ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಬೇಟೆ ಜೋರಾಗಿಯೇ ನಡೆಸಿದೆ. ಸಿನಿಮಾ ನೋಡಿದ ಪ್ರೇಕ್ಷಕರೇ ಚಿತ್ರದ ಬಗ್ಗೆ ಮತ್ತೊಬ್ಬರಿಗೆ, ಇನ್ನಿಬ್ಬರಿಗೆ ಹೇಳುತ್ತಿರುವ ಕಾರಣ, ಜನ ತಾವಾಗಿಯೇ ಚಿತ್ರಮಂದಿರಗಳ ಕಡೆ ಮುಖ ಮಾಡಿದ್ದಾರೆ. ಅದರ ಫಲಿತಾಂಶ ಎಂಬಂತೆ ಕೇವಲ ಐದು ದಿನಗಳಲ್ಲಿ ‘777 ಚಾರ್ಲಿ’ ಗಳಿಕೆ 32 ಕೋಟಿ ದಾಟಿದೆ.
ಗಳಿಕೆಯ ಬಗ್ಗೆ ಆನ್ಲೈನ್ ಬುಕ್ಕಿಂಗ್ ಮಾಹಿತಿ ಆಧರಿಸಿ ಸದ್ಯ ಮಾಡಿರುವ ಲೆಕ್ಕಾಚಾರವೂ ಹೀಗಿದೆ.
ಈಗ ಅಂದಾಜು ಗಳಿಕೆ ಸಿಗುತ್ತಿದ್ದು 777 ಚಾರ್ಲಿ’ ಮೊದಲ ದಿನ 6.5 ಕೋಟಿ, ಎರಡನೇ ದಿನ 8 ಕೋಟಿ, ಮೂರನೇ ದಿನ 10 ಕೋಟಿ, ನಾಲ್ಕನೇ ದಿನ ಸೋಮವಾರವಾದರೂ 5 ಕೋಟಿ ಹಾಗೂ ಮಂಗಳವಾರ ಮೂರರಿಂದ ನಾಲ್ಕು ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ.
ಆ ಮೂಲಕ ಚಿತ್ರದ ಗಳಿಕೆ ಐದು ದಿನಗಳಲ್ಲಿ ಅಂದಾಜು 32 ಕೋಟಿ ರೂ. ದಾಟಿದೆ ಎಂಬ ಮಾಹಿತಿ ಇದೆ.
ಈ ಮಧ್ಯೆ, ಸಿಎಂ ಬೊಮ್ಮಾಯಿ ಚಿತ್ರ ವೀಕ್ಷಿಸಿ ಭಾವುಕರಾಗಿದ್ದಾರೆ.