Janardhan Kodavoor/ Team KaravaliXpress
29.6 C
Udupi
Sunday, February 5, 2023
Sathyanatha Stores Brahmavara

ಸಿಸಿಬಿ ಕಚೇರಿಗೆ ಹೊರಡುವ ಮುನ್ನ ಹೊಸ ಬಾಂಬ್ ಸಿಡಿಸಿದ ಸಂಬರಗಿ

ಬೆಂಗಳೂರು : ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ನಂಟು ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇಂದು ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.

ಸ್ಯಾಂಡಲ್‌ವುಡ್ ಡ್ರಗ್ಸ್ ಡೀಲ್‌ನಲ್ಲಿ ಹಲವು ಭಾಗಿಯಾಗಿದ್ದಾರೆ ಎಂದು ಹೇಳಿದ್ದ ಪ್ರಶಾಂತ್‌ಗೆ, ನಿನ್ನೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿ ಹಾಜರಾಗುವಂತೆ ಸೂಚನೆ ನೀಡಿದ್ರು. ಅದರಂತೆ ಇಂದು ಫೈಲ್ ಸಮೇತ ಆಗಮಿಸಿರುವ ಪ್ರಶಾಂತ್ ಸಿಸಿಬಿ ಅಧಿಕಾರಿ ಗಳಿಗೆ ಮಹತ್ವದ ದಾಖಲೆ ನೀಡಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳ ಮುಂದೆ ಶಾಸಕ ಜಮೀರ್ ಅಹ್ಮದ್ ಹಾಗು ಸಂಜನಾ ಬಗ್ಗೆ ಹೇಳಿಕೆ ನೀಡಿ ಭಾರಿ ಸಂಚಲನ ಮೂಡಿಸಿತ್ತು. ಅದರಂತೆ ಇಂದು ಎನ್‌ಸಿಬಿ ಅಧಿಕಾರಿ ಗೌತಮ್ ಹಾಗು ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಬಾಂಬ್ ಸಿಡಿಸಿದ ಪ್ರಶಾಂತ್
ಇನ್ನು ಸಿಸಿಬಿ ಕಚೇರಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಂಬ ರಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಸಚಿವ ರಾಗಿದ್ದ ವೇಳೆ ಕೊಲೊಂಬೊಗೆ ಯಾರ ಜೊತೆ ಯಾಕೆ ಹೋಗಿದ್ರು ಎನ್ನುವ ದಾಖಲೆ ಇದೆ. ಈ ಫೈಲ್‌ನಲ್ಲಿ ಕೆಲವರ ಭವಿಷ್ಯ ಅಡಗಿದೆ ಎಂದು ತಿಳಿಸಿದ್ದಾರೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!