ಕಾರ್ಕಳ 108 ಆಂಬುಲೆನ್ಸ್ ನಲ್ಲಿಯೇ ಗಂಡು ಮಗು ಜನನ

ದಿನಾಂಕ 12/01/2022 ರಂದು ಬೆಳಿಗ್ಗೆ  8.40ಕ್ಕೆ ಸುಮಾರಿಗೆ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು  ವರಂಗ ವಾಸಿ ಶ್ರೀಮತಿ ವನಿತಾ ಇವರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಕಾರ್ಕಳ 108 ಆಂಬುಲೆನ್ಸ್ ನಲ್ಲಿ ವರಂಗದಿಂದ  ಕಾರ್ಕಳ ಸಾರ್ವಜನಿಕ  ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ  ಮಧ್ಯ ಜೋಡುರಸ್ತೆ ಬಳಿ ಗಂಡು ಮಗುವಿಗೆ ಆಂಬುಲೆನ್ಸ್ ನಲ್ಲಿ ಬೆಳಿಗ್ಗೆ 9.15 ಕ್ಕೆ ಜನ್ಮ ನೀಡಿದ್ದಾರೆ. 
ಆಂಬುಲೆನ್ಸ್ ನ ಸಿಬ್ಬಂದಿ EMT ರಾಧಾಮಣಿ ಜಿಕೆ ಹಾಗೂ Pilot ಪುಂಡಲಿಕ ಇವರು ಸುರಕ್ಷಿತವಾಗಿ ಹೆರಿಗೆ ಮಾಡಿಸಿ, ಕಾರ್ಕಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿರುತ್ತಾರೆ.  ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 
 
 
 
 
 
 
 
 
 
 
 

Leave a Reply