ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್; ನಾಲ್ವರು ಸಾವು!

ನವದೆಹಲಿಯ ಸೀಮಪುರಿಯ ಡಿಟಿಸಿ ಡಿಪೋ ಪ್ರದೇಶದಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ವೇಗವಾಗಿ ಬಂದ ಟ್ರಕ್ ನಿದ್ರಿಸುತ್ತಿದ್ದವರ ಮೇಲೆ ಹರಿದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ರಕ್ ಸಮೇತ ಚಾಲಕ ಪರಾರಿಯಾಗಿದ್ದಾನೆ.

ಕರೀಂ, ಚೋಟ್ಟೆ ಖಾನ್, ಶಾ ಆಲಂ, ರಾಹುಲ್ ಮೃತರು. ಗಾಯಗೊಂಡ ಮನೀಶ್ ಹಾಗೂ ಪ್ರದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಟ್ರಕ್ ಚಾಲಕನ ಹುಡುಕಾಟದಲ್ಲಿದ್ದಾರೆ.

 
 
 
 
 
 
 
 
 

Leave a Reply