ಸಣ್ಣ ವಯಸ್ಸಿನ ಗ್ರಾಮೀಣ ಭಾಗದ ಡ್ರೋನ್ ಸಾಧಕ

ಡ್ರೋನ್ ಎಂಬ ಶಬ್ದ ಕೇಳಿದಾಗ ನಮಗೆ ಕಣ್ಣಿದುರಿಗೆ ಬರುವುದು ಹಾರುವ ಹಕ್ಕಿ ಕ್ಯಾಮರಾ ಇದನ್ನು ಖರೀದಿಸುವುದು ಬಿಡಿ ಬಳಕೆ ಮಾಡುವುದು ಬಹಳ ಕಷ್ಟ ಮತ್ತು ದೂರದ ಮಾತು ಎಂಬ ಕಲ್ಪನೆ ಎಲ್ಲರಲ್ಲಿದೆ. ಸಾಧನೆ ಮಾಡಲು ವಯಸ್ಸು ಬೇಡ ಮನಸ್ಸು ಇದ್ದರೆ ಸಾಕು ಎಂಬ ಮಾತಿಗೆ ಅನ್ವಥ೯ಕವಾಗಿ ಅತೀ ಕಡಿಮೆ ವಯಸ್ಸಿನಲ್ಲಿ ಮೀಸೆ ಚಿಗುರುವ ವಯಸ್ಸಿನ ಗ್ರಾಮೀಣ ಭಾಗದ ಹುಡುಗ  ಡ್ರೋನ್ ಮ್ಯಾನ್  ಗ್ಲೆನ್ ರೆಬೆಲ್ಲೋ ತನ್ನ ಸಾಧನೆಯಿಂದ ಗುರುತಿಸುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಉಡುಪಿ ಜಿಲ್ಲೆಯ  ಮೂಡುಬೆಳ್ಳೆಯ ಈ ಹುಡುಗ ಆಟದ ಸಾಮಾನುಗಳಿಂದ ತಯಾರಿಸಿದ ಮೊದಲ ಡ್ರೋನ್ ಏಳಲೇ ಇಲ್ಲ. ಈ ಸಂದಭ೯ದಲ್ಲಿ ಆದ ಬೇಸರ. ಹಠವಾಗಿ ಪರಿಣಮಿಸಿತು. ಏನಾದರೂ ಸಾಧನೆ ಮಾಡಬೇಕು ಎಂಬ  ಅದಮ್ಯ ಛಲ ಕಾಡಿತು. ಅಂತರ್ಜಾಲದಲ್ಲಿ ಈ ಬಗ್ಗೆ ಹುಡುಕತೊಡಗಿದ   ಒಂದಷ್ಟು ಜನರ ಪರಿಚಯ ಮಾಡಿಕೊಳ್ಳಲು ಪ್ರಾರಂಭಿಸಿದ ಈ ಹುಡುಗ ಡ್ರೋನಿಗೆ ಬಳಸುವ ಉಪಕರಣಗಳು ಎಲ್ಲೆಲ್ಲಿ ಸಿಗುತ್ತವೆ? ಅದರ ಮೌಲ್ಯಗಳೆಷ್ಟು ಎಂದು ತಿಳಿದುಕೊಂಡ.
ಬರೀ ಮೋಟರಿಗೇ 8 ಸಾವಿರ ರೂ ಅಂದಾಗ ಅಷ್ಟು ಹಣ ಹೇಗೆ ಹೊಂದಾಣಿಕೆ ಮಾಡುವುದು ಎಂದು ಯೋಚಿಸಿದ. ಈ ಸಂದಭ೯ ಆಟಿಕೆಗಳ ಮೋಟರ್ ಕೀಳಿ ಕಂಪ್ಯೂಟರ್ ಸಿ.ಪಿ.ಯುನಲ್ಲಿ ಕೂಲಿಂಗ್ ಫ್ಯಾನ್ ನನ್ನು ಖರೀದಿ ಮಾಡಿ ಮತ್ತೊಂದು 9 ವೋಲ್ಟ್ ಬ್ಯಾಟರಿ ಸಿಕ್ಕಿಸಿ ಡ್ರೋನ್ ತಯಾರಿಸಿ, ರಿಮೋಟಿನ ಬಟನ್ ಒತ್ತಲಾಯ್ತು. ಅದು ಹಾರಿತಾ ಖಂಡಿತ ಇಲ್ಲ ಅದರೂ ಛಲ ಬಿಡದ ಈ ಹುಡುಗ ಆ ಬಗ್ಗೆ ಮತ್ತಷ್ಟು ಅನ್ವೇಷಣೆ ಮಾಡಲು ಪ್ರಾರಂಭಿಸಿದ ಹಾರ್ಬೇಕಾದರೆ ಮುಖ್ಯವಾಗಿನಾಲ್ಕು ಫ್ಯಾನ್. ನಾಲ್ಕು ಮೋಟರ್. ಒಂದು ಬ್ಯಾಟರಿ. ಮತ್ತೊಂದು ರಿಮೋಟ್ ಬೇಕಾಗುತ್ತೆ ಕೊನೆಗೊ ಆತನ ಕನಸಿನ ಡ್ರೋನ್ ತಯಾರಿಸಿದ ವಿಮಾನದ ರೀತಿಯ ಸದ್ದು ಕೇಳಿದ ಕೂಡಲೇ ಹೊರಗೆ ಬರುವ, ಮದುವೆ ಕಾರ್ಯಕ್ರಮಗಳಲ್ಲಿ ವೀಡಿಯೋ ರೆಕಾರ್ಡಿಂಗಿಗೆ ಬಳಸುವ ಡ್ರೋನ್ ಕಂಡು ಕುತೂಹಲಗೊಳ್ಳುವ  ಬಹಳಷ್ಟು ಮಂದಿಗೆ ಆಶ್ಚಯ೯ವಾಗ ಬಹುದು
ಗ್ಲೆನ್ ರೆಬೆಲ್ಲೋ ರಚಿಸಿದ ಮೊದಲ ಡ್ರೋನ್ ಅದು. ಆಗ ಕೇವಲ 9 ನೇ ತರಗತಿಯ ಹುಡುಗ. ಈಗ ಆತನಿಗೆ 18ರ ಹರೆಯ.
ಅವನ ಮಾತಲ್ಲಿ ಹೇಳುದಾದರೆ ಸಂಸ್ಥೆಗಳು, ನನ್ನ ಶಾಲೆ ಸೈoಟ್ ಲಾರೆನ್ಸ್  ನೀಡಿದ ಸ್ಕಾಲರ್ಶಿಪ್ ಹಣ ಅಮ್ಮ, ಅಣ್ಣ ಸಂಬಂಧಿಕರನ್ನು ಓಲೈಸಿ ಸಂಗ್ರಹಿಸಿದ ಹಣದಿಂದ ಸಲಕರಣೆಗಳನ್ನು ತರಿಸಿಕೊಂಡೆ ಆದರೆ ಅದನ್ನು ಮುಟ್ಟಲು ಒಂದಿಡೀ ವರ್ಷ ಅಮ್ಮ ಬಿಡಲೇ ಇಲ್ಲ. ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆ. ಡ್ರೋನ್ ನಿರ್ಮಾಣದ ಆಸೆ  ಕನವರಿಕೆಯಲ್ಲೇ 10ನೇ ತರಗತಿ ಯ ಪಾಠಗಳನ್ನು ಚೆನ್ನಾಗಿ ಓದಿದೆ, ಪರೀಕ್ಷೆ ಯನ್ನು ಬರೆದು 85.6% ಅಂಕಗಳಿಸಿದೆ. ಪರೀಕ್ಷೆ ಮುಗಿದ ಆ ಸಂಜೆಯಿಂದಲೇ ನಾನು  ಪ್ರಯೋಗ ಮಾಡಲು ಪ್ರಾರಂಭಿಸಿದೆ ವಿವಿಧ
ಆಧುನಿಕ ಸಲಕರಣೆಗಳಿಂದ ತಯಾರಿಸಿದ ಈ ಎರಡನೇ ಪ್ರಯೋಗವೂ ಕೂಡ ವಿಫಲವಾಯಿತು ಆದರೂ ನಾನು . ಕುಗ್ಗಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ತಯಾರಿಸುವವರನ್ನು ಸಂಪರ್ಕಿಸಿದೆ ಯುನೈಟೆಡ್‌‌ ಕಿಂಗ್ಡಮ್ ನ ಹವ್ಯಾಸಿ ಡ್ರೋನ್ ಹಾರಾಟಗಾರರ ಸಹಾಯ ಪಡೆದೆ ಅವರಿಂದ ಬಹಳಷ್ಟು ಮಾಹಿತಿ ಮಾಗ೯ದಶ೯ನ ಪಡೆದೆ. ಅಲ್ಲಿಂದಲೇ ಒಂದಷ್ಟು ಸಾಮಾಗ್ರಿಗಳನ್ನು, ಅಲ್ಲೇ ಕೆಲಸ ಮಾಡುವ ನನ್ನ ಅಮ್ಮನ ತಮ್ಮ ಅನಿಲ್ ಡಿಸೋಜ ಪೆರ್ನಾಲ್ ಅವರಿಗೆ ತಿಳಿಸಿ, ತರಿಸಿಕೊಂಡು ಡ್ರೋನ್ ತಯಾರಿಸಿದೆ.
ಈ ಕ್ಷಣ ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿತ್ತು ಕಾರಣ ನಾನು ತಯಾರಿಸಿದ ಆ ಪುಟ್ಟ ಡ್ರೋನ್ ಹಾರಿಯೇ ಬಿಡ್ತು. ಅಲ್ಲಿಂದ ನನಗೆ ಮತಷ್ಟು ಭರವಸೆ ಮೂಡಿತು ಈ ಹಂತದಲ್ಲಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವ ಕನಸು ಮೂಡಿತ್ತು ಎಂದು ಹೇಳಿದಾಗ ಕಣ್ಣoಚಿನಲ್ಲಿ ನೀರು ತುಂಬಿತ್ತು. ಈ ಕ್ಷೇತ್ರದಲ್ಲಿ ವಿಶೇಷ ಅಧ್ಯಯನ ಮಾಡುತ್ತಿರುವ ಈತ ಫೋಟೋ, ವೀಡಿಯೋ, ಡೆಲಿವರಿ, ಕೃಷಿ ವಿವಿಧ  ಚಟುವಟಿಕೆಗಳಿಗೆ ಡ್ರೋನ್ ಬಳಸುವುದರ ಜೊತೆಗೆ ಅದನ್ನು ಡ್ರೋನ್ ರೇಸಿಂಗ್ ಕೂಡ ಮಾಡುತ್ತಾರೆ ಎಂಬುದನ್ನು ಗೆಳೆಯರಿಂದ ತಿಳಿದುಕೊಂಡ ಈತ ಉಡುಪಿಯ  ಮಣಿಪಾಲದಲ್ಲಿ ನಡೆದ ರೇಸಿನಲ್ಲಿ ಭಾಗವಹಿಸಿದ. ಸಾಮಾನ್ಯವಾಗಿ ಡ್ರೋನುಗಳು ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಚಲಿಸಿದರೆ ರೇಸಿಂಗ್ ಡ್ರೋನುಗಳ ವೇಗ ಗಂಟೆಗೆ 180 ರಿಂದ 220 ಕಿ.ಮೀ ಓಡುವುದನ್ನು ಗಮನಿಸಿ ಕೊಂಡ.
ಅಂತಹ ಡ್ರೋನುಗಳನ್ನೂ ತಯಾರಿಸಲು ಸಾಧ್ಯ ಎಂಬುದನ್ನು ಅರಿತ ಗ್ಲೆನ್ ಅದನ್ನು ತಯಾರಿಸಲು ಮುಂದಾಗಿ ಅದರಲ್ಲಿ . ಯಶಸ್ವಿಯಾದ .
ಕಳೆದ ಒಂದೂವರೆ ವರ್ಷದಲ್ಲಿ ಈ ಹುಡುಗ 22 ಡ್ರೋನ್ ತಯಾರಿಸಿ ಸಮಾಜಕ್ಕೆ ನೀಡಿದ್ದಾನೆ.ಅತ್ಯಂತ ಸಹಜ ಕುತೂಹಲದಿಂದ ಪ್ರಾರಂಭವಾಗಿ ನಂತರ ಹವ್ಯಾಸವಾಗಿ ಇದೀಗ ಸಣ್ಣ ಪ್ರಮಾಣದ  ಉದ್ಯಮವನ್ನು ಕೇವಲ 18ರ ವಯಸ್ಸಿನಲ್ಲಿ ಮಾಡುತ್ತಿದ್ದಾನೆ.
ಪ್ರಾರಂಭದಲ್ಲಿ  ಬೇರೆ ಕಡೆಯಿಂದ  ಖರೀದಿಸುವ  ಒಂದು ಡ್ರೋನಿನ ಬೆಲೆ ಕನಿಷ್ಟ ಅಂದರೂ ಸುಮಾರು  ರೂ.ಒಂದೂವರೆ ಲಕ್ಷದ ಮೇಲಿತ್ತು. ಅದೇ ವಿವಿಧ ರೀತಿಯ  ಉಪಕರಣಗಳನ್ನು ಖರೀದಿಸಿ ತಯಾರಿಸಿದಾಗ ಅದಕ್ಕೆ ಖಚಾ೯ಗಿದ್ದು 32 ಸಾವಿರ ರೂ ಮಾತ್ರ  ಡ್ರೋನಿನ ತಯಾರಿ ಜೊತೆಗೆ ರಿಪೇರಿಯನ್ನೂ ಕಲಿತುಕೊಂಡುಊರ /ಪರ ಊರಿನ ಛಾಯಾಗ್ರಾಹಕರುಗಳಿಗೆಮುಂಬೈಯ ಕೆಲವು ಸಿನಿಮಾ ತಯಾರಿಕೆಯವರಿಂದಲೂ ಬೇಡಿಕೆ ಬರುತ್ತಿರುವುದು ಅಭಿನಂದನೀಯ ವಿಷಯ .ದ್ವಿತೀಯ ಪಿ.ಯು.ಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸ್ ಆಗಿರುತ್ತಾನೆ.
 *ಮುಂದಿನ ಗುರಿ* :-
 ಮಣಿಪಾಲದಲ್ಲಿ ಏರೋನಾಟಿಕ್ಸ್ ಇಂಜಿನಿಯರಿಂಗ್ ಕಲಿಯುವ ಆಸೆ ಇದೆ.. 
