ಯು.ಪಿ.ಎಂ.ಸಿ – ಆನ್‌ಲೈನ್ ತರಗತಿಗಳಿಗೆ ಚಾಲನೆ

ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗುವ ಸಾಂಪ್ರದಾಯಿಕ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ವಭಾವಿಯಾಗಿ 2020-21ರ ಶೈಕ್ಷಣಿಕ ವರ್ಷದಲ್ಲಿ ಪದವಿ ತರಗತಿಗಳಿಗೆ ಹೊಸತಾಗಿ ದಾಖಲಾಗಿರುವ ವಿದ್ಯಾರ್ಥಿಗಳ ಮನೋ ಭೂಮಿಕೆಯನ್ನು ಪಾಠಗಳ ಕಡೆಗೆ ಹರಿಸುವ ಆನ್‌ಲೈನ್ ಕಾರ‍್ಯಕ್ರಮವು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿ ನಲ್ಲಿ ಪ್ರಾರಂಭಿಸಲಾಯಿತು.

ಕಾಲೇಜಿನ ಪ್ರಾಚರ‍್ಯರಾದ ಡಾ|ಮಧು ಸೂದನ್ ಭಟ್ ಇವರು ದೀಪ ಬೆಳಗಿಸುವ ಮೂಲಕ ಈ ಆನ್‌ಲೈನ್ ಕಾರ‍್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಣ ಗುರುಶಿಷ್ಯರ ಮುಖಾಮುಖಿಯಾಗಿ ಸಾಗಬೇಕಿದ್ದರೂ ಪ್ರಸ್ತುತ ದಿನಗಳಲ್ಲಿ ಆನ್‌ಲೈನ್ ಶಿಕ್ಷಣದ ಅನಿವಾರ್ಯತೆ, ಆನ್‌ಲೈನ್ ಶಿಕ್ಷಣದಲ್ಲಿ ಗುರುಶಿಷ್ಯರ ಜವಾಬ್ದಾರಿ, ಅಂತರ್ಜಾಲ ವ್ಯವಸ್ಥೆ ವಂಚಿತರಿಗೆ ಒದಗಿಸ ಬಹುದಾದ ಪ್ರತ್ಯೇಕ ಶಿಕ್ಷಣ ವ್ಯವಸ್ಥೆ ಇವೆಲ್ಲವನ್ನು ಪ್ರಾಚಾರ‍್ಯರು ಸವಿವರವಾಗಿ ತಿಳಿಸಿದರು.

ಪ್ರಥಮ ಪದವಿ ತರಗತಿಗಳ 125 ವಿದ್ಯಾರ್ಥಿ ಗಳು ಈ ಆನ್‌ಲೈನ್ ಕಾರ‍್ಯಕ್ರಮದಲ್ಲಿ ಭಾಗವ ಹಿಸಿದ್ದರು.

ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ರಾಘವೇಂದ್ರ ಜಿ.ಜಿ. ಕಾರ‍್ಯಕ್ರಮವನ್ನು ಸಂಯೋಜಿಸಿದ್ದರು. ಬೋಧಕ, ಬೋಧ ಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿ ದ್ದರು.


 
 
 
 
 
 
 
 
 

Leave a Reply