ಆಚಾರ್ಯಾಸ್ ಏಸ್:ಪಿಯು ವಕೇಷನ ಬ್ಯಾಚ್ ವಿದ್ಯಾರ್ಥಿಗಳಿಗೆ ಫಾರ್ಮುಲಾ ಕೃತಿ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿ ಆಚಾರ್ಯಾಸ್ ಏಸ್ ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ರಜಾದಿನದ ಶೈಕ್ಷಣಿಕ ತರಬೇತಿಯ ಶುಭಾರಂಭದ ಸಂದರ್ಭದಲ್ಲಿ ವಿನೂತನ ಫಾರ್ಮುಲಾ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಯಿತು.

ಆಚಾರ್ಯಾಸ್ ಏಸನ ಪ್ರಧಾನ ಕಚೇರಿಯಲ್ಲಿ ಜರಗಿದ ಈಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಧ್ಯಾಪಕ ಶ್ರೀ ಜಯರಾಮ ರಾವ್ ಫಾರ್ಮುಲಾ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಿ ಶುಭ ಹಾರೈಸಿ
ಶೈಕ್ಷಣಿಕ ಅವಧಿ ಪೂರೈಸುವ ತನಕ ವಿದ್ಯಾರ್ಥಿಗಳ ಗುರಿ ಆಚಲವಾಗಿದ್ದರೆ ಎಂತಹ ಯಶಸ್ಸನ್ನೂ ಕೂಡಾ ಸಾಧಿಸಬಹುದು ಎಂದು ಹಿತವಚನ ನೀಡಿದರು. ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ಹಾಗೂ ಸ್ಥಾಪಕ ಪಿ.ಲಾತವ್ಯ ಆಚಾರ್ಯ ಉಪಸ್ಥಿತರಿದ್ದರು.
ಆಚಾರ್ಯಾಸ್ ಏಸ್ ಪ್ರಸ್ತುತ ಪಡಿಸಿರುವ ಈ ಕೃತಿಯಲ್ಲಿ ಪಿಯುಸಿ,
ಸಿಯಿಟಿ,ಜೆಯಿಯಿ,ನೀಟ್ ವಿಷಯಗಳ ಅಮೂಲ್ಯ ಸೂತ್ರಗಳು,ಮಾದರಿ ಪ್ರಶ್ನೆಪತ್ರಿಕೆಗಳು,ಮೆಥಡ್ಸ್ ಮತ್ತು ಉತ್ತರಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳ ಉತ್ಕೃಷ್ಟ ಫಲಿತಾಂಶಕ್ಕೆ ವಿಶೇಷ ನೆರವು ನೀಡಲಿದೆ.

ಇದೇ ಬರುವ ಮೇ 19 ರಿಂದ ಸಿಯಿಟಿ,ಜೆಯಿಯಿ,
ನೀಟ್ ಕ್ರಾಶ್ ಕೋರ್ಸ ತರಗತಿಗಳು ಆಚಾರ್ಯ ಏಸನಲ್ಲಿ ಆರಂಭಗೊಳ್ಳಲಿದೆ.
ಆಸಕ್ತ ವಿದ್ಯಾರ್ಥಿಗಳು ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟ್ರಮಣ ದೇವಾಲಯದ ಸಮೀಪದಲ್ಲಿರುವ ರಾಧೇಶಾಂ ಕಟ್ಟಡದ ಆಚಾರ್ಯಾಸ್ ಏಸ್ ಕಚೇರಿ,ಅಥವಾ ಬ್ರಹ್ಮಾವರದ
ಮಧುವನ ಕಾಂಪ್ಲೆಕ್ಸನ ಏಸ ಕಚೇರಿಯ ಮೊಬೈಲ್ ಸಂಖ್ಯೆ 9901420714 ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ಶ್ರೀ ಅಕ್ಷೋಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply