ಅಮೆರಿಕಾದಲ್ಲಿ “ಆಟ”ದ ಉದ್ಘಾಟನೆ ನಡೆಸಲಿರುವ ರಾಜರ್ಷಿ ಡಾ. ಡಿ ವೀರೇಂದ್ರ  ಹೆಗ್ಗಡೆ

ಅಮೆರಿಕಾದಲ್ಲಿ ನೆಲೆಸಿರುವ ತುಳುನಾಡಿನ ಭಾಂದವರೆಲ್ಲ ಒಟ್ಟಾಗಿ ಇತ್ತೀಚೆಗಷ್ಟೇ ಪ್ರಾರಂಭಿಸಿರುವ ಸಂಘಟನೆ “ಆಟ” (ಅಖಿಲ ಅಮೇರಿಕ ತುಳುವೆರೆ ಅಂಗಣ ಅಥವಾ ಆಲ್ ಅಮೇರಿಕ ತುಳು ಅಸ್ಸೊಸಿಯೆಷನ್) ಇದರ ಉದ್ಘಾಟನೆಯನ್ನು ನೆರವೇರಿಸಲು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಶ್ರೀ ಡಾ. ಡಿ ವೀರೇಂದ್ರ  ಹೆಗ್ಗಡೆಯವರು ವರ್ಚುಯಲ್ ವೇದಿಕೆಗೆ ಆಗಮಿಸಲಿದ್ದಾರೆ.
ಉಡುಪಿಯ ಪುತ್ತಿಗೆ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು ನ್ಯೂ ಜೆರ್ಸಿಯ. ಶ್ರೀ ಕೃಷ್ಣ ವೃಂದಾವನ ಕೃಷ್ಣ ಸನ್ನಿದಿಯಿಂದ ಹಾಗೂ ರೆವೆರೆಂಡ್ ಫಾಧರ್ ಡಾ ಸಿರಿಲ್ ಫೆರ್ನಾಂಡಿಸ್ ಇವರು ಶುಭಾರ್ಶಿವಚನ ನೆರವೇರಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಶ್ರೀ ಸರ್ವೋತ್ತಮ ಶೆಟ್ಟಿ ದುಬಾಯಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆದ್ಯಕ್ಷರಾದ ಶ್ರೀ ದಯಾನಂದ ಕತ್ತಲ್ಸಾರ್ ಇವರು ಆಗಮಿಸಲಿದ್ದಾರೆ. 

ವೇದಿಕೆಯಲ್ಲಿ ಆಟದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಭಾಸ್ಕರ ಶೇರಿಗಾರ್ ಹಾಗೂ. ತುಳುನಾಡಿನ ಖ್ಯಾತ ಕಲಾವಿದರಾದ ಶ್ರೀ ರಮೇಶ್ ಚಂದ್ರ, ವಿದುಷಿ ನಂದಿನಿ ರಾವ್ ಗುಜಾರ್, ಶ್ರೀ ಪಟ್ಲ ಸತೀಶ್ ಶೆಟ್ಟಿ, ಶ್ರೀ ರೂಪೇಶ್ ಶೆಟ್ಟಿ, ಬಲೇ ತೆಲಿಪಾಲೆ ಖ್ಯಾತಿಯ ಪ್ರಶಂಸ ಕಾಪು ಮತ್ತು ತಂಡ ಹಾಗೆಯೇ ನಾಡಿನ ಖ್ಯಾತ ಹಿನ್ನೆಲೆ ಗಾಯಕ ಶ್ರೀ ಗುರು ಕಿರಣ್ ಮತ್ತು ತಂಡ, ಮತ್ತು ಯಕ್ಷ ನೃತ್ಯ ತಂಡದವರಿಂದ ಉದ್ಘಾಟನಾ ಅವಧಿಯ ಮಾನೋರಂಜನಾ ಕಾರ್ಯಕ್ರಮವೂ ನಡೆಯಲಿದೆ. 

ಅಮೆರಿಕಾದಲ್ಲಿ ನೆಲೆಸಿರುವ ತುಳುನಾಡಿನ ಪ್ರತಿಭೆಗಳ ನೃತ್ಯ ನರ್ತನ ಗಾಯನ. ಇತ್ಯಾದಿ ಕಾರ್ಯಕ್ರಮಗಳನ್ನೂ ಯುಟ್ಯೂಬ್ ಮೂಲಕ ನೇರ ಪ್ರಸಾರದಲ್ಲಿ ನೋಡಬಹುದು. ಈ ಕೆಳಗಿನ ಯೂಟ್ಯೂಬ್ ಚಾನೆಲ್ ಅನ್ನು ವೀಕ್ಷಿಸಿ, ಸಬ್ಸ್ಕ್ರೈಬ್ ಮಾಡಿ, ಲೈಕ್ ಒತ್ತಿದರೆ ಅಕ್ಟೊಬರ್ ೧೦ರ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ಎಲ್ಲರಿಗೂ ಇರುತ್ತದೆ  ಎಂದು ಅಧ್ಯಕ್ಷ ಶ್ರೀ ಭಾಸ್ಕರ ಶೇರಿಗಾರ ಇವರು ಉದ್ಘಾಟನಾ ಪೂರ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ 

https://www.youtube.com/channel/UCU9Z_Tjslhic2NITePVculg/featured

 
 
 
 
 
 
 
 
 
 
 

Leave a Reply