ಮನೆಗೆ ಬೆಳಕಾದ ನವದಂಪತಿ..

ಉಡುಪಿ. ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಡುಪಿ ಕನ್ನರ್ಪಾಡಿ ನಿವಾಸಿ ಶರಣ್ ಶೆಟ್ಟಿ, ಮತ್ತು ನವ್ಯ ಶೆಟ್ಟಿ ಕಳೆದ 30 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದ ದಲಿತ ಸಮುದಾಯದ ಶ್ರೀಮತಿ ಲೀಲಾ ಇವರ ಮನೆಗೆ ಕೊಡಲಾದ ವಿದ್ಯುತ್ ಸಂಪರ್ಕ ಉದ್ಘಾಟಿಸಿದರು. ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಈ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಇಂದುಉಡುಪಿ ಭಾಷೆಲ್ ಮಿಷನರಿ ಹಾಲಿನಲ್ಲಿ ತನ್ನ ಮದುವೆ ಸಂಪ್ರದಾಯ ಮುಗಿದನಂತರ ನೇರವಾಗಿ ಪೆರಂಪಳ್ಳಿ ಶ್ರೀಮತಿ ಲೀಲಾ ಅವರ ಮನೆಗೆ ದಂಪತಿ ಸಹಿತ ಆಗಮಿಸಿ ಉದ್ಘಾಟಿಸಿದರು.ಈ ಮನೆಗೆ ತಗಲಿದ ವಿದ್ಯುತ್ ಸಂಪರ್ಕದ ಸಂಪೂರ್ಣ ವೆಚ್ಚವನ್ನು ನವದಂಪತಿಗಳು ಆಸರೆ ಚಾರಿಟೇಬಲ್ ಟ್ರಸ್ಟ್ ಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೆ .ರಾಘವೇಂದ್ರ ಕಿಣಿ ,ಕೋಶಾಧಿಕಾರಿ ಸತೀಶ್ ಕೆ ಕುಲಾಲ್, ಚೇತನ್ ಕುಮಾರ್, ಕನ್ನರ್ಪಾಡಿ, ಅನಿಲ್ ಶೇರಿಗಾರ್, ಓವಿನ್, ಅಶ್ವಿನ್ ಶೆಟ್ಟಿ, ಸ್ಥಳೀಯರಾದ ಅರುಣ.ಎಸ್ ಪೂಜಾರಿ, ಪ್ರಶಾಂತ್ ಪೆರಂಪಳ್ಳಿ, ಡೆನ್ನಿಸ್ ಪ್ರಸನ್ನ, ಆಕಾಶ್ ಪೂಜಾರಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಶ್ರೀಮತಿ ಯಶೋಧ ಮತ್ತು ನವದಂಪತಿಯ ಕುಟುಂಬಸ್ಥರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply