₹3.59 ಕೋಟಿಗೆ ಮಾರಾಟವಾದ ಕುರಿಮರಿ!

ಸ್ಕಾಟ್‌ಲೆಂಡ್‌: ಕುರಿಯ ವಿಶೇಷ ತಳಿಗಳಲ್ಲಿ ಒಂದಾಗಿರುವ ಟೆಕ್ಸೆಲ್‌ ರಾಮ್‌ 368,000 ಪೌಂಡ್‌ಗೆ (ಸುಮಾರು 3.59 ಕೋಟಿ ರೂಪಾಯಿ) ಮಾರಾಟವಾಗಿದ್ದು, ಇದೀಗ ದಾಖಲೆ ಮಾಡಿದೆ. ಸ್ಕಾಟ್‌ಲೆಂಡ್‌ನಲ್ಲಿ ನಡೆದ ಹರಾಜಿನಲ್ಲಿ ಈ ಕುರಿಯನ್ನು ಮಾರಾಟ ಮಾಡಲಾಗಿದೆ. ಕುರಿಯಲ್ಲಿಯೇ ಅತ್ಯಂತ ದುಬಾರಿ ಹಾಗೂ ವಿಶೇಷ ತಳಿ ಎಂದು ಇದನ್ನು ಗುರುತಿಸಲಾಗಿದೆ.

2009ರಲ್ಲಿ ಈ ತಳಿಯ ಕುರಿಮರಿಯೊಂದು 230,000 ಪೌಂಡ್‌ಗೆ (ಅಂದರೆ ಸುಮಾರು 2.25 ಕೋಟಿ ರೂಪಾಯಿ) ಮಾರಾಟವಾಗಿ ದಾಖಲೆ ಸೃಷ್ಟಿಸಿತ್ತು. ಈ ದಾಖಲೆಯನ್ನು ಈ ಬಾರಿ ಮುರಿಯಲಾಗಿದೆ. ಚಾರ್ಲಿ ಬೋಡೆನ್ ಎಂಬಾತ ಈ ಕುರಿಮರಿಯ ಮಾಲೀಕ. ಈ ಕುರಿತು ಈತ ಇಟ್ಟಿರುವ ಹೆಸರು ಡಬಲ್ ಡೈಮಂಡ್. ಈ ತಳಿಗಳ ಕುರಿಗಳ ಮಾಂಸ ಕೂಡ ಬಲು ದುಬಾರಿ ಬೆಲೆಯಿದೆ.

ಅಷ್ಟೇ ಅಲ್ಲದೇ ಇದರ ತುಪ್ಪಳ ಬಹಳ ಬೆಲೆ ಬಾಳು ವ ಹಿನ್ನೆಲೆಯಲ್ಲಿ ಇದು ಇಷ್ಟು ದುಬಾರಿ ಯಾಗಲು ಕಾರಣ ಎನ್ನುತ್ತಾರೆ ಕುರಿ ಸಾಕಣೆಕಾರರು. ಜೆಫ್ ಐಕೆನ್ ಎಂಬಾತ ಇದನ್ನು ಖರೀದಿ ಮಾಡಿದ್ದಾನೆ. ಈ ತಳಿಯ ಕುರಿಯನ್ನು ಸಾಕಣೆ ಮಾಡಿ ಅದರ ವಂಶ ವನ್ನು ಇನ್ನಷ್ಟು ಬೆಳೆಸಲು ತಾನು ನಿರ್ಧರಿಸಿ ರುವುದಾಗಿ ಜೆಫ್‌ ಹೇಳಿದ್ದಾನೆ.

 
 
 
 
 
 
 
 
 
 
 

Leave a Reply