ಪಿಎಂ ಸ್ವನಿಧಿ ಯೋಜನೆಗೆ 5 ಲಕ್ಷ ಅರ್ಜಿಗಳು

ಹೊಸದಿಲ್ಲಿ: ಭಾರತದಲ್ಲಿನ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಅನುಕೂಲವಾಗಲು ಕೇಂದ್ರ ಸರ್ಕಾರ ಸ್ವನಿಧಿ ಯೋಜನೆ ಪ್ರಾರಂಭಿಸಿತ್ತು. ಇದೀಗ ಪಿಎಂ ಸ್ವನಿಧಿ ಯೋಜನೆಗೆ 5 ಲಕ್ಷ ಮಂದಿ ಸಾಲ ಪಡೆಯಲು ಅರ್ಜಿ ಸಲ್ಲಿಸಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ.

ಲಾಕ್ ಡೌನ್ ವೇಳೆ ತೊಂದರೆ ಅನುಭ ವಿಸುತ್ತಿರುವ ಜನರಿಗೆ ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ವ್ಯಾಪಾರಿಗೂ ಗರಿಷ್ಠ 10 ಸಾವಿರ ರೂಗಳ ಸಾಲ ನೀಡಲು ಸರ್ಕಾರ ಮುಂದಾಗಿದ್ದು, ಜನತೆ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ಸರ್ಕಾರ ತಿಳಿಸಿದೆ.

ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ನೂತನ ಅಪ್ಲಿಕೇಷನ್ ಬಿಡುಗಡೆ ಮಾಡಿದ್ದು, ಆನ್ ಲೈನ್ ಮೂಲಕ ವ್ಯಾಪಾರಿಗಳಿಗೆ ಸಾಲ ನೀಡಲಿದೆ.

ಈಗ ಸಲ್ಲಿಸಿರುವ 5 ಲಕ್ಷ ಅರ್ಜಿಗಳನ್ನು ಮುಂದಿನ 41 ದಿನಗಳಲ್ಲಿ ವಿಲೇವಾರಿ ಮಾಡಲಿದ್ದು, ವ್ಯಾಪಾರಿಗಳು 1 ವರ್ಷಾವಧಿಯಲ್ಲಿ ಸಾಲ ಮರು ಪಾವತಿಸಬೇಕು ಎಂದು ತಿಳಿಸಿದೆ.

 
 
 
 
 
 
 
 
 
 
 

Leave a Reply