Earn while learn ಎಂಬ ಮಾತಿನಂತೆ ಕಲಿಕೆಯ ಜೊತೆಗೆ ವೀಡಿಯೋ, ರೇಸಿಂಗ್ ಡ್ರೋನುಗಳ ತಯಾರಿ ಜೊತೆಗೆ ವಸ್ತುಗಳ ಸಾಗಾಟ, ಕೃಷಿ ಚಟುವಟಿಕೆಗಳಿಗೆ  ಅನುಕೂಲವಾಗುವ ಕಸ್ಟಮೈಸ್ಡ್ ಡ್ರೋನ್ ಗಳನ್ನೂ ಗ್ಲೆನ್ ತಯಾರಿಸಿ ಕೊಡುತ್ತಾನೆ. ಮುಂದೆ ಈ ಆನ್ವೇಷನೆಯನ್ನು ಸಕಾ೯ರಕ್ಕೆ ಸಲ್ಲಿಸಬೇಕೆನ್ನುವ ಹಂಬಲ ಅವನಿಗಿದೆ .ನನ್ನ ಸಾಧನೆಯ ಹಿಂದೆ ನನ್ನ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಹಾರೈಕೆ ಇದೆ. ನಾನು ವಿಜ್ಞಾನ ವಿದ್ಯಾಥಿ೯ಯಾಗಿದ್ದರೂ ನನಗೆ 14 ದಿನ ರಜೆಯಲ್ಲಿ ಟಿ.ಸಿ.ಎಸ್ ನಲ್ಲಿ ನಡೆದ ವಿಜ್ಞಾನ ಕುರಿತ ವಿಶೇಷ ಕಾಯಾ೯ಗಾರದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು. ನನ್ನ ಹೆತ್ತವರು ಕೂಡ ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದರ ಫಲವಾಗಿ ನನಗೆ ಈ ಕ್ಷೇತ್ರದಲ್ಲಿ ಸಣ್ಣ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಬಹಳ ಕೃತಜ್ಞತೆಯಿಂದ ಹೇಳುತ್ತಾನೆ.
ನಾನು ಹೊಸತನ್ನು ಸಂಶೋಧನೆ ಮಾಡಿಲ್ಲ. ಇರುವ ತಂತ್ರಜ್ಞಾನವನ್ನು ಸರಿಯಾದ ದಾರಿಯಲ್ಲಿ ಬಳಸುತ್ತಿದ್ದೇನೆ ಎಂದು ಆತನ ನುಡಿ – ಮುಂದೆಯೂ ಕೂಡ ನನ್ನ ಹೊಸತನ್ನು  ಸಂಶೋಧಿಸುವ ಪ್ರಯತ್ನ ನಿಲ್ಲದು ಅದು ನಿರಂತರವಾಗಿ ನಡೆಯುತ್ತದೆ ಎಂದು ಹೇಳುತ್ತಾನೆ. ಈ ಚಿಗುರು ಮೀಸೆಯ ಹುಡುಗ.
ಡ್ರೋನ್ ಹಾರಾಟದಲ್ಲಿನ ಕಾರ್ಯಕ್ಷಮತೆ ಯನ್ನು ಮನಗಂಡ ಒಂದು ಸಂಸ್ಥೆಯವರು ಮುಂಬೈಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸಿದ ಅನುಭವ ಅತನಿಗಿದೆ. ಈ ಸಣ್ಣಪ್ರಾಯದಲ್ಲೇ ಸಾಧನೆ ಜೊತೆಗೆ ಸಂಪಾದನೆ ಮಾಡುತ್ತಿರುವ ತನ್ನ ಮುದ್ದು ಮಗನ ಬಗ್ಗೆ ತಾಯಿ ಗ್ಲ್ಯಾಡಿಸ್ ರೆಬೆಲ್ಲೋಗೆ ಬಹಳ ಹೆಮ್ಮೆ ಇದೆ. ಸಾಮಾನ್ಯವಾಗಿ ಇಂಜಿನಿಯರಿಂಗ್  ವಿದ್ಯಾರ್ಥಿಗಳಿಗೂ ಸುಲಭದಲ್ಲದ ಈ ಕಾಯ೯ವನ್ನು ತನ್ನ ಪಿಯುಸಿಯಲ್ಲಿ ಮಾಡಿರ ಈತನ ಸಾಧನೆ ಎಲ್ಲಾ ವಿದ್ಯಾಥಿ೯ಗಳಿಗೂ ಮಾದರಿಯಾಗಿದೆ.
 ಈತನ ಸಾಧನೆಗೆ ಬೇಕಿದೆ ಬೆಂಬಲ:-
ಮಾತಿನಂತೆ ನನಗೆ ಇದರಲ್ಲಿ ಹಣ ಮಾಡಬೇಕೆಂಬ ಮನಸ್ಸಿಲ್ಲ ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಿ ಜನರಿಗೆ ಸುಲಭವಾಗಿ ಡ್ರೋನ್ ಸಿಗಬೇಕೆಂಬ ಹಂಬಲವಿದೆ.ಈ ವಿದ್ಯಾಥಿ೯ಯ ಮಾತು ಕೇಳಿದಾಗ ನಮಗೆ ಅನಿಸುವುದು ಇಷ್ಟೇ ಈ ವಿಶೇಷ ಪ್ರತಿಭೆಯನ್ನು ಬೆಳೆಸಬೇಕು.ಡ್ರೋನ್ ನಲ್ಲಿ ಮತ್ತಷ್ಟು ಸಂಶೋಧನೆಗೆ ಈ ರೀತಿಯ ವ್ಯಕ್ತಿಗಳನ್ನು ಬಳಸಿಕೊಂಡು ಗ್ರಾಮೀಣ ಭಾಗಕ್ಕೆ ಅಭಿವೃದ್ಧಿ ಮಾಡಲು ಸಾಧ್ಯವಾಗಬಹುದು.
ಕಲಿಕೆಯೊಂದಿಗೆ ಗಳಿಕೆ :- ತತ್ವವನ್ನು ಎಲ್ಲಾ ಕಾಲೇಜುಗಳಲ್ಲಿ ಅಳವಡಿಸಿಕೊಂಡರೆ ಸಮಾಜದ ಅದೇ ರೀತಿ ವ್ಯಕ್ತಿಯ ವ್ಯಕ್ತಿತ್ವ ವಿಕಸನ ಸಾಧ್ಯವಾಗಬಹುದು. ಈ ಬಗ್ಗೆ ಕಾಲೇಜುಗಳು ಯೋಚನೆ ಮಾಡಬೇಕು. ಮಂಗಳೂರಿನಲ್ಲಿ ಈ ರೀತಿಯ ಕಾಲೇಜು ಪ್ರಾರಂಭವಾಗಿರುವುದು ಶುಭ ಸೂಚನೆ . ಕರೋನಾ ದ ಈ ಸಮಯದಲ್ಲಿ ಭಾರತ ಆತ್ಮ ನಿಭ೯ರ ವಾಗಬೇಕು ಈ ರೀತಿಯ ಗ್ರಾಮೀಣ ಯುವ ಪ್ರತಿಭೆಗಳಿಗೆ ಅವಕಾಶ ಸಿಗಬೇಕು.ಸರಕಾರ, ವಿವಿಧಿ ಸಂಘ ಸಂಸ್ಥೆಗಳು , ಮಾಧ್ಯಮಗಳು ಇಂತಹ ಸಹಜ ಸತ್ಯವಾದ ಯುವ  ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸ ಬೇಕಾಗಿದೆ ಇದರಿಂದ ಆತನ ಪ್ರತಿಭೆ ಅಂತ ರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯವಾಗಬಹುದಾಗಿದೆ. ಪ್ರಧಾನಿಯವರು ಹೇಳಿದಂತೆ ಆತ್ಮ ನಿಭ೯ರ ಭಾರತ ದ ನಿಮಾ೯ಣ ಮಾಡುವಲ್ಲಿ ಈ ರೀತಿಯ ವಿದ್ಯಾಥಿ೯ಗಳಿಂದ  ಸಾಧ್ಯ. ಈತನ ಪ್ರತಿಭೆಯ ಕುರಿತು ಜನಪ್ರತಿನಿಧಿಗಳು ಬೆಂಬಲ ನೀಡಬೇಕು ಆತನ
 

Leave a Reply