ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಈ ಬಾರಿ ವಿಶಿಷ್ಠ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ.

ಪ್ರತೀ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಪಥ ಸಂಚಲನ, ಸ್ವಚ್ಛತಾ ಕಾರ್ಯಕ್ರಮ, ಸರ್ವ ಧರ್ಮ ಪ್ರಾರ್ಥನೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿದ್ದು, ಕೋವಿಡ್-19 ಕಾರಣದಿಂದ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ , ಮಕ್ಕಳು ಮನೆಯಲ್ಲಿಯೇ ವಿಶಿಷ್ಠ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಚಟುವಟಿಕೆಗಳನ್ನು ನೀಡಿದೆ.


ಮಕ್ಕಳಲ್ಲಿ ಸೃಜನಾತ್ಮಕ ಮನಸ್ಸು ಬೆಳೆಯಲು, ಹೊಸ ಹವ್ಯಾಸಗಳನ್ನು ಕಲಿಯಲು, ತುರ್ತು ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಕಲಿಯಲು, ಕೌಶಲ್ಯಗಳನ್ನು ಬೆಳೆಸುವುದರಲ್ಲಿ , ಸಮಾಜಸೇವೆಯ ಮನೋಭಾವ ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಕೋವಿಡ್-19 ಕರಣದಿಂದ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ತನ್ನ ವಿದ್ಯಾರ್ಥಿಗಳಿಗೆ ಕರೆ ನೀಡಿದೆ.

*ಮನೆಯ ಆವರಣವನ್ನು ಸ್ವಚ್ಛಗೊಳಿಸಿ, ಭಾರತದ ನಕ್ಷೆಯನು ಒಳಗೊಂಡ ರಂಗೋಲಿಯನ್ನು ಮಾಡಿ, ಅದರ ಮಧ್ಯದಲ್ಲಿ ಅಥವಾ ಹತ್ತಿರದಲ್ಲಿ ಸಾದ್ಯವಾದಷ್ಟು ಗಾತ್ರದ ಧ್ವಜವನ್ನು ಹರಿಸಿ, ಸಾಮಾಜಿಕ ಅಂತರವನ್ನು ಪಾಲಿಸಿ ಕೊಂಡು ತಮ್ಮ ಕುಟುಂಬ ಮತ್ತು ನೆರೆ ಹೊರೆಯವರನ್ನು ಆಹ್ವಾನಿಸಿ, ಅವರೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸುವುದು.

*ಮನೆಯಲ್ಲಿ ಅಥವಾ ಸಮೀಪದ ಉದ್ಯಾನವನದಲ್ಲಿ ಯಾವುದೆ ಗಾತ್ರದ ರಾಷ್ಟçಧ್ವಜವನ್ನು ಹಾರಿಸಿ ರಾಷ್ಟçಗೀತೆ ಹಾಡಬೇಕು , ಈ ಚಟುವಟಿಕೆಗಳಿಗಾಗಿ ನೀಡಿರುವ ಹ್ಯಾಷ್ ಟ್ಯಾಗ್ ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಟೋ ಅಥವಾ ವೀಡಿಯೋವನ್ನು ಹಂಚಿಕೊಳ್ಳಬೇಕು.

*ನಿಮ್ಮ ಪ್ರದೇಶ, ತಾಲೂಕು ಅಥವಾ ಜಿಲ್ಲೆಯ ಯಾವುದೇ ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಂಡು ಅವರ ಬಗ್ಗೆ ಕುಟುಂಬ ಮತ್ತು ನೆರೆಹೊರೆಯವರಿಗೆ ಭಾಷಣ ಮೂಲಕ ತಿಳಿಸಬೇಕು.

*ಮನೆಯಲ್ಲಿಯೇ ಪೇಸ್ ಮಾಸ್ಕ್ ತಯರಿಸಿ, ಅಗತ್ಯವಿರುವವರಿಗೆ ವಿತರಿಸಬೇಕು.
* ಯುವ ಜನರಲ್ಲಿ ದೇಶಭಕ್ತಿಯ ಭಾವನೆ ಮೂಡಿಸುವ ಸಲುವಾಗಿ , MYGOV.in ನಲ್ಲಿ ರಕ್ಷಣಾ ಸಚಿವಾಲಯ ಆಯೋಜಿಸಿರುವ , ಆತ್ಮ ನಿರ್ಭರ ಭಾರತ- ಸ್ವಾತಂತ್ರ್ಯ ಭಾರತ , ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಯಾವುದೇ ಸಮಯದಲ್ಲಿ ದೇಶಸೇವೆ ಮತ್ತು ಸಮಾಜಸೇವೆಗೆ ಸಿದ್ದವಿದ್ದು, ಮಕ್ಕಳಲ್ಲಿ ಸದಾ ರಾಷ್ಟ್ರ ಪ್ರೇಮ ಜಾಗೃತವಿರಬೇಕು ಎನ್ನುವ ಉದ್ದಶದಿಂದ ಕೋವಿಡ್-19 ಈ ಸಮಯದಲ್ಲೂ ಸಹ ಮಕ್ಕಳು ಮನೆಯಲ್ಲಿ, ಸುರಕ್ಷಿತವಾಗಿದ್ದುಕೊಂಡೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ತೊಡಗಿಕೊಳ್ಳಲು ಈ ವಿಭಿನ್ನ ಚಟುವಟಿಕೆಗಳನ್ನು ನೀಡಿದ್ದು, ಉಡುಪಿ ಜಿಲ್ಲೆಯಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.


ಕೋವಿಡ್-19 ಸಂಕಷ್ಟದಲ್ಲಿ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು 15, 000 ಹೆಚ್ಚು ಮಾಸ್ಕ್ ಗಳನ್ನು ತಯಾರಿಸಿದ್ದು, ಇವುಗಳನ್ನು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿತರಿಸುವುದರ ಜೊತೆಗೆ, ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ 51 ಪರೀಕ್ಷಾ ಕೇಂದ್ರ‍್ರಗಳಲ್ಲಿ , ದ್ವಿತೀಯ ಪಿಯು ಇಂಗ್ಲೀಷ್ ಪರೀಕ್ಷೆಯಲ್ಲಿ ಹಾಗೂ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಾಪಾಡುವ ಕಾರ್ಯದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ

ಅಲ್ಲದೇ ಲಾಕ್‌ಡೌನ್ ಅವಧಿಯಲ್ಲಿ ಕ್ವಾರಂಟೈನ್ ನಲ್ಲಿರುವವರಿಗೆ ಆಹಾರ ಪ್ಯಾಕೇಟ್ ಸಿದ್ದಪಡಿಸುವ ಕಾರ್ಯದಲ್ಲಿ ಸಹಾ ಕೈ ಜೋಡಿಸಿದ್ದಾರೆ.
ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅವರ ನಿರ್ದೇಶನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ವಿನೂತನ ರೀತಿಯಲ್ಲಿ ಈ ಬಾರಿಯ ಸ್ವಾತಂತ್ರೋತ್ಸವ ಆಚರಣೆಗೆ ಮೆರಗು ನೀಡಲಿದ್ದಾರೆ..

 
 
 
 
 
 
 
 
 
 
 

Leave a Reply