ಶಿಕ್ಷಣ  ಕಾಲೇಜಿನಲ್ಲಿ ಪ್ರೊ. ಒ.ಎಸ್.ಅಂಚನ್ ಸ್ಮಾರಕ ಉಪನ್ಯಾಸ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ಪ್ರೊ.ಒ.ಎಸ್.ಅಂಚನ್ ಸ್ಮಾರಕ ಉಪನ್ಯಾಸವನ್ನು ರ‍್ಪಡಿಸಲಾಗಿದ್ದು ಡಾ ಎ ವಿ ಬಾಳಿಗ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ ಸೌಜನ್ಯ ಶೆಟ್ಟಿಯವರು ‘ ಹದಿಹರೆಯದವರ ಮೇಲೆ ಪರಿಸರದ ಪ್ರಭಾವ’ ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದರು.ಹದಿಹರೆಯವು ವ್ಯಕ್ತಿತ್ವ ವಿಕಸನದ ಹಂತವಾಗಿದ್ದು ಹುಡುಗ ಹುಡುಗಿಯರ ಮೇಲೆ ಹತ್ತಾರು ಪ್ರಭಾವಗಳಾಗುತ್ತವೆ.ಹದಿಹರೆಯದ ಅನೇಕರು ವ್ಯಸನ,ಸಾಮಾಜಿಕ ಮಾಧ್ಯಮಗಳು,ಮಾದಕ ದ್ರವ್ಯ ಸೇವನೆ,ಆನ್ಲೈನ್ ಅಪರಾಧಗಳಿಗೆ ಸಿಲುಕಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.ಅವರಿಗೆ ಮನೆ,ಶಾಲೆ, ಸಮಾಜ ಸರಿಯಾದ ರೀತಿಯಲ್ಲಿ ಮರ‍್ಗರ‍್ಶನ ಮಾಡುವ ಆವಶ್ಯಕತೆ ಇದೆ ಎಂದು ಡಾ ಸೌಜನ್ಯ ತಮ್ಮ ಭಾಷಣದಲ್ಲಿ ಮನವರಿಕೆ ಮಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿದ್ದ ಪ್ರೊ ಒ.ಎಸ್.ಅಂಚನ್ಅವರನ್ನು ಸ್ಮರಿಸಿಕೊಂಡರಲ್ಲದೆ ಹದಿಹರೆಯದವರು ಸಂಕರ‍್ಣವಾದ ಬದುಕನ್ನು ಎದುರಿಸಲು ಇಪ್ಪತ್ತೊಂದನೆಯ ಶತಮಾನದ ಕೌಶಲಗಳನ್ನು ಪಾಠಗಳಲ್ಲಿ ಅಳವಡಿಸಬೇಕು ಮತ್ತು   ಈ ಬದುಕು ಬದುಕಲು ಯೋಗ್ಯ ಎಂಬ ಭರವಸೆ ತುಂಬಬೇಕು ಎಂದು ನುಡಿದರು.ಶ್ರೀಮತಿ ಧನಲಕ್ಷ್ಮೀ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಉಷಾ ಎಚ್ ಸ್ಮರಣಿಕೆ ನೀಡಿದರು. ಶ್ರೀಮತಿ ಪ್ರೀತಿ. ಎಸ್.ರಾವ್ ಆಭಾರ ಮನ್ನಿಸಿದರು.ಶ್ರೀ ಮತಿ ಮಮತಾ ಸಾಮಂತ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply