ಜಮ್ಮ-ಕಾಶ್ಮೀರದಿಂದ 10,000 ಅರೆಸೈನಿಕ ಪಡೆಗಳ ಸಿಬ್ಬಂದಿಗಳು ಹಿಂದಕ್ಕೆ.

ಶ್ರೀನಗರ: ಕೇಂದ್ರ ಅಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಿಂದ ಸುಮಾರು 10,000 ಅರೆಸೈನಿಕ ಪಡೆಗಳ ಸಿಬ್ಬಂದಿಗಳನ್ನು ತಕ್ಷಣವೇ ಹಿಂಪಡೆಯಲು ಕೇಂದ್ರ ಸರಕಾರ ಆದೇಶಿಸಿದೆ .


ಕಳೆದ ವರ್ಷ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಒಟ್ಟು 100 ಸಿಎಪಿಎಫ್ ಕಂಪನಿಗಳನ್ನು ತಕ್ಷಣ ಹಿಂತೆಗೆದುಕೊಳ್ಳಲು ಮತ್ತು ದೇಶದ ಮೂಲ ಸ್ಥಳಗಳಿಗೆ ವಾಪಸ್ಸು ಬರಲು ಆದೇಶಿ ಸಲಾಗಿದೆ ಎಂದು ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಕೇಂದ್ರ ಪ್ರದೇಶವನ್ನು (ಯುಟಿ) ನಿಯೋಜಿ ಸುವುದನ್ನು ಗೃಹ ಸಚಿವಾಲಯ ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕೇಂದ ಸರ್ಕಾರದ ನಿರ್ದೇಶನದಂತೆ, ಕೇಂದ್ರ ರಿಸರ್ವ್ ಪೊಲೀಸ್ ಪಡೆಯ (ಸಿಆರ್‌ಪಿಎಫ್) ಒಟ್ಟು 40 ಕಂಪನಿಗಳು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಗಡಿ ಭದ್ರತಾ ಪಡೆ ಮತ್ತು ಸಶಸ್ತ್ರ ಸೀಮಾ ಬಲ್‌ ನ 20 ಕಂಪನಿಗಳನ್ನು ಈ ವಾರದೊಳಗೆ ಜಮ್ಮು ಮತ್ತು ಕಾಶ್ಮೀರದಿಂದ ವಾಪಸ್ಸು ಬರಲಿದೆ ಎನ್ನಲಾಗಿದೆ.

 
 
 
 
 
 
 
 
 
 
 

Leave a Reply