ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 6 ಮನೆಗೆ ಏಕ ಕಾಲದಲ್ಲಿ ಉಚಿತ ವಿದ್ಯುತ್ ಸಂಪರ್ಕ  

ಆಸರೆ ಚಾರಿಟೇಬಲ್ ಟ್ರಸ್ಟ್ 6 ಮನೆಗೆ ಏಕಕಾಲದಲ್ಲಿ ಉಚಿತ ವಿದ್ಯುತ್ ಸಂಪರ್ಕ ಉಡುಪಿ. ಆಸರೆ ಚಾರಿಟೇಬಲ್ ಟ್ರಸ್ಟ್( ರಿ )ಕಡಿಯಾಳಿ ಉಡುಪಿ ಇದರ ನೇತೃತ್ವದಲ್ಲಿ ದೀಪಾವಳಿಯ ಶುಭದಿನದಂದು ಉಡುಪಿ ನಗರದ 6ಮನೆಗಳಿಗೆ ಏಕಕಾಲದಲ್ಲಿ ಉಚಿತವಿದ್ಯುತ್ ಜೋಡಣೆ ನೀಡಲಾಯಿತು. ಉಡುಪಿ ನಗರದ ಪೆರಂಪಳ್ಳಿ ತುಕ್ರ ಮೂಲ್ಯ ಮನೆಗೆ ನೀಡಿದ ವಿದ್ಯುತ್ ಸಂಪರ್ಕ ಉದ್ಘಾಟಿಸಿದ ಉಡುಪಿಯ ಪ್ರಖ್ಯಾತ ಇಂಜಿನಿಯರ್ ನಂದಕುಮಾರ್ ಮಾತನಾಡಿ ಬಡವರ ಮನೆಗೆ ದೀಪಾವಳಿಯ ದಿನದಂದು ಉಚಿತ ವಿದ್ಯುತ್ ಸಂಪರ್ಕ ನೀಡಿದ ಕಾರ್ಯವು ನೈಜವಾದ ದೀಪಾವಳಿ ಆಚರಣೆ ಎಂದು ಹೇಳಿದರು. ಆಸರೆ ಚಾರಿಟೇಬಲ್ ಟ್ರಸ್ಟ್ ನ ಈ ಕಾರ್ಯವು ಸಮಾಜಕ್ಕೆ ಮಾದರಿಯಾಗಿದೆ ಮತ್ತು ದಾನಿಗಳು ಇಂತಹ ವಿಶ್ವಾಸಾರ್ಹ ಸಂಸ್ಥೆಗಳಿಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು. ಕರಂಬಳ್ಳಿ ವಾರ್ಡಿನ ರಮೇಶ್ ನಾಯ್ಕರ ಮನೆಗೆ ಕೆ.ಕೆ. ಫಿಷ್ನೆಟ್ ನ ಮಾಲಕರಾದ ಪ್ರಶಾಂತ್ ಬಾಳಿಗ, ಸರಳಬೆಟ್ಟು ವಾರ್ಡಿನ ಸುಮತಿ ಮನೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ರೀಮತಿ ಶ್ಯಾಮಲಾ ಕುಂದರ್, .ಚಿಟ್ಪಾಡಿ ವಾರ್ಡಿನ ಪದ್ಮನಾಭ ನಗರದ ಅನಿಲ್ ಮನೆಗೆ ನಗರಸಭಾ ಸದಸ್ಯರಾದ ಶ್ರೀ ಕೃಷ್ಣ ರಾವ್ ಕೊಡಂಚ, ಕಸ್ತೂರ್ಬಾ ನಗರದ ಸುಂದರ ನಾಯ್ಕ ಅವರ ಮನೆಗೆ ಸ್ವರ್ಣ ಜ್ಯುವೆಲ್ಲರ್ಸ್ ನ ಸಿ.ಎ ಗುಜ್ಜಾಡಿ ಪ್ರಭಾಕರ್ ನಾಯಕ್, ಮೂಡಬೆಟ್ಟು ವಾರ್ಡಿನ ರೇಣುಕಾ ಮನೆಗೆ ಉಡುಪಿಯ ಪ್ರಖ್ಯಾತ ಆರ್ಕಿಟೆಕ್ಟ್ ಯೋಗೇಶ್ಚಂದ್ರದಾರ ಉಚಿತ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ,ಗಿರಿಧರ ಆಚಾರ್ಯ, ರಾಜು ಕಸ್ತೂರ್ಬಾ ನಗರ, ಶ್ರೀಮತಿ ರಜನಿ ಹೆಬ್ಬಾರ್, ಶ್ರೀಶ ಭಟ್ ಮೂಡಬೆಟ್ಟು, ನಗರ ಪ್ರಾಧಿಕಾರದ ಸದಸ್ಯರಾದ ಕಿಶೋರ್ ಕರಂಬಳ್ಳಿ,ಮಾಜಿ ನಗರಸಭಾ ಸದಸ್ಯರಾದ ಪ್ರಶಾಂತ ಪೆರಂಪಳ್ಳಿ, ಸುರೇಶ್ ಶೆಟ್ಟಿ, ಶ್ರೀಮತಿ ಅರುಣಾ ಪೂಜಾರಿ, ಅರುಣ ಶೆಟ್ಟಿಗಾರ, ನಿತ್ಯಾನಂದ ಶೆಟ್ಟಿ.ಆಸರೆ ಚಾರಿಟೇಬಲ್ ಟ್ರಸ್ಟಿ ಗಳಾದ ಎಂ.ವಲ್ಲಭ ಭಟ್, ಸತೀಶ್ ಕುಲಾಲ್ ಕಡಿಯಾಳಿ, ಸಂದೀಪ್ ಸನಿಲ್, ಗಣೇಶೋತ್ಸವ ಸಮಿತಿಯ ಸದಸ್ಯರಾದ ಸಂತೋಷ ಕಿಣಿ, ಸತ್ಯನಾರಾಯಣ ಎಸ್, ಮಂಜುನಾಥ ಹೆಬ್ಬಾರ್, ಶರಣ್ ಶೆಟ್ಟಿ ಕನ್ನರ್ಪಾಡಿ , ಸತೀಶ್ ಕರಂದಾಡಿ ಉಪಸ್ಥಿತರಿದ್ದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply