ಪಾಕಿಸ್ತಾನ-ಚೀನಾ ಎರಡಕ್ಕೂ ಶಾಕ್ ಕೊಟ್ಟ ವಾಯುಸೇನೆ

ಲಡಾಖ್: ಲಡಾಖ್ ಗಡಿಯಲ್ಲಿ ಚೀನಾ ತನ್ನ ಸೈನ್ಯ ತುಕಡಿಗಳನ್ನು ಹಿಂದಕ್ಕೆ ಪಡೆಯದೇ ಅಹಂಕಾರ ಮೆರೆಯುತ್ತಿದೆ. ಇದಕ್ಕೆ ಸೂಕ್ತ ತಿರುಗೇಟು ನೀಡಲು ಸಜ್ಜಾಗಿರುವ ಭಾರತ, ತನ್ನ ವಾಯುಸೇನೆ ಮೂಲಕ ಚೀನಾವನ್ನು ಕಟ್ಟಿ ಹಾಕುವ ಪ್ರಯತ್ನದಲ್ಲಿದೆ.

ಈಗಾಗಲೇ ತನ್ನ ಬತ್ತಳಿಕೆ ಸೇರಿರುವ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಗಳನ್ನು ಒಂದು ಬಾರಿ ಲಡಾಖ್ ಗಡಿಯಲ್ಲಿ ಹಾರಾಟ ನಡೆಸಿರುವ ವಾಯುಸೇನೆ, ಇದೀಗ ದೇಶೀಯ ಲಘು ಯುದ್ಧ ವಿಮಾನ ಎಲ್‌ಸಿಎ ತೇಜಸ್‌ನ್ನು ಪಶ್ಚಿಮ ಲಡಾಖ್ ಗಡಿಯಲ್ಲಿ ನಿಯೋಜಿಸಿದೆ.

ಪಶ್ಚಿಮ ಲಡಾಖ್‌ನ ಪಾಕಿಸ್ತಾನ ಗಡಿಗೆ ಹೊಂದಿಕೊಂಡಂತೆ ಭಾರತೀಯ ವಾಯುಸೇನೆ ತನ್ನ ಎಲ್‌ಸಿಎ ತೇಜಸ್ ಯುದ್ಧ ವಿಮಾನವನ್ನು ನಿಯೋಜಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.

ಲಡಾಖ್ ಗಡಿಯಲ್ಲಿ ಚೀನಾ ಸೇನೆಯೊಂದಿ ಗಿನ ಉದ್ವಿಗ್ನ ಪರಿಸ್ಥಿತಿಯನ್ನೇ ಪಾಕಿಸ್ತಾನ ತನ್ನ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಈ ಕಾರಣಕ್ಕೆ ಪಾಕ್ ಸೇನೆಯ ಚಲನವಲನಗಳ ಮೇಲೆ ನಿಗಾ ಇಡಲು ತೇಜಸ್ ಯುದ್ಧ ವಿಮಾನವನ್ನು ಪಶ್ಚಿಮ ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ ಎನ್ನಲಾಗಿದೆ.

ದಕ್ಷಿಣ ಏರ್ ಕಮಾಂಡ್‌ನ ಸುಪರ್ದಿ ಯಲ್ಲಿ ರುವ ಎಲ್‌ಸಿಎ ತೇಜಸ್ ಯುದ್ಧ ವಿಮಾನದ 45 ಸ್ಕ್ವಾರ್ಡನ್‌ನ್ನು ಪಶ್ಚಿಮ ಲಡಾಖ್ ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ ಎಂದು ವಾಯುಸೇನೆ ಸ್ಪಷ್ಟಪಡಿಸಿದೆ.

ಚೀನಾದೊಂದಿಗಿನ ಗಡಿ ತಕರಾರಿನ ಲಾಭ ಪಡೆದು ಈ ಭಾಗದಲ್ಲಿ ಪಾಕಿಸ್ತಾನ ಸೇನೆ ಮತ್ತು ವಾಯುಸೇನೆ ಕಾರ್ಯಾಚರಣೆ ನಡೆಸಬಹುದು ಎಂಬ ಗುಮಾನಿಯ ಹಿನ್ನೆಲೆಯಲ್ಲಿ ಇಲ್ಲಿ ತೇಜಸ್ ಯುದ್ಧ ವಿಮಾನವನ್ನು ನಿಯೋಜನೆ ಮಾಡಲಾಗಿದೆ ಎನ್ನಲಾಗಿದೆ.

ಇಷ್ಟೇ ಅಲ್ಲದೇ ಇಲ್ಲಿಂದ ಚೀನಾ ಸೇನಾ ಚಟುವಟಿಕೆಗಳ ಮೇಲೂ ನಿಗಾ ಇಡಲು ಸಾಧ್ಯ ಇರುವುದರಿಂದ, ದೇಶೀಯ ನಿರ್ಮಿತ ಎಲ್‌ಸಿಎ ತೇಜಸ್ ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳ ಲಾಗಿದೆ.

ಪ್ರಧಾನಿ ಮೋದಿ ತಮ್ಮ 74ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ತೇಜಸ್ ಯುದ್ಧ ವಿಮಾನದ ಸಾಮರ್ಥ್ಯವನ್ನು ಕೊಂಡಾಡಿದ್ದರು. ಅಲ್ಲದೇ ತೇಜಸ್‌ನ ನವೀಕರಿಸಿದ ಆವೃತ್ತಿಯನ್ನು ಶೀಘ್ರದಲ್ಲೇ ವಾಯುಸೇನೆಗೆ ಸೇರ್ಪಡೆ ಮಾಡ ಲಾಗುವುದು ಎಂದೂ ಮೋದಿ ಸ್ಪಷ್ಟ ಪಡಿಸಿದ್ದರು.

 
 
 
 
 
 
 
 
 
 
 

Leave a Reply