದ್ದು ಎಂದು ಇದೇ ಸಂದರ್ಭದಲ್ಲಿ ಶ್ರೀಗಳು ಉಲ್ಲೇಖಿಸಿದರು.

`ವಿಸ್ತರಣಾ ಕಾರ್ಯಕ್ರಮ’ದ ಅಂಗವಾಗಿ ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಆಗಮಿಸಿದ ಜವಹರಲಾಲ್ ನೆಹರು ಪ್ರಚಲಿತ ವಿಜ್ಞಾನ ಸಂಶೋಧನಾ ಕೇಂದ್ರ ಬೆಂಗಳೂರು ಇಲ್ಲಿನ ಡೀನ್ ಪ್ರೊ. ವಿದ್ಯಾಧಿರಾಜ ಎನ್. ಎಸ್ , ಅದೇ ಸಂಸ್ಥೆಯ ಶ್ರೀ ವಿನಾಯಕ್ ಕೆ. ಪಟ್ಟರ್, ಅಲ್ಲಿ ಸಂಶೋಧನಾರ್ಥಿಯಾಗಿರುವ ಪಿ.ಪಿ.ಸಿ. ಪ್ರಾಕ್ತನ ವಿದ್ಯಾರ್ಥಿನಿ ಕು. ಧೀಮಹಿ ಮತ್ತು ಪೂರ್ಣಪ್ರಜ್ಞ ಸಂಸ್ಥೆಗಳ ಗೌರವ ಕಾರ್ಯದರ್ಶಿಗಳಾದ ಡಾ. ಚಂದ್ರಶೇಖರ್ ಜಿ.ಎಸ್, ಡಾ. ಶಶಿಕಿರಣ್ ಉಮಾಕಾಂತ್, ಸಿ.ಎ. ಪ್ರಶಾಂತ್ ಹೊಳ್ಳ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿ.ಪಿ.ಸಿ. ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ ಸ್ವಾಗತಿಸಿ ಪಿ. ಐ. ಎಂ. ನಿರ್ದೇಶಕ ಡಾ. ಭರತ್ ವಿ ವಂದನಾರ್ಪಣೆ ಗೈದರು. ಪ್ರಾಧ್ಯಾಪಕಿ ಡಾ. ಭಾರತಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.
ಆಡಳಿತಾಧಿಕಾರಿ ಡಾ. ಎ.ಪಿ ಭಟ್ ಅವರು ಸಂಯೋಜಿಸಿದ ಈ ಸಮಾರಂಭದಲ್ಲಿ ೨೦೨೧-೨೨ ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪೂರ್ಣಪ್ರಜ್ಞ ಪಿ.ಯು. ಕಾಲೇಜು ಉಡುಪಿಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಭವ್ಯಾ ನಾಯಕ್ ಹಾಗು ರ‍್ಯಾಂಕ್ ವಿದ್ಯಾರ್ಥಿಗಳಾದ ಸುಹಾಸ್ ಶೆಣೈ, ನೀತಾ ಕೆ ರಾವ್, ಮೋಹನ್ ಎಸ್ ಆರ್, ವೃದ್ಧಿ ಶೆಟ್ಟಿ, ಗಜಾನನ ನಾಯಕ್, ವೈಷ್ಣವಿ ಎಸ್, ಸ್ವಾತಿ ಆರ್ ಕಿಣಿ, ನಂದನ್ ಉಪಾಧ್ಯ ಮತ್ತು ಪಿ.ಪಿ.ಸಿಯ ಸಾಧಕ ವಿದ್ಯಾರ್ಥಿಗಳಾದ ಅಖಿಲಾ, ವೈಷ್ಣವಿ ಸರಳಾಯ, ಶ್ರೀ ಲಕ್ಷಿö್ಮ ರಾವ್, ಸುರಭಿ, ನಿಕ್ಷಿತಾ, ಭೂಮಿಕಾ ಉಡುಪ, ಶಹಜಹಾನ್ ಇಕ್ಬಾಲ್, ಸಮೃದ್ಧಿ ಇವರನ್ನು ಗೌರವಿಸಲಾಯಿತು.

 
 
 
 
 
 
 
 
 
 
 

Leave a Reply