ಹೊಸ ನಿಬಂಧನೆಗಳೊಂದಿಗೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ

ಬೆಂಗಳೂರು: ಈ ಬಾರಿ ಕೊರೋನಾ ಕಾರಣದಿಂದ ವೈಭವದಿಂದ ಸಾರ್ವಜನಿಕ ವಾಗಿ ಗಣೇಶ ಉತ್ಸವ ಆಚರಿಸಲು ನಿರ್ಬಂಧ ಹೇರಲಾಗಿದ್ದು, ಅದನ್ನು ಬದಲಾಯಿಸಿ ಕೆಲ ನಿಬಂಧನೆಗಳೊಂದಿಗೆ ಆಚರಣೆಗೆ ಅವಕಾಶ ಮಾಡಿಕೊಡಲಾಗಿದೆ.


ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ, ಸಾಂಪ್ರದಾಯಿಕ ಗಣೇಶೋತ್ಸವ ಆಚರಣೆಗೆ ಧಕ್ಕೆ ಬಾರದಂತೆ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಕೊರೋನಾ ಹರಡುವಿಕೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾಯಿಯಾಗಿದ್ದು, ಪರಿಷ್ಕೃತ ಮಾರ್ಗಸೂಚಿಗಳನ್ವಯ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಲು ಮತ್ತೊಮ್ಮೆ ವಿನಯಪೂರ್ವಕ ವಿನಂತಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

  • ನಿಯಮಗಳು :
  • ಆದಷ್ಟು ಮನೆ, ದೇವಾಲಯದಲ್ಲಿ ಹಬ್ಬ ಆಚರಿಸಿ.
  • ಸಾರ್ವಜನಿಕ ಪ್ರದೇಶದಲ್ಲಿ ಆಚರಿಸುವವರು ಕನಿಷ್ಠ ಸಂಖ್ಯೆಯಷ್ಟೇ ಜನ ಇರಬೇಕು.
  • ಸಾರ್ವಜನಿಕ ಸ್ಥಳವಾದರೆ ನಾಲ್ಕು ಅಡಿ ಮೀರದ ಗಣೇಶ ಮೂರ್ತಿ ಕೂರಿಸ ಬೇಕು. ಮನೆಯೊಳಗೆ ಮಾಡಿದರೆ ಎರಡು ಅಡಿ ಗಣಪನನ್ನು ಕೂರಿಸಬೇಕು.
  • ಪಾರಂಪರಿಕ ಗಣೇಶೋತ್ಸವಕ್ಕಾಗಿ ಗಣೇಶ ಮೂರ್ತಿ ಪ್ರತಿಷ್ಟಾಪಿಸುವವರು ಮುನಿಸಿಪಲ್ ಕಾರ್ಪೋರೇಶನ್, ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯಬೇಕು.
  • ವಾರ್ಡಿಗೊಂದು,ಗ್ರಾಮಕ್ಕೊಂದು ಗಣಪತಿ ಪ್ರತಿಷ್ಠಾಪನೆಗೆ ಅವಕಾಶವಿದೆ.
  • ಒಮ್ಮೆ 20 ಜನಕ್ಕಿಂತ ಹೆಚ್ಚು ಭಕ್ತರು ಸೇರುವಂತಿಲ್ಲ.
  • ನೃತ್ಯ, ಕಾರ್ಯಕ್ರಮಗಳು, ಇನ್ನಿತರ ಯಾವುದೇ ಮನರಂಜನಾ ಕಾರ್ಯಕ್ರಮ ಮಾಡುವಂತಿಲ್ಲ.
  • ಮೂರ್ತಿ ವಿಸರ್ಜನೆ ವೇಳೆ ಮೆರವಣಿಗೆ ಮಾಡುವಂತಿಲ್ಲ.
  • ಹೊಂಡ ಅಥವಾ ಮೊಬೈಲ್ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸುವುದು
 
 
 
 
 
 
 
 
 

Leave a Reply