ವೈಟ್ಹೌಸ್ ಹೊರಗೆ ಶೂಟೌಟ್

ವಾಷಿಂಗ್ಟನ್: ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲೇ ವೈಟ್ಹೌಸ್ ಹೊರಗೆ ಶೂಟೌಟ್ ನಡೆದಿದೆ. ಕೂಡಲೇ ಸುದ್ದಿಗೋಷ್ಠಿ ಸ್ಥಗಿತಗೊಳಿಸಿದ ಅಧ್ಯಕ್ಷ ಟ್ರಂಪ್ ಶ್ವೇತಭವನದೊಳಕ್ಕೆ ಹೋದರು. ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್ ಬಂದೂಕುಧಾರಿ ವ್ಯಕ್ತಿಯನ್ನು ಹೊಡೆದುರುಳಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಟ್ರಂಪ್ ಅವರು, ಶ್ವೇತ ಭವನದ ಹೊರಗೆ ಶೂಟ್​ ಔಟ್ ಆಗಿದೆ. ದೊಡ್ಡ ಅನಾಹುತವನ್ನು ತಡೆದ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್​ಗೆ ಧನ್ಯವಾದ ಹೇಳುತ್ತೇನೆ.

ಶ್ವೇತಭವನದ ಆವರಣದಿಂದ ಹೊರಗೆ ನಡೆದ ಘಟನೆ ಇದಾಗಿದ್ದು, ಇದು ನನ್ನನ್ನು ಗುರಿಯಾಗಿಸಿದ್ದಲ್ಲ ಎಂದು ಭಾವಿಸಿದ್ದೇನೆ. ಯಾವುದೇ ರೀತಿಯಲ್ಲೂ ವೈಟ್​ಹೌಸ್​ನ ಭದ್ರತಾ ಲೋಪವಾಗಿಲ್ಲ ಎಂದು ನಂಬಿದ್ದೇನೆ ಎಂದು ಟ್ರಂಪ್​ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply